ಅಧಿಕಾರಿಗಳು ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸಲಿ: ಶಾಸಕ ಜನಾರ್ದನ ರೆಡ್ಡಿ

| Published : Mar 07 2024, 01:48 AM IST

ಅಧಿಕಾರಿಗಳು ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸಲಿ: ಶಾಸಕ ಜನಾರ್ದನ ರೆಡ್ಡಿ
Share this Article
  • FB
  • TW
  • Linkdin
  • Email

ಸಾರಾಂಶ

ಆನೆಗೊಂದಿ ಗತವೈಭವ ಸಾರುವ ಐತಿಹಾಸಿಕ ಸ್ಥಳವಾಗಿದೆ. ನಾಡಿನ ನಾನಾ ಕಲಾವಿದರು ಸೇರಿದಂತೆ ಕಲಾವಿದರು ಆಗಮಿಸುತ್ತಿದ್ದು, ಅಧಿಕಾರಿಗಳು ಮುತುವರ್ಜಿ ವಹಿಸಬೇಕೆಂದರು.

ಗಂಗಾವತಿ: ಅಧಿಕಾರಿಗಳು ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸಿದರೆ ಆನೆಗೊಂದಿ ಯಶಸ್ವಿಯಾಗಲು ಸಾಧ್ಯ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.ವಿರೂಪಾಪುರಗಡ್ಡೆಯ ಅರಣ್ಯ ಇಲಾಖೆಯ ಪೂರ್ವಭಾವಿ ಸಭೆಯಲ್ಲಿ ಜರುಗಿದ ಆನೆಗೊಂದಿ ಉತ್ಸವದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಆನೆಗೊಂದಿ ಗತವೈಭವ ಸಾರುವ ಐತಿಹಾಸಿಕ ಸ್ಥಳವಾಗಿದೆ. ನಾಡಿನ ನಾನಾ ಕಲಾವಿದರು ಸೇರಿದಂತೆ ಕಲಾವಿದರು ಆಗಮಿಸುತ್ತಿದ್ದು, ಅಧಿಕಾರಿಗಳು ಮುತುವರ್ಜಿ ವಹಿಸಬೇಕೆಂದರು.ಜಿಲ್ಲಾಧಿಕಾರಿ ನಳಿನ್ ಆತುಲ್ ಮಾತನಾಡಿ, ಕನಕಗಿರಿ ಉತ್ಸವದಂತೆ ಆನೆಗೊಂದಿ ಉತ್ಸವ ಯಶಸ್ವಿಯಾಗಬೇಕು. ಸಾರಿಗೆ ಇಲಾಖೆಯವರು ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳಬೇಕೆಂದರು.ಸಹಾಯಕ ಆಯುಕ್ತ ಕ್ಯಾ.ಮಹೇಶ ಮಾಲಗಿತ್ತಿ ಮಾತನಾಡಿ, ಕನಕಗಿರಿ ಉತ್ಸವದಲ್ಲಿ ಕಾರ್ಯ ನಿರ್ವಹಿಸಿದ ಸಮಿತಿಗಳ ಅಧಿಕಾರಿಗಳೇ ಆನೆಗೊಂದಿ ಉತ್ಸವದಲ್ಲಿ ಕಾರ್ಯನಿರ್ವಹಿಸಲಿದ್ದು, ಅವರಿಗೆ ನೀಡಿದ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದರು.ನಂತರ ವೇದಿಕೆ ನಿರ್ಮಾಣ ಮತ್ತು ಜನರು ಕುಳಿತುಕೊಳ್ಳುವ ಆಸನಗಳ ವ್ಯವಸ್ಥೆ ಬಗ್ಗೆ ಸಿಬ್ಬಂದಿಯೊಬ್ಬರು ಜಿಲ್ಲಾಧಿ ಕಾರಿಗೆ ಟ್ಯಾಬ್ ಮೂಲಕ ಚಿತ್ರಗಳನ್ನು ತೋರಿಸಿದರು. ಶಾಸ ಕ ಜಿ.ಜನಾರ್ದನ ರೆಡ್ಡಿ ಕಾರ್ಯಕ್ರಮದಲ್ಲಿ ಕಲಾವಿದರಿಗೆ ವಿತರಿಸುವ ಸ್ಮರಣಿಕೆಗಳ ಬಗ್ಗೆ ಅಧಿಕಾರಿಗಳ ಮಾಹಿತಿ ಕೇಳಿದರು.ಅಧಿಕಾರಿಯೊಬ್ಬರು ಉತ್ಸವಕ್ಕೆ ಆಗಮಿಸುವ ಕಲಾವಿದರಿಗೆ ನೀಡಲು 700, ಹಿರಿಯ ಮತ್ತು ವಿಶೇಷ ಕಲಾವಿದರಿಗೆ ವಿತ ರಿಸಲು 50 ಸ್ಮರಣಿಕೆ, ಪೇಟಾ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.ಆಹಾರ ಸಮಿತಿ ಅಧಿಕಾರಿಗಳಿಗೆ ಊಟ ವ್ಯವಸ್ಥೆ ಬಗ್ಗೆ ಕೇಳಿದಾಗ, ಉತ್ಸವದ ಎರಡು ದಿನ 40-60 ಸಾವಿರ ಜನರಿಗೆ ಊ ಟದ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದರು.

ಕ್ರೀಡಾ ಸಮಿತಿಯವರು, ಉತ್ಸವದಲ್ಲಿ ವಾಲಿಬಾಲ್, ಬಾಲ್ ಬ್ಯಾಡ್ಮಿಂಟನ್, ಕಬಡ್ಡಿ, ಕ್ರಿಕೆಟ್‌, ಮ್ಯಾರಥಾನ್, ಹ್ಯಾಂಡ್ ಬಾಲ್, ರಂಗೋಲಿ, ಕುಸ್ತಿ ಸೇರಿ ಒಟ್ಟು 9 ಕ್ರೀಡೆಗಳು ನಡೆಯಲಿವೆ ಎಂದರು. ಈ ವೇಳೆ ಶಾಸಕರು ಅಂತರಾಷ್ಟ್ರೀಯ ಮಹಿಳಾ ಕ್ರಿಕೆಟ್‌ ಕ್ರೀಡಾಪಟುಗಳು ಕರೆಸಲಾಗುತ್ತದೆ ಎಂದರು.ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆ, ಎಸ್ಪಿ ಯಶೋದಾ ವಂಟಿಗೋಡಿ, ಗಂಗಾವತಿ ತಹಸೀಲ್ದಾರ ನಾಗರಾಜ್, ಕನಕಗಿರಿ ತಹಶೀಲ್ದಾರ ವಿಶ್ವನಾಥ ಮುರಡಿ, ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಪೊಲೀಸ್ ಪಾಟೀಲ, ಗಂಗಾವತಿ ಗ್ರಾಮೀಣ ಠಾಣೆ ಪಿಐ ಸೋಮಶೇಖರ್ ಜುತ್ತಲ್, ತಾಪಂ ಇಒ ಲಕ್ಷ್ಮೀದೇವಿ, ಜಿಪಂ ಎಇಇ ವಿಜಯಕುಮಾರ ಉಪಸ್ಥಿತರಿದ್ದರು.