ಸಾರಾಂಶ
ವಿಜಯನಗರ ಕಾಲದ ವೆಂಕಟಪತಿ ಬಾವಿ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಮೂಲ ಸೌಕರ್ಯ ಕಲ್ಪಿಸುವುದಕ್ಕಾಗಿ ಪ್ರವಾಸೋದ್ಯಮ ಇಲಾಖೆಯಿಂದ ₹ ೧ ಕೋಟಿ ಅನುದಾನ ಬಿಡುಗಡೆಗೊಳಿಸಿದೆ. ಈಗಾಗಲೇ ಹೈಮಾಸ್ಟ್ ಅಳವಡಿಸಿ ಬೆಳಕಿನ ವ್ಯವಸ್ಥೆ, ಬಾವಿಯ ಸುತ್ತಲೂ ಕಬ್ಬಿಣದ ಕಂಬ ಅಳವಡಿಸಲಾಗಿದೆ.
ಕನಕಗಿರಿ:
ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾಗಿರುವ ಪಟ್ಟಣದ ವೆಂಕಟಪತಿ ಬಾವಿ ಸ್ಥಳಕ್ಕೆ ಸೋಮವಾರ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ ಭೇಟಿ ನೀಡಿ ಪರಿಶೀಲಿಸಿದರು.ವಿಜಯನಗರ ಕಾಲದ ವೆಂಕಟಪತಿ ಬಾವಿ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಮೂಲ ಸೌಕರ್ಯ ಕಲ್ಪಿಸುವುದಕ್ಕಾಗಿ ಪ್ರವಾಸೋದ್ಯಮ ಇಲಾಖೆಯಿಂದ ₹ ೧ ಕೋಟಿ ಅನುದಾನ ಬಿಡುಗಡೆಗೊಳಿಸಿದೆ. ಈಗಾಗಲೇ ಹೈಮಾಸ್ಟ್ ಅಳವಡಿಸಿ ಬೆಳಕಿನ ವ್ಯವಸ್ಥೆ, ಬಾವಿಯ ಸುತ್ತಲೂ ಕಬ್ಬಿಣದ ಕಂಬ ಅಳವಡಿಸಲಾಗಿದೆ. ಇನ್ನೂಳಿದ ಶೌಚಾಲಯ, ಹಂಪಿ ಮಾದರಿಯಲ್ಲಿ ಬಾವಿ ಸುತ್ತಲೂ ಗ್ರೀಲ್ ಅಳವಡಿಸುವುದು, ಪ್ರವಾಸಿಗರಿಗೆ ಮೇಲಿಂದ ಬಾವಿಯ ವೀಕ್ಷಣೆ ಮಾಡುವುದು ಅಪಾಯಕಾರಿಯಾಗಿದ್ದರಿಂದ ಬಾವಿ ಮೇಲ್ಭಾಗದ ಸುತ್ತಲೂ ಚೈನ್ ಅಳವಡಿಸುವ ಯೋಚನೆ ಇದೆ. ಕಬ್ಬಿಣದ ಕಂಬ ತುಕ್ಕು ಹಿಡಿದಿದ್ದು, ಅವೆಲ್ಲವನ್ನೂ ಕಿತ್ತು ಗುಣಮಟ್ಟದ ಕಂಬ ಹಾಕಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಕಲಾತ್ಮಕ ಬಾವಿ ಅಭಿವೃದ್ಧಿಗೆ ಸ್ಥಳೀಯರು ಸಹಕರಿಸಬೇಕೆಂದು ತಿಳಿಸಿದರು. ಈ ವೇಳೆ ಕೆಡಿಐಎಲ್ ಸಹಾಯಕ ಅಧಿಕಾರಿ ಶ್ರೀನಿಧಿ, ಲೆಕ್ಕ ಪರಿಶೋಧನಾ ಅಧಿಕಾರಿ ಬಾಲು ಪ್ರತಾಪ, ಸಹಾಯಕ ಚಂದ್ರು, ಮೋಹನ್ ಶರ್ಮ ಸೇರಿದಂತೆ ಇದ್ದರು.