ಸಮಾಜದ ಅಂಕು-ಡೊಂಕು ತಿದ್ದಲು ಯತ್ನಿಸಿದ ಸರ್ವಜ್ಞರು

| Published : Feb 21 2024, 02:09 AM IST

ಸಾರಾಂಶ

ಮುದ್ದೇಬಿಹಾಳ: ಸರ್ವಜ್ಞರ ವಚನಗಳು ಜೀವನದ ಅನುಭವಗಳನ್ನು ಒಳಗೊಂಡಿದೆ. ಮಾತ್ರವಲ್ಲದೇ ವಚನ ಹಾಗೂ ತನ್ನ ಮಾತಿನ ಮೂಲಕ ಜನತೆಯನ್ನು ಸೆಳೆದ ಕವಿ ಸರ್ವಜ್ಞ ಎಂದು ತಾಲೂಕು ಕುಂಬಾರ ಸಮಾಜದ ಅಧ್ಯಕ್ಷ ಬಸಣ್ಣ ಕುಂಬಾರ ಹೇಳಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಸರ್ವಜ್ಞರ ವಚನಗಳು ಜೀವನದ ಅನುಭವಗಳನ್ನು ಒಳಗೊಂಡಿದೆ. ಮಾತ್ರವಲ್ಲದೇ ವಚನ ಹಾಗೂ ತನ್ನ ಮಾತಿನ ಮೂಲಕ ಜನತೆಯನ್ನು ಸೆಳೆದ ಕವಿ ಸರ್ವಜ್ಞ ಎಂದು ತಾಲೂಕು ಕುಂಬಾರ ಸಮಾಜದ ಅಧ್ಯಕ್ಷ ಬಸಣ್ಣ ಕುಂಬಾರ ಹೇಳಿದರು. ಪಟ್ಟಣದ ತಾಲೂಕು ಆಡಳಿತ ಹಾಗೂ ತಾಲೂಕು ಕುಂಬಾರ ಸಮಾಜದ ಸಂಯುಕ್ತ ಆಶ್ರಯದೊಂದಿಗೆ ಮಂಗಳವಾರ ಸಂತ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಯತ್ನ ಸರ್ವಜ್ಞರ ವಚನಗಳ ಮೂಲಕ ನಡೆದಿದೆ. ಅವರ ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು. ಸಮಾಜದ ವ್ಯವಸ್ಥೆ ಗಮನಿಸಿ ಜನರ ಕಷ್ಟ, ಸುಖಗಳನ್ನು ತನ್ನ ವಚನದ ಮೂಲಕ ಎತ್ತಿ ಹಿಡಿದ ಕವಿ ಸರ್ವಜ್ಞರು ೧೬ನೇ ಶತಮಾನದ ಕವಿ, ತ್ರಿಪದಿಗಳ ಸೃಷ್ಟಿಕರ್ತನೇ ಸರ್ವಜ್ಞ. ಮಣ್ಣನ್ನೇ ಬದುಕಾಗಿಸಿಕೊಂಡು ಜೀವನ ನಿರ್ವಹಿಸಿದ ಇವರು ತಮ್ಮ ತ್ರಿಪದಿಗಳ ಮೂಲಕ ಇಂದಿಗೂ ಜನಮಾನಸದಲ್ಲಿದ್ದಾರೆ ಎಂದರು.

ಇದಕ್ಕೂ ಮೊದಲು ಪಟ್ಟಣದ ಕಿಲ್ಲಾಗಲ್ಲಿ ಹತ್ತಿರವಿರುವ ಕುಂಬಾರ ಓಣಿಯಿಂದ ಸಂತ ಕವಿ ಸರ್ವಜ್ಞರ ಭಾವಚಿತ್ರ ಹೊತ್ತು ವಿವಿಧ ಬಾಜಾಭಜಂತ್ರಿಗಳೊಂದಿಗೆ ಸರಾಫ್ ಬಜಾರ, ಗ್ರಾಮದೇವತೆ ಕಟ್ಟೆ, ಬಸವೇಶ್ವರ ವೃತ್ತದ ಮಾರ್ಗವಾಗಿ ಕಿತ್ತೂರ ರಾಣಿ ಚನ್ನಮ್ಮ ವೃದ್ಧ ಮೂಲಕ ಹಾಯ್ದು ಮಿನಿ ವಿಧಾನ ಸೌಧದವರೆಗೂ ಬ್ರಹತ್ ಮೇರವಣಿಗೆ ನಡೆಸಲಾಯಿತು.

ಉಪಾಧ್ಯಕ್ಷ ಮಲ್ಲಣ್ಣ ಕುಂಬಾರ, ಜಗದೀಶ ಕುಂಬಾರ, ಅಮರೇಶ ಕುಂಬಾರ, ರವಿ ಕುಂಬಾರ, ಮಲ್ಲು ಬಂಗಾರಗುಂಡ, ಮಹಾಂತೇಶ ಕುಂಬಾರ, ಮಹಾದೇವಪ್ಪ ಕುಂಬಾರ, ಪತ್ರಕರ್ತ ಬಸವರಾಜ ಕುಂಬಾರ, ಬಸಣ್ಣ ಕುಂಬಾರ, ಕೃಷ್ಣಾ ಕುಂಬಾರ, ಧರ್ಮಣ್ಣ ಕುಂಬಾರ, ತಿಪ್ಪಣ್ಣ ಕುಂಬಾರ, ರಾಮಣ್ಣ ಕುಂಬಾರ, ಮೋಹನ ಕುಂಬಾರ, ಶರಣಪ್ಪ ಕುಂಬಾರ, ಗೋಪಾಲರಾಮ ಪ್ರಜಾಪತಿ ಸೇರಿದಂತೆ ಹಲವರು ಇದ್ದರು.