21 ರಂದು ಲೋಕಸಭಾ, ವಿಧಾನ ಪರಿಷತ್ ಸದಸ್ಯರಿಗೆ ಸನ್ಮಾನ

| Published : Jul 20 2024, 12:50 AM IST

21 ರಂದು ಲೋಕಸಭಾ, ವಿಧಾನ ಪರಿಷತ್ ಸದಸ್ಯರಿಗೆ ಸನ್ಮಾನ
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆ, ಬೆಂಗಳೂರು ನೊಳಂಬ ಲಿಂಗಾಯತ ಸಂಘ ಮತ್ತು ಅಜ್ಜಂಪುರ ಶ್ರೀ ಗುರುಸಿದ್ದರಾಮೇಶ್ವರ ಸಮುದಾಯ ಭವನ ಉಪ ಸಮಿತಿಯಿಂದ ಜು. 21 ರಂದು ಭಾನುವಾರ ಅಜ್ಜಂಪುರ ಶ್ರೀ ಗುರುಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಬೆಳಿಗ್ಗೆ 10.30ಕ್ಕೆ ಲೋಕಸಭಾ ಮತ್ತು ವಿಧಾನ ಪರಿಷತ್ ನೂತನ ಸದಸ್ಯರ ಸನ್ಮಾನ, ಜಿ.ಎಸ್.ಸಿದ್ದರಾಮಪ್ಪ (ಚನ್ನಬಸಪ್ಪ) ಜಿ.ಜಿ.ಹಳ್ಳಿ ಇವರ ಸ್ಮರಣಾರ್ಥ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಏರ್ಪಡಿಸಲಾಗಿದೆ ಎಂದು ಬೆಂಗಳೂರು ನೊಳಂಬ ಲಿಂಗಾಯತ ಸಂಘ ಮಾಜಿ ಅಧ್ಯಕ್ಷ, ಮಾಜಿ ಶಾಸಕ ಎಸ್.ಎಂ. ನಾಗರಾಜ್ ತಿಳಿಸಿದ್ದಾರೆ.

ಅಜ್ಜಂಪುರದಲ್ಲಿ ಶ್ರೀ ಗುರುಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ತರೀಕೆರೆ

ಬೆಂಗಳೂರು ನೊಳಂಬ ಲಿಂಗಾಯತ ಸಂಘ ಮತ್ತು ಅಜ್ಜಂಪುರ ಶ್ರೀ ಗುರುಸಿದ್ದರಾಮೇಶ್ವರ ಸಮುದಾಯ ಭವನ ಉಪ ಸಮಿತಿಯಿಂದ ಜು. 21 ರಂದು ಭಾನುವಾರ ಅಜ್ಜಂಪುರ ಶ್ರೀ ಗುರುಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಬೆಳಿಗ್ಗೆ 10.30ಕ್ಕೆ ಲೋಕಸಭಾ ಮತ್ತು ವಿಧಾನ ಪರಿಷತ್ ನೂತನ ಸದಸ್ಯರ ಸನ್ಮಾನ, ಜಿ.ಎಸ್.ಸಿದ್ದರಾಮಪ್ಪ (ಚನ್ನಬಸಪ್ಪ) ಜಿ.ಜಿ.ಹಳ್ಳಿ ಇವರ ಸ್ಮರಣಾರ್ಥ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಏರ್ಪಡಿಸಲಾಗಿದೆ ಎಂದು ಬೆಂಗಳೂರು ನೊಳಂಬ ಲಿಂಗಾಯತ ಸಂಘ ಮಾಜಿ ಅಧ್ಯಕ್ಷ, ಮಾಜಿ ಶಾಸಕ ಎಸ್.ಎಂ. ನಾಗರಾಜ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿ, ಶ್ರೀಮಠ ಕಡೂರು, ಯಳನಡು ಅರಸೀಕೆರೆ ಮಹಾ ಸಂಸ್ಥಾನದ ಶ್ರೀ ಜ್ಞಾನ ಪ್ರಭು ಸಿದ್ದರಾಮದೇಶೀಕೇಂದ್ರ ಸ್ವಾಮಿ ಸಮಾರಂಭದ ನೇತೃತ್ವ ವಹಿಸಲಿದ್ದು, ಚಿಕ್ಕನಾಯಕನಹಳ್ಳಿ ಕಾನೂನು ಮತ್ತು ಸಣ್ಣ ನೀರಾವರಿ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಉದ್ಘಾಟಿಸುವರು. ಬೆಂಗಳೂರು ನೊಳಂಬ ಲಿಂಗಾಯತ ಸಂಘ ಅಧ್ಯಕ್ಷ ಟಿ.ಕೆ.ಚಂದ್ರಶೇಖರ್ ಅಧ್ಯಕ್ಷತೆ ವಹಿಸುವರು. ಮಾಜಿ ಶಾಸಕ ಎಸ್.ಎಂ.ನಾಗರಾಜ್‌ ಹಾಜರಿರುವರು. ಉಡುಪಿ-ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್ ಸದಸ್ಯರಾದ ಸಿ.ಟಿ.ರವಿ, ಎಸ್.ಎಲ್. ಬೋಜೇಗೌಡ, ಡಾ.ಧನಂಜಯ ಸರ್ಚಿಯನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದ್ದಾರೆ.

ಅಜ್ಜಂಪುರ ತಾಲೂಕು ಶ್ರೀ ಸಿದ್ದ ರಾಮೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ರಾಜಪ್ಪ, ಎಲ್.ಎಸ್.ಬಸಪ್ಪ, ಶ್ರೀ ಗುರು ಸಿದ್ದರಾಮೇಶ್ವರ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಶಿವಣ್ಣ, ಮಲ್ಲೇಶಪ್ಪ, ಜಗದೀಶ್, ಶೇಖರಪ್ಪ, ಶಾರದ ವೇಲುಮುರುಗನ್, ಮಹೇಶ್ವರಪ್ಪ, ಲಕ್ಷ್ಮಣ್ ವೈ.ಎಸ್. ಮತ್ತಿತರರು ಉಪಸ್ಥಿತರಿದ್ದರು.-18ಕೆಟಿಆರ್.ಕೆ.15ಃ

ತರೀಕೆರೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬೆಂಗಳೂರು ನೊಳಂಬ ಲಿಂಗಾಯತ ಸಂಘ ಮಾಜಿ ಅಧ್ಯಕ್ಷ, ಮಾಜಿ ಶಾಸಕದ ಎಸ್.ಎಂ.ನಾಗರಾಜ್ ಅಹ್ವಾನ ಪತ್ರಿಕೆ ಬಿಡುಗಡೆ ಮಾಡಿದರು. ಶ್ರೀ ಗುರು ಸಿದ್ದರಾಮೇಶ್ವರ ಸಮುದಾಯ ಭವನ ಉಪ ಸಮಿತಿ ಅಧ್ಯಕ್ಷ ಎಲ್.ಎಸ್.ಬಸಪ್ಪ, ಬಿ.ರಾಜಪ್ಪ ಮತ್ತಿತರರು ಇದ್ದರು.