ಸಾರಾಂಶ
ಕುಣಿಗಲ್ : ತಾಲೂಕಿನ ಎಲ್ಲಾ ಗ್ರಾಪಂ ವ್ಯಾಪ್ತಿಯ ಅಧಿಕಾರಿಗಳು ಕಳೆದ ಮೂರು ದಿನಗಳಿಂದ, ತಮ್ಮ ಕಚೇರಿ ಕೆಲಸ ಬಿಟ್ಟು ಪ್ರತಿದಿನ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಪಟ್ಟಣದ ತಹಸೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದರೂ ಇದುವರೆಗೂ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅವರ ಸಮಸ್ಯೆಗಳನ್ನು ಕೇಳುತ್ತಿಲ್ಲ. ವಿಎಗಳಿಗೆ ವರ್ಗಾವಣೆ, ಶೌಚಾಲಯ, ಮುಂಬಡ್ತಿ, ಕುರ್ಚಿ, ಮೇಜು, ಹೀಗೆ ಕಚೇರಿಯ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅವರ ಸಮಸ್ಯೆಗೆ ಸ್ಪಂದಿಸುವ ಅಥವಾ ಅವರ ಹೋರಾಟವನ್ನು ಕೇಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ತಾಲೂಕಿನ ಹಲವಾರು ರೈತರು ತಮ್ಮ ಭೂ ಸಂಬಂಧ ಕೆಲಸಗಳು ಆಗುತ್ತಿಲ್ಲ, ನಮ್ಮ ಸಮಸ್ಯೆಗೆ ಯಾರು ಸ್ಪಂದಿಸಬೇಕು. ಪ್ರತಿದಿನ ವಿಎ ಗಳು ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಅಧಿಕಾರಿಗಳು ಅವರಿಗೆ ಯಾವುದೇ ರೀತಿಯ ಮನವೊಲಿಸುವ ಮತ್ತು ಅವರನ್ನು ಮಾತನಾಡಿಸುವ ಪ್ರಯತ್ನ ಮಾಡುತ್ತಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.