5ರಂದು ಪ್ರಭುತ್ವ, ಸಂವಿಧಾನ ಆಶಯ ಕುರಿತ ರಾಷ್ಟ್ರೀಯ ಸಮ್ಮೇಳನ: ಸಚಿವ ಎಚ್.ಸಿ. ಮಹದೇವಪ್ಪ

| Published : Oct 01 2024, 01:20 AM IST

5ರಂದು ಪ್ರಭುತ್ವ, ಸಂವಿಧಾನ ಆಶಯ ಕುರಿತ ರಾಷ್ಟ್ರೀಯ ಸಮ್ಮೇಳನ: ಸಚಿವ ಎಚ್.ಸಿ. ಮಹದೇವಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಮೈಸೂರು ಮುಕ್ತ ವೇದಿಕೆ ಸಂಚಾಲಕ ರವಿ ಜೋಶಿ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಗೋಷ್ಠಿಯಲ್ಲಿ ಸುಪ್ರೀಂಕೋರ್ಟಿನ ಹಿರಿಯ ನ್ಯಾಯವಾದಿ ಸಂಜಯ್ ಹೆಗ್ಡೆ ಅವರು ಪ್ರಭುತ್ವ ಮತ್ತು ಸಂವಿಧಾನದ ಆಶಯಗಳು ಕುರಿತು ವಿಷಯ ಮಂಡಿಸುವರು.

ಕನ್ನಡಪ್ರಭ ವಾರ್ತೆ ಮೈಸೂರುವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಸಂದರ್ಭದಲ್ಲಿ ''''ಪ್ರಭುತ್ವ ಮತ್ತು ಸಂವಿಧಾನ ಆಶಯ'''' ಕುರಿತ ರಾಷ್ಟ್ರೀಯ ಸಮ್ಮೇಳನ ಆಯೋಜಿಸಲಾಗಿದೆ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ. ಮಹದೇವಪ್ಪ ಹೇಳಿದರು.ಸಂವಿಧಾನ ಅಂಗೀಕಾರದ ಅಮೃತ ಮಹೋತ್ಸವ ಅಂಗವಾಗಿ ದಸರಾ ರಾಷ್ಟ್ರೀಯ ಸಮ್ಮೇಳನ ಉಪ ಸಮಿತಿ, ಮೈಸೂರು ವಿವಿ ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರದ ಸಹಯೋಗದಲ್ಲಿ ಈ ಸಮ್ಮೇಳನ ಆಯೋಜಿಸಲಾಗಿದೆ ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಅ.5 ರಂದು ಬೆಳಗ್ಗೆ 10.30ಕ್ಕೆ ದೆಹಲಿಯ ಹಿರಿಯ ಪತ್ರಕರ್ತ ಮನೋಜ್ ಮಿತ್ತ ಉದ್ಘಾಟಿಸುವರು. ರಾಜ್ಯ ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ ಪ್ರೊ.ಎಸ್.ಆರ್. ನಿರಂಜನ ಅಧ್ಯಕ್ಷತೆ ವಹಿಸುವರು. ಮೈಸೂರು ಮುಕ್ತ ವೇದಿಕೆ ಸಂಚಾಲಕ ರವಿ ಜೋಶಿ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಗೋಷ್ಠಿಯಲ್ಲಿ ಸುಪ್ರೀಂಕೋರ್ಟಿನ ಹಿರಿಯ ನ್ಯಾಯವಾದಿ ಸಂಜಯ್ ಹೆಗ್ಡೆ ಅವರು ಪ್ರಭುತ್ವ ಮತ್ತು ಸಂವಿಧಾನದ ಆಶಯಗಳು ಕುರಿತು ವಿಷಯ ಮಂಡಿಸುವರು.ನಿವೃತ್ತ ಮೇಜರ್ ಜನರಲ್ ಎಸ್.ಜಿ. ಒಂಬತ್ಕೆರೆ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಗೋಷ್ಠಿಯಲ್ಲಿ ಸಂವಿಧಾನದ ಸಾಂಸ್ಕೃತಿಕ ಮೌಲ್ಯಗಳು ಕುರಿತು ಪ್ರೊ.ರಹಮತ್ ತರೀಕೆರೆ, ನಾಗರಿಕ ಸಮಾಜ ಮತ್ತು ಪ್ರಜಾಪ್ರಭುತ್ವ ಕುರಿತು ಮುಂಬೈ ಟಾಟಾ ವಿಜ್ಞಾನ ಸಂಸ್ಥೆಯ ಪ್ರೊ.ಎ. ರಾಮಯ್ಯ ವಿಷಯ ಮಂಡಿಸುವರು.ಪ್ರೊ.ಶಬ್ಬೀರ್ ಮುಸ್ತಾಫ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಗೋಷ್ಠಿಯಲ್ಲಿ ಹಿಂದುಳಿದ ವರ್ಗಗಳು ಮತ್ತು ಸಂವಿಧಾನ ಕುರಿತು ಪ್ರೊ.ಪೃಥ್ವಿದತ್ತ ಚಂದ್ರಶೋಭಿ, ಅಲ್ಪಸಂಖ್ಯಾತ ಸಮುದಾಯಗಳು ಮತ್ತು ಸಂವಿಧಾನ ಕುರಿತು ಹಿರಿಯ ಪತ್ರಕರ್ತ ಬಿ.ಎಂ. ಹನೀಫ್ ವಿಷಯ ಮಂಡಿಸುವರು.ಅ.6 ರಂದು ಬೆಳಗ್ಗೆ 10.30ಕ್ಕೆ ಪ್ರೊ.ಸುಧೀರ್ ಕೃಷ್ಣಸ್ವಾಮಿ ಅವರ ಅಧ್ಯಕ್ಷತೆ ಗೋಷ್ಠಿಯಲ್ಲಿ ಸಂವಿಧಾನ ಮತ್ತು ಒಕ್ಕೂಟ ವ್ಯವಸ್ಥೆ ಕುರಿತು ಪ್ರೊ.ರವಿವರ್ಮ ಕುಮಾರ್ ವಿಷಯ ಮಂಡಿಸುವರು. ಪ್ರೊ.ಡಿ. ಆನಂದ್ ಅಧ್ಯಕ್ಷತೆಯಲ್ಲಿ ನಡೆಯುವ ಗೋಷ್ಠಿಯಲ್ಲಿ ಪ.ಜಾತಿ, ಪಂಗಡಗಳು ಮತ್ತು ಸಂವಿಧಾನ ಕುರಿತು ಪ್ರೊ.ಎಸ್. ಸುಕುಮಾರ್ ವಿಷಯ ಮಂಡಿಸುವರು.ಪ್ರೊ.ವಿ.ಕೆ. ನಟರಾಜು ಅವರ ಅಧ್ಯಕ್ಷತೆಯಲ್ಲಿ ನಡೆಯುವ ಗೋಷ್ಠಿಯಲ್ಲಿ ಸಂವಿಧಾನದ ಆಶಯ ಮತ್ತು ಆರ್ಥಿಕತೆ ಕುರಿತು ಪ್ರೊ.ವಿನೋದ್ ವ್ಯಾಸುಲು ವಿಷಯ ಮಂಡಿಸುವರು. ಮಧ್ಯಾಹ್ನ 3.30 ರಿಂದ ಸಮಾರೋಪ ಸಮಾರಂಭ ನಡೆಯಲಿದೆ. ಎರಡು ದಿನಗಳ ಸಮ್ಮೇಳನದಲ್ಲಿ ಚಿಂತಕರು, ಸಾಹಿತಿಗಳು, ಆರ್ಥಿಕ ತಜ್ಞರು, ಚರಿತ್ರಾಕಾರರು, ಸಮಾಜಶಾಸ್ತ್ರಜ್ಞರು ಭಾಗವಹಿಸುವರು.