ಕಲುಷಿತ ನೀರು ಪೂರೈಕೆಗೆ ಅಧಿಕಾರಿಗ‍ಳ ನಿರ್ಲಕ್ಷ್ಯವೇ ಕಾರಣ: ಆರೋಪ

| Published : Sep 12 2025, 01:00 AM IST

ಕಲುಷಿತ ನೀರು ಪೂರೈಕೆಗೆ ಅಧಿಕಾರಿಗ‍ಳ ನಿರ್ಲಕ್ಷ್ಯವೇ ಕಾರಣ: ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಗುಡಿಸಾಗರ ಗ್ರಾಮದ ಕೆಲ ಗ್ರಾಮಸ್ಥರು ಕೆರೆಯ ನೀರು ಕುಡಿದು ವಾಂತಿ ಭೇದಿಯಿಂದ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಹಳ ವರ್ಷಗಳಿಂದ ಕೆರೆಯ ಹೂಳು ತೆಗೆದಿಲ್ಲ. ಕೆರೆಯ ಸುತ್ತ ಕಸ-ಕಂಠಿ ಬೆಳೆದಿದ್ದು ಸ್ವಚ್ಛತೆ ಇಲ್ಲ. ತಂತಿ ಬೇಲಿ ಹಾಕಿಲ್ಲ. ಕುಡಿಯುವ ನೀರಿನ ಬಗ್ಗೆ ಬೇಜವಾಬ್ದಾರಿ ತೋರಿದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ಮನವಿ.

ನವಲಗುಂದ: ತಾಲೂಕಿನ ಗುಡಿಸಾಗರ ಗ್ರಾಮದಲ್ಲಿ ಕೆರೆಯ ನೀರು ಕುಡಿದು ಗ್ರಾಮಸ್ಥರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, ಇದಕ್ಕೆ ಅಲ್ಲಿನ ಅಧಿಕಾರಿಗಳ ನಿರ್ಲಕ್ಷವೇ ಕಾರಣ ಎಂದು ಸಾಮಾಜಿಕ ಕಾರ್ಯಕರ್ತ ಮಾಬುಸಾಬ ಯರಗುಪ್ಪಿ ದೂರಿದ್ದಾರೆ.

ಈ ಕುರಿತು ಸಾರ್ವಜನಿಕರೊಂದಿಗೆ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದರು.

ಮಂಗಳವಾರ ಗುಡಿಸಾಗರ ಗ್ರಾಮದ ಕೆಲ ಗ್ರಾಮಸ್ಥರು ಕೆರೆಯ ನೀರು ಕುಡಿದು ವಾಂತಿ ಭೇದಿಯಿಂದ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಹಳ ವರ್ಷಗಳಿಂದ ಕೆರೆಯ ಹೂಳು ತೆಗೆದಿಲ್ಲ. ಕೆರೆಯ ಸುತ್ತ ಕಸ-ಕಂಠಿ ಬೆಳೆದಿದ್ದು ಸ್ವಚ್ಛತೆ ಇಲ್ಲ. ತಂತಿ ಬೇಲಿ ಹಾಕಿಲ್ಲ. ಕುಡಿಯುವ ನೀರಿನ ಬಗ್ಗೆ ಬೇಜವಾಬ್ದಾರಿ ತೋರಿದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ಮನವಿಯಲ್ಲಿ ಆಗ್ರಹಿಸಿದರು..

ಗುಡಿಸಾಗರ ಗ್ರಾಮದ ಕೆರೆಯ ನೀರು ಜೋಂಡು ಗಟ್ಟಿದ್ದು, ದನ ಕರುಗಳು ಕೆರೆಯಲ್ಲಿ ಹೋಗಿ ನೀರು ಕುಡಿಯುವುದು ಸಾಮಾನ್ಯವಾಗಿದೆ, ಈ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟು ನಿಂತಿವೆ. ಕೆರೆಯಲ್ಲಿರುವ ನೀರು ಹಚ್ಚ ಹಸಿರಾಗಿದ್ದೇ ಗ್ರಾಮಸ್ಥರ ಅನಾರೋಗ್ಯಕ್ಕೆ ಕಾರಣವಾಗಿದೆ. ಶುದ್ಧ ಕುಡಿಯುವ ನೀರು ಪೂರೈಸದ ಮಟ್ಟಿಗೆ ಸ್ಥಳೀಯ ಆಡಳಿತದ ವ್ಯವಸ್ಥೆ ಹದಗೆಟ್ಟು ಹೋಗಿದೆ ಎಂದು ಗಂಭೀರ ಆರೋಪ ಮಾಡಿದರು.

ಈ ಸಂದರ್ಭದಲ್ಲಿ ಕರವೇ ತಾಲೂಕು ಅಧ್ಯಕ್ಷ ಸಿರಾಜುದ್ದಿನ್ ಧಾರವಾಡ, ಮಹಮ್ಮದಲಿ ಮಿರ್ಜಿ, ಬಶೀರಅಹ್ಮದ ಹುನಗುಂದ ಉಪಸ್ಥಿತರಿದ್ದರು.