ಸಾರಾಂಶ
- ಏ.27ರಂದು ಲೋಕಕಲ್ಯಾಣಾರ್ಥ ಶ್ರೀ ಮಹಾಪ್ರತ್ಯಂಗಿರದೇವಿ ಯಾಗ: ಪ್ರಣವಾನಂದ ಸ್ವಾಮೀಜಿ ಮಾಹಿತಿ
- - -- ರಾಣೆಬೆನ್ನೂರು ತಾಲೂಕಿನ ಅರೇಮಲ್ಲಾಪುರದ ಶರಣ ಬಸವೇಶ್ವರ ಮಹಾಸಂಸ್ಥಾನದಲ್ಲಿ ಆಯೋಜನೆ
- ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಯಾಗದ ಯಜಮಾನ ಸ್ಥಾನದಲ್ಲಿ ಇರುವರೆಂದು ಮಾಹಿತಿ- ಬಜೆಟ್ ಅಧಿವೇಶನದಲ್ಲಿ ಜಾತಿಗಣತಿ ವರದಿ ಬಿಡುಗಡೆ ಮಾಡಬೇಕು ಎಂದು ಶ್ರೀಗಳ ಮನವಿ - - -
ಕನ್ನಡಪ್ರಭ ವಾರ್ತೆ ದಾವಣಗೆರೆರಾಣೆಬೆನ್ನೂರು ತಾಲೂಕಿನ ಅರೇಮಲ್ಲಾಪುರ ಗ್ರಾಮದ ಶ್ರೀ ಶರಣ ಬಸವೇಶ್ವರ ಮಹಾಸಂಸ್ಥಾನದಲ್ಲಿ ಏ.28ರಂದು ಏಕಕಾಲದಲ್ಲಿ 40 ಶ್ರೀ ಶರಣ ಬಸವೇಶ್ವರ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮ ನಡೆಯಲಿದೆ ಎಂದು ಶ್ರೀ ಪ್ರಣವಾನಂದ ಸ್ವಾಮೀಜಿ ನುಡಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಅರೇಮಲ್ಲಾಪುರ ಶ್ರೀ ಮಠದಲ್ಲಿ 100 ಶ್ರೀ ಶರಣ ಬಸವೇಶ್ವರರ ಮೂರ್ತಿಗಳ ಪ್ರತಿಷ್ಠಾಪಿಸುವ ಸಂಕಲ್ಪದ ಮೊದಲ ಹಂತದಲ್ಲಿ 40 ಮೂರ್ತಿಗಳ ಪ್ರತಿ ಷ್ಠಾಪನೆ ಮಾಡಲಾಗುತ್ತಿದೆ. ಜೊತೆಗೆ ನೂತನ ದೇವಸ್ಥಾನ ಉದ್ಘಾಟನೆ ಸಹ ಮಾಡಲಾಗುತ್ತಿದೆ ಎಂದರು.ಏ.27ರಂದು ಲೋಕಕಲ್ಯಾಣಾರ್ಥ ಶ್ರೀ ಮಹಾಪ್ರತ್ಯಂಗಿರಾದೇವಿ ಯಾಗ ನಡೆಯಲಿದೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಯಾಗದ ಯಜಮಾನ ಸ್ಥಾನದಲ್ಲಿ ಇರುವರು. ಸೂರ್ಯಸ್ಥಾನದ ನಂತರ 18 ಗಂಟೆಗಳ ಕಾಲ ಯಾಗ ನಡೆಯಲಿದೆ. ಹೆಚ್ಚಿನ ಮಾಹಿತಿಗೆ 80883-67539, 96110-82995, 96067- 62104 ಸಂಪರ್ಕಿಸುವಂತೆ ಹೇಳಿದರು.ರಾಜ್ಯ ಸರ್ಕಾರ ಈ ಬಾರಿಯ ಬಜೆಟ್‌ನಲ್ಲಿ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಕ್ಕೆ ಅನುದಾನ ಬಿಡುಗಡೆ ಮಾಡಬೇಕು. 5 ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಕ್ಕೆ ₹250 ಕೋಟಿ ನೀಡಿದೆ. ಇನ್ನುಳಿದ ನಿಗಮಕ್ಕೆ ಅನುದಾನ ಬಿಡುಗಡೆ ಮಾಡಬೇಕು. ಮಠಗಳಿಗೆ ನಿಲ್ಲಿಸಿರುವ ಅನುದಾನ ನೀಡಬೇಕು. ಬಜೆಟ್ ಅಧಿವೇಶನದಲ್ಲಿ ಜಾತಿಗಣತಿ ವರದಿ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಆರ್. ಪ್ರತಾಪ್, ರಾಜೇಶ್ ಈಡಿಗರ್, ಆರ್. ಮಹಾಂತೇಶ್, ರಮೇಶ್ ಬೆಳಲಗೆರೆ ಇದ್ದರು.- - - ಬಾಕ್ಸ್
* ಕಮ್ಯುನಿಸ್ಟರಿಂದ ನಾರಾಯಣ ಗುರು ಹೆಸರು ಉದ್ದೇಶಪೂರ್ವಕ ಬಳಕೆ- ದೇವಸ್ಥಾನದೊಳಗೆ ಹೋಗಲು ಅಂಗಿ ತೆಗೆಯಬೇಕಿಲ್ಲ ಎಂಬ ಕೇರಳ ಸಿಎಂ ಹೇಳಿಕೆಗೆ ಆಕ್ಷೇಪ ಕೆಲವಾರು ದೇವಸ್ಥಾನದಲ್ಲಿ ಇರುವಂತಹ ವಸ್ತ್ರ ಸಂಹಿತೆಯ ಬಗ್ಗೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿಕೆ ನೀಡಿದ್ದಾರೆ. ಅಂಗಿ ತೆಗೆದು ದೇವಸ್ಥಾನದ ಒಳಗೆ ಹೋಗುವ ಅಗತ್ಯ ಇಲ್ಲ ಎಂಬುದನ್ನು ಕ್ರಾಂತಿಕಾರಿ ಗುರು ನಾರಾಯಣ ಗುರುಗಳು ಹೇಳಿದ್ದಾರೆ ಎಂದು ಪಿಣರಾಯಿ ವಿಜಯನ್ ಹೇಳಿರುವುದು ಸರಿ ಅಲ್ಲ ಎಂದು ಶ್ರೀ ಪ್ರಣವಾನಂದ ಸ್ವಾಮೀಜಿ ಹೇಳಿದರು.
ನಾರಾಯಣ ಗುರುಗಳು ಕ್ರಾಂತಿಕಾರಿ ಅಲ್ಲ. ಅವರು ದೇವರ ಸಮಾನರು. ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳಂತೆ ಅವರನ್ನು ಪೂಜಿಸಲಾಗುತ್ತದೆ. ಅವರು ಸನಾತನ ಧರ್ಮ ವಿಶ್ವಾಸಿಗಳೂ ಆಗಿದ್ದವರು. ಆದರೂ, ಕಮ್ಯುನಿಸ್ಟ್‌ನವರು ಉದ್ದೇಶಪೂರ್ವಕವಾಗಿ ಅವರ ಹೆಸರು ಬಳಸುತ್ತಿದ್ದಾರೆ. ಧಾರ್ಮಿಕ, ಸಾಮಾಜಿಕ ಆಚಾರ, ವಿಚಾರಗಳ ವಿಷಯದಲ್ಲಿ ಸರ್ಕಾರ ಮೂಗು ತೂರಿಸುವ ಅವಶ್ಯಕತೆ ಇಲ್ಲ. ಹಾಗಾದರೆ, ನಾವು ಸಹ ಬೇರೆ ಸಮುದಾಯದ ಧಾರ್ಮಿಕ ವಿಚಾರಗಳ ಬಗ್ಗೆ ಮಾತನಾಡಬೇಕಾಗುತ್ತದೆ ಎಂದು ತಿಳಿಸಿದರು.- - - -13ಕೆಡಿವಿಜಿ45.ಜೆಪಿಜಿ:
ರಾಣೆಬೆನ್ನೂರಿನ ಅರೇಮಲ್ಲಾಪುರದಲ್ಲಿ 40 ಶ್ರೀ ಶರಣ ಬಸವೇಶ್ವರ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮ ಆಯೋಜಿಸಿರುವ ಕುರಿತು ಶ್ರೀ ಪ್ರಣವಾನಂದ ಸ್ವಾಮೀಜಿ ದಾವಣಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.