ಜಮಖಂಡಿ ನಗರದ ವಿವಿಧ ಹೋಟೆಲ್‌ಗಳಿಗೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಕಾಯ್ದೆಯಡಿ, ಅಸ್ವಚ್ಛತೆ ಮತ್ತು ನಿಯಮ ಉಲ್ಲಂಘನೆಗಳ ನಡೆಸಿರುವ ಹೋಟೆಲ್‌ ಮಾಲೀಕರಿಗೆ ನೋಟಿಸ್‌ ನೀಡಿದರು.

ಕನ್ನಡಪ್ರಭ ವಾರ್ತೆ ಜಮಖಂಡಿ

ನಗರದ ವಿವಿಧ ಹೋಟೆಲ್‌ಗಳಿಗೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಕಾಯ್ದೆಯಡಿ, ಅಸ್ವಚ್ಛತೆ ಮತ್ತು ನಿಯಮ ಉಲ್ಲಂಘನೆಗಳ ನಡೆಸಿರುವ ಹೋಟೆಲ್‌ ಮಾಲೀಕರಿಗೆ ನೋಟಿಸ್‌ ನೀಡಿದರು.

ದಾಳಿಯ ವೇಳೆ ಅಧಿಕಾರಿಗಳು ಅಡುಗೆ ಮನೆಯಲ್ಲಿ ಬಳಸುತ್ತಿದ್ದ ಸಾಮಗ್ರಿಗಳ ಗುಣಮಟ್ಟ, ಸಂಗ್ರಹ ವಿಧಾನ, ತಾಪಮಾನ ನಿರ್ವಹಣೆ, ಸ್ವಚ್ಛತೆ ಹಾಗೂ ಕಾರ್ಮಿಕರ ಆರೋಗ್ಯದ ಸ್ಥಿತಿ ಪರಿಶೀಲಿಸಿದರು. ಸಾರ್ವಜನಿಕರಿಗೆ ಪೂರೈಸುವ ಆಹಾರ ಸುರಕ್ಷಿತವಾಗಿರಬೇಕು ಎಂಬುದನ್ನು ಸ್ಪಷ್ಟವಾಗಿ ತಿಳಿಸಿ, ನಿಯಮಾವಳಿ ಪಾಲಿಸಲು ಕಡ್ಡಾಯ ಸೂಚನೆ ನೀಡದರು.

ನಗರದ ವಿವಿಧ ಬೇಕರಿಗಳಿಗೆ ಭೇಟಿ ನೀಡಿ ದಾಖಲೆಗಳ ಪರಿಶೀಲನೆ ನಡೆಸಿ, ಎಫ್‌ಎಎಸ್‌ಎಸ್‌ಐ ಪರವಾನಗಿ ಪಡೆಯದಿರುವ ಸಂಸ್ಥೆಗಳು ತಕ್ಷಣ ಅರ್ಜಿ ಸಲ್ಲಿಸಬೇಕು ಎಂದು ನೋಟಿಸ್ ಜಾರಿಗೊಳಿಸಲಾಯಿತು. ನಿಯಮ ಪಾಲನೆಗೆ ವಿಳಂಬವಾದರೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಸಿದರು.

ಕಾರ್ಯಾಚರಣೆಯಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಹಾಗೂ ಆಹಾರ ಸುರಕ್ಷತಾ ಅಧಿಕಾರಿ ಡಾ. ಜಿ.ಎಸ್. ಗಲಗಲಿ, ಆಹಾರ ಇಲಾಖೆಯ ಶಿರಸ್ತೇದಾರ ಬಸವರಾಜ ತಾಳಿಕೋಟಿ, ಆಹಾರ ನಿರೀಕ್ಷಕ ಆನಂದ ರಾಥೋಡ್, ಆರೋಗ್ಯ ಇಲಾಖೆ ಆರೋಗ್ಯ ನಿರೀಕ್ಷಣಾಧಿಕಾರಿ ಸಂತೋಷ ನಾಯಿಕ ಮತ್ತು ಅಪ್ಪಾಜಿ ಹೂಗಾರ ಇದ್ದರು.