ಸಾರಾಂಶ
Officials who heard the problem of Morarji residential school
-ಸಂತಪೂರ್ ಮೊರಾರ್ಜಿ ವಸತಿ ಸಾಲೆ ಪ್ರಾಚಾರ್ಯ ಭಗವಂತ ಕಾಂಬಳೆ, ವಾರ್ಡನ್ ಶಿವಕುಮಾರ್ ವಿರುದ್ಧ ಮಕ್ಕಳ ಪ್ರತಿಭಟನೆ, ಪರಿಶೀಲನೆ
-----ಕನ್ನಡಪ್ರಭ ವಾರ್ತೆ ಔರಾದ್
ತಾಲೂಕಿನ ಸಂತಪೂರ್ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಬುಧವಾರ ಪ್ರಾಚಾರ್ಯ ಭಗವಂತ ಕಾಂಬಳೆ ಹಾಗೂ ವಾರ್ಡನ್ ಶಿವಕುಮಾರ್ ಅವರ ವಿರುದ್ಧ ಪ್ರತಿಭಟನೆ ನಡೆಸಿದ ಮಕ್ಕಳ ಸಮಸ್ಯೆ ಆಲಿಸಲು ಜಿಲ್ಲಾ ಪಂಚಾಯಿತಿ ಸಿಇಒ ಗಿರೀಶ ಬದೋಲೆ ಅವರ ಆದೇಶದ ಮೇರೆಗೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.ಈ ಕುರಿತು ಜಿ.ಪಂ ಸಿಇಒ ಡಾ. ಗಿರೀಶ ಬದೋಲೆ ಕನ್ನಡಪ್ರಭಕ್ಕೆ ಮಾಹಿತಿ ನೀಡಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಸಿಂಧು ಎಚ್.ಎಸ್ ಸೇರಿದಂತೆ ಇನ್ನಿತರರು ಭೇಟಿ ನೀಡಿ ಮಕ್ಕಳು ಊಟ ಮಾಡುವ ಕೋಣೆಗೆ ತೆರಳಿ ಮಕ್ಕಳಿಗೆ ನೀಡಿರುವ ಊಟ ಪರಿಶೀಲಿಸಿದರು. ವಸತಿ ನಿಲಯದಲ್ಲಿರುವ ಮಕ್ಕಳ ಸಮಸ್ಯೆಗಳು ಆಲಿಸಿದ್ದಲ್ಲದೆ, ತಪ್ಪಿತಸ್ಥರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಸ್ಥಳದಲ್ಲಿಯೇ ಇದ್ದ ಮಕ್ಕಳಿಗೆ ಕರೆಯಿಸಿ ಘಟನೆಯ ವಿವರ ಪಡೆದರು. ಮಕ್ಕಳು ವಸತಿ ನಿಲಯಕ್ಕೆ ಸಂಬಂಧಿಸಿದ ಪ್ರತಿಯೊಂದು ವಿಷಯಗಳ ಮಾಹಿತಿ ನೀಡಿದ್ದು, ಶಾಲಾ ಸಂಸತ್ತಿನ ಮಕ್ಕಳಲ್ಲಿ ಹೆಚ್ಚಿನ ವಿವರ ಪಡೆದರು ಎಂದು ತಿಳಿದು ಬಂದಿದೆ.ಈ ಸಂದರ್ಭದಲ್ಲಿ ಸಿಪಿಐ ರಘುವೀರಸಿಂಗ್ ಠಾಕೂರ್, ಸಹಾಯಕ ನಿರ್ದೇಶಕ ಅನೀಲಕುಮಾರ್ ಮೇಲ್ದೊಡ್ಡಿ, ಸಂತಪೂರ ವೈದ್ಯಾಧಿಕಾರಿ, ಚನ್ನಬಸವ ಹೇಡೆ, ಸುನೀಲ ವಾಘಮಾರೆ, ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಶಶಿಧರ್, ಸಿಡಿಪಿಒ ಯಮಲಪ್ಪ ಭೇಟಿ ನೀಡಿ ಮಕ್ಕಳ ಸಮಸ್ಯೆ ಆಲಿಸಿದರು.
--ಫೋಟೊ: ಸಂತಪೂರ ಮೋರಾರ್ಜಿ ದೇಸಾಯಿ ವಸತಿ ಶಾಲೆಗೆ ಅಧಿಕಾರಿಗಳ ತಂಡ ಭೇಟಿ ನೀಡಿ ಮಕ್ಕಳ ಸಮಸ್ಯೆ ಆಲಿಸಿದರು.12ಬಿಡಿಆರ್55