ಒಕ್ಕಲಿಗರ ಸೇವಾ ಟ್ರಸ್ಟ್‌ನಿಂದ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ

| Published : Jun 10 2024, 12:33 AM IST

ಒಕ್ಕಲಿಗರ ಸೇವಾ ಟ್ರಸ್ಟ್‌ನಿಂದ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ
Share this Article
  • FB
  • TW
  • Linkdin
  • Email

ಸಾರಾಂಶ

ಒಕ್ಕಲಿಗರ ಸೇವಾ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ದಿವಂಗತ ನಾಗಣ್ಣ ಬಾಣಸವಾಡಿ ಮತ್ತು ದಿವಂಗತ ಶಿವಣ್ಣ ಅವರ ಸ್ಮರಣಾರ್ಥ ಹಾಗೂ ಸಾಧಕರಿಗೆ ಸನ್ಮಾನ ಮತ್ತು ೨೦೨೩-೨೪ನೇ ಸಾಲಿನ ಎಸ್ಸೆಸ್ಸೆಲ್ಸಿ, ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ನಗರದ ಗಾಂಧಿ ಭವನದಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಮಂಡ್ಯ

ಒಕ್ಕಲಿಗರ ಸೇವಾ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ದಿವಂಗತ ನಾಗಣ್ಣ ಬಾಣಸವಾಡಿ ಮತ್ತು ದಿವಂಗತ ಶಿವಣ್ಣ ಅವರ ಸ್ಮರಣಾರ್ಥ ಹಾಗೂ ಸಾಧಕರಿಗೆ ಸನ್ಮಾನ ಮತ್ತು ೨೦೨೩-೨೪ನೇ ಸಾಲಿನ ಎಸ್ಸೆಸ್ಸೆಲ್ಸಿ, ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ನಗರದ ಗಾಂಧಿ ಭವನದಲ್ಲಿ ನಡೆಯಿತು.

ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಾಸನದಲ್ಲಿ ಒಕ್ಕಲಿಗರ ಸಂಘದ ಅಧ್ಯಕ್ಷ ಜಿ.ಎಲ್.ಮುದ್ದೇಗೌಡ ಅವರು ೨ ಸಾವಿರ ಹೆಣ್ಣುಮಕ್ಕಳಿಗೆ ಶಿಕ್ಷಣದ ಜೊತೆಗೆ ಆಶ್ರಯ ನೀಡಿದ್ದಾರೆ. ಕೇವಲ ತಿಂಗಳಿಗೆ ೬೦೦ ರು. ತೆಗೆದುಕೊಂಡು ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಿದ್ದಾರೆ. ಇವರ ಕೆಲಸ ಎಲ್ಲರಿಗೂ ಮಾದರಿ ಎಂದರು.

ಮುದ್ದೆಗೌಡರಲ್ಲಿ ನೀವು ಇಷ್ಟು ವೆಚ್ಚ ಮಾಡುತ್ತಿರುವುದು ಯಾವ ಕಾರಣಕ್ಕೆ ಎಂದು ಪ್ರಶ್ನಿಸಲಾಗಿ ಅವರು, ನಾನು ತೀರಿ ಹೋದರೆ ಅಧ್ಯಕ್ಷ ಸ್ಥಾನಕ್ಕೆ ಗುದ್ದಾಡುತ್ತಾರೆ. ಹಾಗಾಗಿ ನಾನು ಬದುಕಿದ್ದಾಗಲೇ ಐದು ಕೋಟಿ ರು.ಗಳನ್ನು ಠೇವಣಿ ಇಟ್ಟು ಬಿಡುತ್ತೇನೆ. ಅವರು ಸಂಸ್ಥೆಯನ್ನು ನಡೆಸಿಕೊಂಡು ಹೋಗಲಿ ಎಂದು ಹೇಳಿದ್ದು ಅವರ ಸರಳತೆ, ಮಾನವೀಯ ಗುಣ, ಸಾಮಾಜಿಕ ಕಳಕಳಿಯ ಧ್ಯೋತಕವಾಗಿದೆ ಎಂದರು.

ಕೊಮ್ಮೇರಹಳ್ಳಿ ಆದಿಚುಂಚನಗಿರಿ ಶಾಖಾ ಮಠದ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮನಂದನಾಥ ಸ್ವಾಮಿ ಮಾತನಾಡಿ, ಹಾದಿಯಿಂದಲೂ ರೈತರು ತಾವು ಬೆಳೆದ ಬೆಳೆಯನ್ನು ತಾವು ತಿಂದು ನೀಡಿ ಜೊತೆಗೆ ಪ್ರಾಣಿಗಳಿಗೂ ಆಹಾರ ಕೊಡುವ ಸಂಸ್ಕೃತಿಯನ್ನು ಬೆಳೆಸಿಕೊಂಡು ಬಂದಿದ್ದಾರೆ ಎಂದರು.

೨೦೨೩-೨೪ನೇ ಸಾಲಿನ ಎಸ್ಸೆಸ್ಸೆಲ್ಸಿ, ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ , ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ವೇದಿಕೆಯಲ್ಲಿ ಒಕ್ಕಲಿಗರ ಸೇವಾ ಟ್ರಸ್ಟ್ ಕೆ.ಎಸ್.ಬಸವೇಗೌಡ, ಗೌರವಾಧ್ಯಕ್ಷ ಸಿ.ತಮ್ಮಯ್ಯ , ಉಪಾಧ್ಯಕ್ಷೆ ಸುಜಾತ ಕೃಷ್ಣ , ಪ್ರಧಾನ ಕಾರ್ಯದರ್ಶಿ ಡಾ.ಅನುಸೂಯ ,ಖಜಾಂಜಿ ಎಲ್.ಕೃಷ್ಣ, ಒಕ್ಕಲಿಗರ ಸೇವಾ ಟ್ರಸ್ಟ್ ಪದಾಧಿಕಾರಿಗಳಾದ ಪಿ.ಎನ್. ಯತೀಶ್‌ಬಾಬು, ಬಿ.ಎಲ್.ನಾಗಲಿಂಗಪ್ಪ, ಎಂ.ಎನ್.ಶಿವರಾಮು, ಅಶೋಕ್‌ಕುಮಾರ್, ಎನ್.ಕೆ.ಕುಮಾರ್, ಬಿ.ಎಲ್.ಬೋರೇಗೌಡ, ಪುಟ್ಟಸ್ವಾಮಿ, ಬಿ.ಎಲ್.ಬೊಮ್ಮಯ್ಯ, ಮರೀಗೌಡ, ಕೆ.ಬಿ.ನಾರಾಯಣ, ವಿ.ಎಂ.ಕುಮಾರ್‌ಗೌಡ, ಎನ್.ಆರ್.ನಂದೀಶ್, ಎಸ್.ಟಿ.ರಾಮೇಗೌಡ, ಕೆ.ಸಿ.ರವೀಂದ್ರ ಕಲ್ಲಹಳ್ಳಿ, ಕನ್ನಡ ಸಂಘಟನೆಗಳ ಪದಾಧಿಕಾರಿಗಳಿದ್ದರು.

ನಾಳೆ ವಿಶ್ವ ಆಹಾರ ಸುರಕ್ಷತಾ ದಿನ

ಮಂಡ್ಯ: ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯ, ಪಿಇಎಸ್ ಕಾನೂನು ಕಾಲೇಜು, ರಾಷ್ಟ್ರೀಯ ಸೇವಾ ಯೋಜನೆ ಘಟಕದಿಂದ ವಿಶ್ವ ಅಹಾರ ಸುರಕ್ಷತಾ ದಿನ, ವಿಶ್ವ ತಂಬಾಕು ರಹಿತ ದಿನ ಹಾಗೂ ವಿಶ್ವ ಪರಿಸರ ದಿನಾಚರಣೆಯನ್ನು ಜೂ.೧೧ರಂದು ಬೆಳಗ್ಗೆ ೧೧ ಗಂಟೆಗೆ ಪಿಇಎಸ್ ಕಾನೂನು ಕಾಲೇಜು ಆವರಣದಲ್ಲಿ ನಡೆಯಲಿದೆ.ಉದ್ಘಾಟನೆಯನ್ನು ಜಿಲ್ಲಾ ಕಾರಾಗೃಹ ಮತ್ತು ಸುಧಾರಣಾ ಸೇವಾ ಆಯೋಗದ ಅಧೀಕ್ಷಕ ಟಿ.ಕೆ.ಲೋಕೇಶ್ ನೆರವೇರಿಸುವರು. ಅಧ್ಯಕ್ಷತೆಯನ್ನು ಹಿರಿಯ ಪಪತ್ರಕರ್ತ ಡಿ.ಎನ್.ಶ್ರೀಪಾದು ವಹಿಸುವರು. ಕಾರ್ಯಕ್ರಮದಲ್ಲಿ ಏಕಬಳಕೆ ಪ್ಲಾಸ್‌ಟಿಕ್ ಬಳಕೆ ನಿರ್ಮೂಲನೆ ಕುರಿತು ಡಯಟ್ ವಿಶ್ರಾಂತ ಪ್ರಾಂಶುಪಾಲ ಜಯಶಂಕರ ಉಪನ್ಯಾಸ ನೀಡುವರು. ಮುಖ್ಯ ಅತಿಥಿಗಳಾಗಿ ಪ್ರಾಂಶುಪಾಲ ಪ್ರೊ.ಜೆ.ಯೋಗೀಶ್, ಸಹಾಯಕ ಪ್ರಾಧ್ಯಾಪಕರಾದ ಎಂ.ಎಸ್.ಯಮುನಾವತಿ, ಕೆ.ಎಸ್. ಜಯಕುಮಾರ್, ಎನ್.ಸಿ.ಸುಭಾಷ್, ಎಂ.ಪಿ.ಪ್ರಮೋದ್‌ಕುಮಾರ್ ಭಾಗವಹಿಸುವರು.