ವಿದ್ಯಾರ್ಥಿಯ ಭವಿಷ್ಯಕ್ಕೆ ಕೊಳ್ಳಿ ಇಟ್ಟ ಅಧಿಕಾರಿ: ದಸಂಸ ಪ್ರತಿಭಟನೆ

| Published : Dec 24 2024, 12:49 AM IST

ವಿದ್ಯಾರ್ಥಿಯ ಭವಿಷ್ಯಕ್ಕೆ ಕೊಳ್ಳಿ ಇಟ್ಟ ಅಧಿಕಾರಿ: ದಸಂಸ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ವಿಜಯಪುರದಲ್ಲಿ ನಡೆದ ರಾಜ್ಯಮಟ್ಟದ ಪದವಿಪೂರ್ವ ವಾಲಿಬಾಲ್ ಪಂದ್ಯಾಟದಲ್ಲಿ ಭಾಗವಹಿಸಿ, ಕರ್ನಾಟಕ ರಾಜ್ಯ ತಂಡಕ್ಕೆ ಆಯ್ಕೆಯಾಗಿದ್ದ ಕಾರ್ಕಳ ತಾಲೂಕು ಬೈಲೂರಿನ ಸುಜಿತ್ ಮತ್ತು ಜಸೀರ ಎಂಬವರನ್ನು ರಾಜಕೀಯ ನಾಯಕರ ಒತ್ತಡಕ್ಕೆ ಕಟ್ಟುಬಿದ್ದು ಅಧಿಕಾರಿಗಳು ರಾಜ್ಯ ತಂಡದಿಂದ ಹೊರಕ್ಕೆ ಹಾಕಿದ್ದಾರೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ, ಅಂಬೇಡ್ಕರ್ ವಾದ ಉಡುಪಿ ಜಿಲ್ಲೆ ವತಿಯಿಂದ ಉಡುಪಿ ಅಜ್ಜರಕಾಡು ಹತಾತ್ಮರ ಚೌಕದಲ್ಲಿ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಪ್ರತಿಭಟನೆಯಲ್ಲಿ ಮಾತಾಡಿದ ರಾಜ್ಯ ಸಂಘಟನಾ ಸಂಚಾಲಕ ಸುಂದರ್ ಮಾಸ್ತರ್, ಅಧಿಕಾರಿಗಳ ದಲಿತ-ಅಲ್ಪ ಸಂಖ್ಯಾತ ವಿರೋಧಿ ನಡೆಯನ್ನು ಖಂಡಿಸಿದರು. ಜಿಲ್ಲಾ ಪ್ರಧಾನ ಸಂಚಾಲಕ ಮಂಜುನಾಥ ಗಿಳಿಯಾರು, ಜಿಲ್ಲಾ ಸಂಘಟನಾ ಸಂಚಾಲಕ ಶಾಮ್ ರಾಜ್ ಬಿರ್ತಿ, ಜನಪರ ಚಿಂತಕ ಪ್ರೊ. ಫಣಿರಾಜ್ ಮತ್ತು ಹುಸೇನ್ ಕೋಡಿಬೆಂಗ್ರೆ ಮಾತಾಡಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಸಂಘಟನಾ ಸಂಚಾಲಕರಾದ ಸುರೇಶ್ ಹಕ್ಲಾಡಿ, ಅಣ್ಣಪ್ಪ ನಕ್ರೆ, ಶಾಮಸುಂದರ ತೆಕ್ಕಟ್ಟೆ, ರಾಜೇಂದ್ರನಾಥ್, ಮಂಜುನಾಥ ನಾಗೂರು, ರಾಜು ಬೆಟ್ಟಿನಮನೆ, ಶಿವರಾಜ್ ಬೈಂದೂರ್, ಮಂಜುನಾಥ ಬಾಳ್ಕುದ್ರು, ಬಾಸ್ಕರ ನಿಟ್ಟೂರು, ಹರಿಶ್ಚಂದ್ರ ಕೆ.ಡಿ., ಶಿವಾನಂದ ಬ್ರಹ್ಮಾವರ ಮತ್ತು ಇತರರು ಉಪಸ್ಥಿತರಿದ್ದರು.