ಅಧಿಕಾರಿಗಳ ಅಸಡ್ಡೆ; ವ್ಯರ್ಥವಾಗಿ ಹರಿದ ಜೀವಜಲ!

| Published : Mar 30 2024, 12:51 AM IST

ಸಾರಾಂಶ

ದಾವಣಗೆರೆ ಹೊರ ವಲಯದ ಶಿರಮಗೊಂಡನಹಳ್ಳಿ ಕೆಳ ಸೇತುವೆ ಬಳಿ ಗಂಟೆಗಟ್ಟಲೇ ಮುಖ್ಯ ಪೈಪ್‌ ಲೈನ್‌ನಿಂದ ನೀರು ಹರಿದು ವ್ಯರ್ಥವಾಗಿ ಹರಿದು ಕುಡಿಯುವ ನೀರು ಭಾರೀ ಪ್ರಮಾಣದಲ್ಲಿ ಪೋಲಾಗಿದೆ.

ಕನ್ನಡಪ್ರಭ ವಾರ್ತೆ, ದಾವಣಗೆರೆತೀವ್ರ ಬರ ಆವರಿಸಿರುವ ಸಂಕಷ್ಟದ ಸಮಯದಲ್ಲಿ ಒಂದು ಕೊಡ ನೀರಿಗೂ ಜನ ಪರದಾಡುತ್ತಿದ್ದರೆ ಮಹಾ ನಗರ ಪಾಲಿಕೆ ಅಧಿಕಾರಿಗಳು ಗಂಟೆಗಟ್ಟಲೇ ಮುಖ್ಯ ಪೈಪ್‌ ಲೈನ್‌ನಿಂದ ನೀರು ಹರಿದು, ವ್ಯರ್ಥವಾಗುತ್ತಿದ್ದರೂ ತಕ್ಷಣಕ್ಕೆ ಸ್ಪಂದಿಸದೇ ಅಸಡ್ಡೆ ತೋರಿದ ಘಟನೆ ನಗರದ ಹೊರ ವಲಯದ ಶಿರಮಗೊಂಡನಹಳ್ಳಿ ಕೆಳ ಸೇತುವೆ ಬಳಿ ಶುಕ್ರವಾರ ರಾತ್ರಿ ವರದಿಯಾಗಿದೆ.

ನಗರದಿಂದ ಶಿರಮಗೊಂಡನಹಳ್ಳಿ-ರಾಷ್ಟ್ರೀಯ ಹೆದ್ದಾರಿಗೆ ನಿರ್ಮಿಸಿರುವ ಸೇತುವೆ ಬಳಿ ಶುಕ್ರವಾರ ರಾತ್ರಿ 8.30ರಿಂದ ರಾತ್ರಿ 10 ಗಂಟೆವರೆಗೂ ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಕಾಲ ಅಪಾರ ಪ್ರಮಾಣದ ನೀರು ಹರಿದು ವ್ಯರ್ಥವಾಗಿದೆ. ಇಲ್ಲಿನ ರಂಗನಾಥ ಬಡಾವಣೆಗೆ ನೀರು ಪೂರೈಸುವ ಮುಖ್ಯ ಪೈಪ್‌ ಒಡೆದಿದ್ದರಿಂದಲೇ ನೋಡ ನೋಡುತ್ತಿದ್ದಂತೆ ಲೋಕಿಕೆರೆ-ಶಿರಮಗೊಂಡನಹಳ್ಳಿ ಕ್ರಾಸ್‌ನಿಂದ ಸೇತುವೆ ಕಡೆಗೆ ಹೋಗುವ ಚಂದ್ರು ಬಾರ್ ಕಡೆಗೆ 3-4 ಕಡೆ ಕಿರು ಜಲಪಾತದಿಂದ ಮೇಲಿನಿಂದ ಶುದ್ಧ ನೀರು ಸೋರಿಕೆಯಾಗಿ, ರಸ್ತೆಗೆ ಹರಿಯ ತೊಡಗಿದೆ. ತಕ್ಷಣವೇ ಅದನ್ನು ಗಮನಿಸಿದ ವಿಶ್ವ ಕರವೇ ಜಿಲ್ಲಾಧ್ಯಕ್ಷ ಬಾಬುರಾವ್ ಸುತ್ರಾವೆ ಪಾಲಿಕೆ ಇಂಜಿನಿಯರ್‌, ಅಧಿಕಾರಿಗಳು ಸ್ಪಂದಿಸಿಲ್ಲ: ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಕಾಲ ರಸ್ತೆಗೆ ವ್ಯರ್ಥವಾಗಿ ನೀರು ಹರಿಯುತ್ತಿರುವುದನ್ನು ಗಮನಿಸಿದ ದಾರಿ ಹೋಕರು, ಸ್ಥಳದಲ್ಲಿದ್ದವರು ತಮಗೆ ಪರಿಚಯಸ್ಥರ ಪಾಲಿಕೆ ಸದಸ್ಯರು, ಅಧಿಕಾರಿಗಳು, ವಾಟ್ಸಪ್‌ ಗಳಿಗೆ ಫೋಟೋ, ವೀಡಿಯೋಗಳನ್ನು ಕಳಿಸಿ, ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ಈ ವಿಚಾರವನ್ನು ತಂದು, ನೀರು ವ್ಯರ್ಥವಾಗುವುದನ್ನು ತಡೆಯುವಂತೆ ಮನವಿ ಮಾಡಿದರು. ಬಡವ, ಬಲ್ಲಿದರೆನ್ನದೇ ಎಲ್ಲರಿಗೂ ನೀರಿನ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ. ಕೆಲ ಹೊತ್ತಿನ ಪಾಲಿಕೆ ವಾಲ್ವ್‌ಮನ್ ಎನ್ನಲಾದ ವ್ಯಕ್ತಿ ಅಲ್ಲಿಗೆ ಬಂದು, ಅದು ವ್ಯರ್ಥವಾಗಿ ಹರಿಯುವ ನೀರು ಎಂಬುದಾಗಿ ನೀರು ಸೋರಿಕೆಯಾಗುತ್ತಿರುವುದಕ್ಕೆ ಸಮಜಾಯಿಸಿ ನೀಡಲು ಪ್ರಯತ್ನಿಸಿದ್ದಾರೆ. ಆಗ ಬಾಬುರಾ ವ್ ಸುತ್ರಾವೆ ಇತರರು ಒಂದು ಕೊಡ ನೀರೇ ಸಿಗುವುದು ಕಷ್ಟವಾಗಿದೆ. ಅಂತಹದ್ದರಲ್ಲಿ ಇದು ವ್ಯರ್ಥ ನೀರು ಎನ್ನುತ್ತೀಯಲ್ಲಪ್ಪಾ? 5-10 ನಿಮಿಷ ಇರು, ಮಾಧ್ಯಮದವರು ಬರುತ್ತಿದ್ದಾರೆಂದು ಹೇಳುತ್ತಿದ್ದಂತೆ ಪಾಲಿಕೆ ಅಧಿ

ಕಾರಿಗಳು, ಸಿಬ್ಬಂದಿ ನಿರ್ಲಕ್ಷ್ಯ ಮರೆ ಮಾಚಿಕೊಳ್ಳಲು ಬಂದ ವ್ಯಕ್ತಿ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಗಂಟೆಗಟ್ಟಲೇ ವ್ಯರ್ಥವಾಗಿ ಸುರಿದ ನೀರನ್ನು ಕಂಡ ಜನರು ಅಧಿಕಾರಿಗಳ ಅಸಡ್ಡೆಗೆ ಹಿಡಿಶಾಪ ಹಾಕಿದರು. ಕನಿಷ್ಟ ತುರ್ತು ಪರಿಸ್ಥಿತಿಯಲ್ಲಿ ಸಾರ್ವಜನಿಕರು ಕರೆ ಮಾಡಿದರೂ ಕರೆ ಸ್ವೀಕರಿಸದಷ್ಟು ಬೇಜವಾಬ್ಧಾರಿತನ ತೋರುವ ಅಧಿಕಾರಿಗಳ ವಿರುದ್ಧ ಜಿಲ್ಲಾಡಳಿತ ಮೊದಲು ಕ್ರಮ ಕೈಗೊಳ್ಳಲಿ. ಭದ್ರಾ ನಾಲೆಗೆ ನೀರು ಬಿಟ್ಟರೂ ಕೊನೆ ಭಾಗಕ್ಕೆ ನೀರು ಕೊಡಲು, ಟಿವಿ ಸ್ಟೇಷನ್ ಮತ್ತು ಕುಂದುವಾಡ ಕೆರೆ ತುಂಬಿಸಿಕೊಳ್ಳಲು ಆಡಳಿತ ಯಂತ್ರ ಪರದಾಡುತ್ತಿದ್ದರೆ ಇಂತಹ ಬೇಜವಾಬ್ದಾರಿ ಅಧಿಕಾರಿಗಳಿಂದ ನೂರಾರು ಮನೆಗಳಿಗೆ ಸಿಗಬೇಕಿದ್ದ ನೀರು ಪೋಲಾಗಿದೆಯೆಂಬ ಅಸಮಾಧಾನ ಜನರಿಂದ ವ್ಯಕ್ತವಾಯಿತು.