ಸಾರಾಂಶ
ಕನ್ನಡಪ್ರಭ ವಾರ್ತೆ ಸಕಲೇಶಪುರ
ಸರ್ಕಾರಿ ಅಧಿಕಾರಿಗಳಿಗೆ ತಮ್ಮ ಇಲಾಖೆಯ ವ್ಯಾಪ್ತಿಯ ಮಾಹಿತಿ ಕೊರತೆ ಕಾಡುತ್ತಿರುವುದು ತಾಲೂಕು ಮಟ್ಟದ ತ್ರೈಮಾಸಿಕ ಸಭೆಯಲ್ಲಿ ಕಂಡುಬಂದಿತು.
ಸಭೆಯ ಆರಂಭದಲ್ಲಿ ಮಾತನಾಡಿದ ತಾಲೂಕು ಪಂಚಾಯ್ತಿ ನಾಮನಿರ್ದೇಶಕ ಹಾನುಬಾಳ್ ಬಾಸ್ಕರ್ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡ ದುಸ್ಥಿತಿಗೀಡಾಗಿದ್ದು, ಅನಾಹುತ ಸಂಭವಿಸುವ ಮುನ್ನ ನೆಲಸಮಗೊಳಿಸ ಬೇಕಿದೆ ಎಂದರು. ಇದಕ್ಕೆ ಉತ್ತರಿಸುವಂತೆ ಶಾಸಕ ಸಿಮೆಂಟ್ ಮಂಜು, ಜಿಪಂ ಎಇಇ ಲಖನ್ ಸಿಫಾನಿ ಅವರಿಗೆ ಸೂಚಿಸಿದರು. ಶಾಲಾ ಕಟ್ಟಡ ನೆಲಸಮಗೊಳಿಸುವ ಕೆಲಸ ಲೋಕೋಪಯೋಗಿ ಇಲಾಖೆಗೆ ಸೇರಿದ್ದು ಎಂದರು. ಈ ವೇಳೆ ಲೋಕೋಪಯೋಗಿ ಇಲಾಖೆ ಎಇಇ ಮುರುಗೇಶ್ ಶಾಲಾ ಕಟ್ಟಡ ನೆಲಸಮ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದರು. ಇದಕ್ಕೆ ಸಿಟ್ಟಾದ ಶಾಸಕ ತಮ್ಮಇಲಾಖೆಯ ವ್ಯಾಪ್ತಿ ನಿಮಗೆ ತಿಳಿದಿಲ್ಲವ ಎಂದರು.
ಈ ವೇಳೆ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಅಧಿಕಾರಿ ಗಂಗಾಧರ್, ಶಾಲಾ ಕಟ್ಟಡ ನೆಲಸಮಗೊಳಿಸುವುದು ಸಂಬಂಧಪಟ್ಟ ಶಾಲಾ ಮಂಡಳಿಯದ್ದು, ಶಾಲಾ ಗುಣಮಟ್ಟದ ಬಗ್ಗೆ ಜಿ.ಪಂ ಎಂಜಿನಿಯರ್‌ಗಳಿಂದ ವರದಿ ತರಿಸಿಕೊಂಡು ಕಟ್ಟಡದಲ್ಲಿನ ಪರಿಕರಗಳನ್ನು ಹರಾಜುಗೊಳಿಸಿ ಈ ಹಣದಲ್ಲಿ ಶಾಲಾ ಕಟ್ಟಡಗಳನ್ನು ನೆಲಸಮಗೊಳಿಸಬೇಕು ಎಂಬ ಸ್ಪಷ್ಟನೆ ನೀಡಿದರು.ಇನ್ನೂ ಜಿಪಂ ಎಇಇ ಸಭೆಯಲ್ಲಿ ಮತ್ತೊಮ್ಮೆಇಲಾಖೆಯ ಬಗ್ಗೆ ತಮಗಿರುವ ಅಜ್ಞಾನ ಪ್ರದರ್ಶಿಸಿದ್ದು ನರೇಗಾ ಕೆಲಸಕ್ಕೆ ತಮ್ಮ ಇಲಾಖೆಗೆ ಮುಂಗಡ ಪಾವತಿಸಬೇಕು ಎಂದರು. ನರೇಗಾ ಕೆಲಸಕ್ಕೆ ಮುಂಗಡ ಕಟ್ಟಬೇಕಿಲ್ಲ ರೀ ಎಂದು ಖಾರವಾಗಿಯೆ ತಾಪಂ ಇಒ ಗಂಗಾಧರ್ ಹೇಳಿದರು. ಮಧ್ಯ ಪ್ರವೇಶಿಸಿದ ಶಾಸಕ ಏಕ್ರೀ ಸುಮ್ಮನೆ ಇಲ್ಲದ ಕಾರಣ ಹೇಳಿಕೊಂಡು ಅಭಿವೃದ್ಧಿ ಕೆಲಸಗಳನ್ನು ವಿಳಂಬ ಮಾಡುತ್ತಿರಿ ಮೊದಲು ತಮ್ಮಇಲಾಖೆಯ ನಿಯಮಗಳನ್ನು ತಿಳಿದುಕೊಳ್ಳಿ ಎಂದು ಸಲಹೆ ನೀಡಿದರು.
ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಮಷಿನ್ ದುಸ್ಥಿತಿಗೆ ಈಡಾಗಿದೆ ಎಂದು ಕ್ರಾಫರ್ಡ್ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಅರುಣ್ ಕುಮಾರ್ ಹೇಳಿದರು. ಈ ವೇಳೆ ಮಾತನಾಡಿದ ಶಾಸಕ, ರೇಡಿಯಾಲಜಿ ವೈದ್ಯರ ನೇಮಕವಾದ ನಂತರ ಯಂತ್ರಕೆಟ್ಟು ಹೋಗಿದೆ ಹೀಗಾದರೆ ಹೇಗೆ ಖಾಸಗಿ ಲ್ಯಾಬ್‌ಗೆ ಕಳುಹಿಸುವ ಉದ್ದೇಶ ಇದರಲ್ಲಿ ಅಡಗಿದೆಯ, ಸ್ಕ್ಯಾನಿಂಗ್ ಮಿಷನ್ ಆಸ್ಪತ್ರೆಗೆ ತಂದು ೧೦ ವರ್ಷಗಳಾಗಿದೆ. ಇದರಲ್ಲಿ ೧೦ ಸ್ಕ್ಯಾನಿಂಗೂ ಮಾಡಲಾಗಿಲ್ಲ ಈಗ ದುಸ್ಥಿಗೀಡಾಗಿದೆ ಎಂದರೆ ಹೇಗೆ ಎಂದರು. ಇದಕ್ಕೆ ಉತ್ತರಿಸಿದ ವೈದ್ಯಾಧಿಕಾರಿ ಆಸ್ಪತ್ರೆಯಲ್ಲಿ ವಿದ್ಯುತ್ ಏರಿಳಿತವೇ ಯಂತ್ರಗಳು ಹಾನಿಗೀಡಾಗಲು ಕಾರಣವಾಗಿದೆ ಎಂದರು.ಈ ವೇಳೆ ಮಧ್ಯೆ ಪ್ರವೇಶಿಸಿದ ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ಮುರುಳಿ ಮೋಹನ್, ಆಸ್ಪತ್ರೆಯಲ್ಲಿ ಖಾಸಗಿ ಆಂಬ್ಯುಲೆನ್ಸ್ ಹಾವಳಿ ಅತಿಯಾಗಿದ್ದು ಜಿಲ್ಲಾಸ್ಪತ್ರೆಗೆ ಶಿಫಾರಸು ಮಾಡುವ ರೋಗಿಗಳನ್ನು ಹಾಸನದ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯುವ ಮೂಲಕ ರೋಗಿಗಳ ಜೀವ ಹಿಂಡಲಾಗುತ್ತಿದೆ. ಆಸ್ಪತ್ರೆ ಎದುರಿನ ರಸ್ತೆಯಲ್ಲಿ ಆ್ಯಂಬುಲೆನ್ಸ್ ಹಾವಳಿ ಹೆಚ್ಚಿರುವುದರಿಂದ ವಾಹನಗಳು ಸರಾಗವಾಗಿ ಸಂಚರಿಸಲು ಸಾಧ್ಯವಿಲ್ಲದಾಗಿದೆ. ಆ್ಯಂಬುಲೆನ್ಸ್‌ಗೆ ಜಿಪಿಎಸ್ ಅಳವಡಿಸಬೇಕು ಹಾಗೂ ಆಸ್ಪತ್ರೆ ಮುಂಭಾಗ ಆ್ಯಂಬುಲೆನ್ಸ್ ನಿಲುಗಡೆ ನಿಷೇಧಕ್ಕೆ ನಿರ್ಣಯ ಕೈಗೊಳ್ಳಬೇಕು ಎಂದರು. ಯಸಳೂರು ವಲಯ ಅರಣ್ಯಾಧಿಕಾರಿ ಪ್ರತಿಯೊಂದು ಅಭಿವೃದ್ಧಿ ಕಾರ್ಯಗಳಿಗೂ ಅಡ್ಡಿಪಡಿಸುತ್ತಿದ್ದಾರೆಂಬ ಆರೋಪ ಕೇಳಿ ಬಂದಿತು. ಈ ವೇಳೆ ಮಾತನಾಡಿದ ವಲಯ ಅರಣ್ಯಾಧಿಕಾರಿ ನಿಯಮದಂತೆ ಕೆಲಸ ಮಾಡಲಾಗುತ್ತಿದೆ. ದೂರುಗಳನ್ನು ಶೀಘ್ರವೇ ಪರಿಹರಿಸಲಾಗುತ್ತದೆ ಎಂದರು. ಇದಕ್ಕೆ ಮಾತನಾಡಿದ ಶಾಸಕ ಮಂಜು ಅಭಿವೃದ್ಧಿ ಕಾಮಗಾರಿ ಯಾರ ಸ್ವಂತಕ್ಕೂ ಮಾಡುತ್ತಿಲ್ಲ, ಕುಡಿಯುವ ನೀರಿನ ಕಾಮಗಾರಿಗೂ ಅಭಿವೃದ್ಧಿಪಡಿಸುವುದು ಎಂದರೆ ಏನರ್ಥ ಎಂದರು. ಈ ಮಧ್ಯೆ ಪ್ರವೇಶಿಸಿದ ಅನುಷ್ಠಾನ ಸಮಿತಿ ಅಧ್ಯಕ್ಷ ಜನರಿಗೆ ಅಗತ್ಯವಿರುವ ಅಭಿವೃದ್ಧಿ ಕಾಮಗಾರಿ ನಡೆಸುವ ವೇಳೆ ಕೆಲವೊಂದು ನಿಯಮಗಳನ್ನು ಸರಳೀಕರಣಿಗೊಳಿಸುವ ಮೂಲಕ ಕಾಮಗಾರಿಗೆ ಅವಕಾಶ ನೀಡಿ ಎಂದು ಸಲಹೆ ನೀಡಿದರು. ನೂರಾರು ವರ್ಷಗಳಿಂದ ಇರುವ ರಸ್ತೆಗಳ ಮೇಲೆ ಅರಣ್ಯ ಇಲಾಖೆ ಈ ಜಮೀನು ಅರಣ್ಯ ಇಲಾಖೆಗೆ ಸೇರಿದೆ ಎಂಬ ನಾಮಫಲಕ ಹಾಕುತ್ತಿದ್ದಾರೆ. ಇದರಿಂ ಗ್ರಾಮಸ್ಥರು ಸಮಸ್ಯೆ ಎದುರಿಸುವಂತಾಗಿದೆ ಎಂದು ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ವೈ.ಪಿ ರಾಜೇಗೌಡ ದೂರಿದರು.* ಬಾಕ್ಸ್: ಅಧಿಕಾರಿಗಳು ತಬ್ಬಿಬ್ಬು:
ಸಭೆಯ ಆರಂಭದಿಂದಅಂತ್ಯದವರಗೆ ಅನುಷ್ಠಾನ ಸಮಿತಿ ಅಧ್ಯಕ್ಷರು ಪ್ರತಿಯೊಂದು ಇಲಾಖೆಯ ವಿಚಾರದಲ್ಲೂ ಅಧಿಕಾರಿಗಳಿಂದ ಸ್ವಷ್ಟನೆ ಬಯಸುತ್ತಿದ್ದಲ್ಲದೆ ಸಲಹೆಯನ್ನು ನೀಡುತ್ತಿದ್ದರು. ಇತ್ತ ಶಾಸಕರು ಸಹ ಸಮಸ್ಯೆಗಳ ಬಗ್ಗೆ ಪ್ರಶ್ನೆಗಳನ್ನೆತ್ತುದ್ದಲ್ಲದೆ, ಸಲಹೆ ನೀಡುತ್ತಿದ್ದರು. ಇದರಿಂದಾಗಿ ಅಧಿಕಾರಿಗಳು ಇಬ್ಬರಿಗೂ ಉತ್ತರ ನೀಡ ಬೇಕಾಗಿದ್ದಲ್ಲದೆ ಇಬ್ಬರಿಂದಲೂ ಸಲಹೆಗಳನ್ನು ಸ್ವೀಕರಿಸಬೇಕಾದ ಅನಿವಾರ್ಯತೆಗೆ ಸಿಲುಕಿದರು ಬೆಳಗೋಡು-ಈಶ್ವರಹಳ್ಳಿ ರಸ್ತೆಅಭಿವೃದ್ಧಿ ಸಂಬಂಧ ಶಾಸಕರು-ಗ್ಯಾರಂಟಿ ಅನುಷ್ಠಾನ ಸಮಿತಿಅಧ್ಯಕ್ಷರ ನಡುವೆವೈಮನುಸ್ಸು ಸೃಷ್ಟಿಯಾದ ಸನ್ನಿವೇಶ ಗೋಚರಿಸಿತ್ತು.ಈ ವೇಳೆ ಜಿ.ಪಂಯೋಜನಾ ನಿರ್ದೇಶಕ ಸಪೀರ್ ಆಹಮ್ಮದ್,ತಹಸೀಲ್ದಾರ್ ಸುಪ್ರೀತಾ,ಇಒಗಂಗಾದರ್ ಮುಂತಾದವರಿದ್ದರು.;Resize=(128,128))
;Resize=(128,128))