ಸಾರಾಂಶ
ರೈತ, ಕೃಷಿಕಾರರ ಮನೆ ನಿವೇಶನ, ಭೂಮಿ ಹಕ್ಕಿಗಾಗಿ, ಬಲವಂತ ಹಾಗೂ ಅನ್ಯಾಯದ ಭೂ ಸ್ವಾಧೀನ ವಿರೋಧಿಸಿ, ಎಂ.ಎಸ್.ಪಿ, ಸಾಲಮನ್ನಾ ಹಕ್ಕಿಗಾಗಿ ಫೆ.10 ರಿಂದ ಬೃಹತ್ ವಿಧಾನಸೌಧ ಚಲೋ-ಅನಿರ್ಧಿಷ್ಠಾವದಿ ಧರಣಿ ನಡೆಸಲಾಗುವುದು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಆರ್.ಎಸ್. ಚನ್ನಬಸವಣ್ಣ ತಿಳಿಸಿದರು.
ಕನ್ನಡಪ್ರಭ ವಾರ್ತೆ ತುಮಕೂರುರೈತ, ಕೃಷಿಕಾರರ ಮನೆ ನಿವೇಶನ, ಭೂಮಿ ಹಕ್ಕಿಗಾಗಿ, ಬಲವಂತ ಹಾಗೂ ಅನ್ಯಾಯದ ಭೂ ಸ್ವಾಧೀನ ವಿರೋಧಿಸಿ, ಎಂ.ಎಸ್.ಪಿ, ಸಾಲಮನ್ನಾ ಹಕ್ಕಿಗಾಗಿ ಫೆ.10 ರಿಂದ ಬೃಹತ್ ವಿಧಾನಸೌಧ ಚಲೋ-ಅನಿರ್ಧಿಷ್ಠಾವದಿ ಧರಣಿ ನಡೆಸಲಾಗುವುದು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಆರ್.ಎಸ್. ಚನ್ನಬಸವಣ್ಣ ತಿಳಿಸಿದರು.ಇಲ್ಲಿನ ಜನಚಳವಳಿ ಕೇಂದ್ರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರೈತ ಹಾಗೂ ಜನ ವಿರೋಧಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಭೆ ವಿರೋಧಿಸಿ, ಮನೆ-ನಿವೇಶನ, ಬಗರ್ ಹುಕುಂ -ಅರಣ್ಯ ಸಾಗುವಳಿ ರೈತ-ಕೂಲಿಕಾರರ ಹಕ್ಕು ರಕ್ಷಣೆಗಾಗಿ, ಬಲವಂತದ ಭೂ ಸ್ವಾಧೀನ ಹಾಗೂ ಭೂ ಸಂಪತ್ತಿನ ಕಾರ್ಪೊರೇಟ್ ಲೂಟಿ ಹಿಮ್ಮೆಟ್ಟಿಸಲು ಈ ಆಂದೋಲನ ನಡೆಸಲಾಗುತ್ತಿದೆ ಎಂದರು.ಜಿಲ್ಲೆಯಾದ್ಯಂತ ೪೦೦೦ ರೈತ ಕೂಲಿಕಾರರು ಭಾಗವಹಿಸುತ್ತಿದ್ದಾರೆ. ಜಿಲ್ಲೆಯಲ್ಲಿ 10 ಸಾವಿರಕ್ಕೂ ಹೆಚ್ಚು ಬಗರ್‌ಹುಕುಂ ಸಾಗುವಳಿ ಸಕ್ರಮ ಕೋರಿ ಅರ್ಜಿ ಸಲ್ಲಿಸಿರುವ ರೈತರ ನ್ಯಾಯಬದ್ದ ಕೋರಿಕೆಯನ್ನು ಸಮರೋಪಾಧಿಯಲ್ಲಿ ತಿರಸ್ಕರಿಸಲಾಗಿದೆ ಎಂದರು.
ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಕಾರ್ಯದರ್ಶಿ ಎನ್.ಕೆ. ಸುಬ್ರಮಣ್ಯ ಮಾತನಾಡಿ, ಜಿಲ್ಲೆಯ ಅರಣ್ಯ ಭೂಮಿ ಇಂಡೀಕರಣ, ಗೋಮಾಳ, ಭೂಹೀನ ರೈತರಿಗೆ ನಿವೇಶನ, ಗೋಮಾಳ ಭೂಮಿಯನ್ನು ಭೂರಹಿತರಿಗೆ ಮತ್ತು ಅರ್ಜಿ ಹಾಕಿರುವ ಯಾವುದೇ ಅರ್ಜಿ ವಜಾ ಮಾಡಬಾರದು ಎಂದರು.ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ. ಅಜ್ಜಪ್ಪ ಮಾತನಾಡಿದರು. ಕೆಪಿಆರ್‌ಎಸ್‌ನ ಜಿಲ್ಲಾ ಉಪಾಧ್ಯಕ್ಷ ದೊಡ್ಡನಂಜಯ್ಯ, ರಾಜಮ್ಮ ಕೆ.ಎಂ, ತುರುವೇಕೆರೆಯ ಬೋಜರಾಜು, ಹಾಲಪ್ಪ ಉಪಸ್ಥಿತರಿದ್ದರು.