ಶಾಲಾ ಆವರಣದಲ್ಲೇ ಒಕ್ಕಣೆ: ಮಕ್ಕಳಿಗೆ ಶಬ್ಧ, ಧೂಳಿನ ಕಾಟ

| Published : Jan 18 2024, 02:03 AM IST

ಸಾರಾಂಶ

ಮಾಗಡಿ: ತಾಲೂಕಿನ ಬಾಳೇನಹಳ್ಳಿಯ ಅನುದಾನಿತ ಶ್ರೀ ರಂಗನಾಥಸ್ವಾಮಿ ಗ್ರಾಮಾಂತರ ಪ್ರೌಢಶಾಲೆ ಆವರಣದಲ್ಲಿ ಶಿಕ್ಷಕ ಮಂಜುನಾಥ ಆಟದ ಮೈದಾನವನ್ನು ಕಣವಾಗಿ ಪರಿವರ್ತನೆ ಮಾಡಿಕೊಂಡಿರುವುದರಿಂದ ಶಾಲಾ ಮಕ್ಕಳಿಗೆ ತೊಂದರೆ ಆಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಮಾಗಡಿ: ತಾಲೂಕಿನ ಬಾಳೇನಹಳ್ಳಿಯ ಅನುದಾನಿತ ಶ್ರೀ ರಂಗನಾಥಸ್ವಾಮಿ ಗ್ರಾಮಾಂತರ ಪ್ರೌಢಶಾಲೆ ಆವರಣದಲ್ಲಿ ಶಿಕ್ಷಕ ಮಂಜುನಾಥ ಆಟದ ಮೈದಾನವನ್ನು ಕಣವಾಗಿ ಪರಿವರ್ತನೆ ಮಾಡಿಕೊಂಡಿರುವುದರಿಂದ ಶಾಲಾ ಮಕ್ಕಳಿಗೆ ತೊಂದರೆ ಆಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಪ್ರೌಢಶಾಲೆಯಲ್ಲಿ 106 ವಿದ್ಯಾರ್ಥಿಗಳಿಗೆ ವ್ಯಾಸಂಗ ಮಾಡುತ್ತಿದ್ದು ಹುರುಳಿಕಾಳು ಒಕ್ಕಣೆ ಮಾಡುತ್ತಿರುವುದರಿಂದ ಶಾಲಾ ಆವರಣವೆಲ್ಲಾ ಧೂಳು ತುಂಬಿಕೊಂಡಿದೆ. ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದ್ದರೂ ಅದೇ ಶಾಲೆಯ ಶಿಕ್ಷಕ ಮಂಜುನಾಥ ಆಟದ ಮೈದಾನದಲ್ಲಿ ಕಣ ಮಾಡಿಕೊಂಡು ಟ್ರ್ಯಾಕ್ಟರ್ ಮೂಲಕ ಒಕ್ಕಣೆ ಮಾಡುತ್ತಿದ್ದಾರೆ. ಈ ಬಗ್ಗೆ ಗ್ರಾಮಸ್ಥರು ತಿಳಿ ಹೇಳಿದರೂ ಯಾವುದೇ ಪ್ರಯೋಜನವಾಗಿಲ್ಲ. ಬಿಇಒ ಗಮನಕ್ಕೂ ತರಲಾಗಿದೆ. ಆದರೂ ಒಕ್ಕಣೆ ಮಾಡುವುದನ್ನು ನಿಲ್ಲಿಸಿಲ್ಲ. ಶಾಲೆಗೆ ಸ್ಥಳ ದಾನವಾಗಿ ಕೊಟ್ಟಿರುವುದರಿಂದ ಇಲ್ಲಿಯೇ ಒಕ್ಕಣೆ ಮಾಡುತ್ತೇನೆಂದು ಹಠ ಹಿಡಿದು ಒಕ್ಕಣೆ ಮಾಡುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದಲೂ ಇದೇ ರೀತಿ ಮಾಡುತ್ತಿದ್ದು, ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀಳಲಿದೆ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ಗ್ರಾಮ ಪಂಚಾಯಿತಿಯಿಂದ ಗ್ರಾಮದ ಮುಖ್ಯರಸ್ತೆಯಲ್ಲಿ ಸಿಮೆಂಟ್ ಕಣ ಮಾಡಿಸಿದ್ದರೂ ಅಲ್ಲಿ ಒಕ್ಕಣೆ ಮಾಡದೆ, ಶಾಲಾ ಮೈದಾನದಲ್ಲಿ ಒಕ್ಕಣೆ ಮಾಡುವುದು ಸರಿಯಲ್ಲ ಎಂದು ಶಾಲೆಯ ಕಾರ್ಯದರ್ಶಿ ನಾಗರಾಜು ತಿಳಿಸಿದ್ದಾರೆ.

ಹುರುಳಿ ಕಾಳು ಒಕ್ಕಣೆ ಮಾಡುವಾಗ ವಿದ್ಯಾರ್ಥಿಗಳಿಗೆ ಟ್ರ್ಯಾಕ್ಟರ್ ನ ಶಬ್ದ, ಧೂಳು ಆಟದ ಮೈದಾನದಲ್ಲಿ ಆಟವಾಡಲು ಜಾಗವೂ ಇಲ್ಲದ ಹಾಗೆ ಮಾಡಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಬೇಕಿದೆ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಪೋಟೋ 17ಮಾಗಡಿ1:

ಮಾಗಡಿ ತಾಲೂಕಿನ ಬಾಳೇನಹಳ್ಳಿ ಶ್ರೀ ರಂಗನಾಥಸ್ವಾಮಿ ಗ್ರಾಮಾಂತರ ಪ್ರೌಢಶಾಲೆ ಆವರಣದಲ್ಲಿ ಒಕ್ಕಣೆ ಮಾಡಲು ಹುರುಳಿ ಬೆಳೆ ರಾಶಿ ಹಾಕಿರುವುದು.