ಸಾರಾಂಶ
ಕನ್ನಡಪ್ರಭ ವಾರ್ತೆ ದೇವದುರ್ಗ
ಕೃಷಿ ಇಲಾಖೆ ಯೋಜನೆಗಳ ಕುರಿತು ರೈತರಲ್ಲಿ ಜಾಗೃತಿ ಮೂಡಿಸಬೇಕು. ರೈತರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸಬೇಕು ಎಂದು ಶಾಸಕಿ ಕರೆಮ್ಮ ಜಿ.ನಾಯಕ ಹೇಳಿದರು.ಪಟ್ಟಣದಲ್ಲಿ ₹2.4 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಸಹಾಯಕ ಕೃಷಿ ನಿರ್ದೇಶಕ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ಯಾವಾದು ಬೇಕಾದರೂ ಸಹಿಕೊಳ್ಳುತ್ತೇನೆ. ಆದರೆ ರೈತರಿಗೆ ಮೋಸ ಆಗಿದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಮುಲ್ಲಾಜಿಲ್ಲದೇ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಹೇಳಿದರು. ನೂತನ ಕಟ್ಟಡ ಸದ್ಭಳಿಸಿಕೊಂಡು, ನಿರ್ವಹಣೆಗೆ ಹೆಚ್ಚಿನ ಗಮನಹರಿಸಬೇಕು ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
ಈ ವೇಳೆ ಬಸವರಾಜ ವಕೀಲ ಗೌರಂಪೇಟೆ, ರಾಯಚೂರು ಜಂಟಿ ನಿರ್ದೇಶಕಿ ದೇವಿಕಾ ಆರ್. ಮಾತನಾಡಿದರು.ಇದೇ ಸಂದರ್ಭದಲ್ಲಿ ಶರಣಪ್ಪ ಬಳೆ, ಸಿದ್ದಣ್ಣ ಗಣೇಕಲ್, ಚಂದಪ್ಪ ಅಕ್ಕರಕಿ, ರಾಜಾರಂಗಪ್ಪ ನಾಯಕ, ದೊಡ್ಡರಂಗಣ್ಣ, ನಾಗರಾಜ ಪಾಟೀಲ್, ಗೋವಿಂದರಾಜ್ ನಾಯಕ, ಶೇಖಮುನ್ನಬೈ, ಹಾಜಿಸಾಬ್ ಮಸರಕಲ್, ಬಸವರಾಜ ಯರಮಸಾಳ, ಪ್ರಭಾರ ಸಹಾಯಕ ಕೃಷಿ ನಿರ್ದೇಶಕ ಶ್ರೀನಿವಾಸ ನಾಯಕ, ಶರಣಯ್ಯಸ್ವಾಮಿ ಸೇರಿದಂತೆ ಇತರರಿದ್ದರು.
ಇಲ್ಲಿನ ಸಹಾಕಯ ಕೃಷಿ ನಿರ್ದೇಶಕ ನೂತನ ಕಚೇರಿ ಉದ್ಘಾಟನೆ ಕಾರ್ಯಕ್ರಮಕ್ಕೆ ಶಾಸಕಿ ಕರೆಮ್ಮ ಆಗಮಿಸಿದರು.ಕಾರ್ಯಕ್ರಮ ಆಮಂತ್ರಣ ಕಾರ್ಡ್ ಇಲ್ಲ, ವೇದಿಕೆ ಅವ್ಯವಸ್ಥೆ ಕಂಡು ಪುರಸಭೆ ಮಾಜಿ ಅಧ್ಯಕ್ಷ ಚಂದಪ್ಪ ಅಕ್ಕರಕಿ ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ಸ್ವಲ್ಪವೊತ್ತು ಕಚೇರಿ ಒಳಗೆ ಮುಖಂಡರು, ಕಾರ್ಯಕರ್ತರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕೋಟ್ಯಾಂತರ ವೆಚ್ಚದ ನೂತನ ಕಟ್ಟಡ ಕಾರ್ಯಕ್ರಮ ಕಾಟಚಾರಕ್ಕೆ ಮಾಡಿದಂತಾಗಿದೆ ಎಂದು ಮುಖಂಡರು ರೇಗಾಡಿದರು.