7ರಂದು ಉಡುಪಿ ಜಿಲ್ಲೆಯ ವಿವಿಧೆಡೆ ವಿದ್ಯುತ್‌ ವ್ಯತ್ಯಯ

| Published : Jan 05 2025, 01:31 AM IST

ಸಾರಾಂಶ

ವಿದ್ಯುತ್ ಮಾರ್ಗದ ಇನ್ಸುಲೇಟರ್‌ಗಳ ಬದಲಾವಣೆ ಹಾಗೂ ಶಿಥಿಲಗೊಂಡ ಗ್ರೌಂಡ್ ವಯರ್ ಬದಲಾವಣೆ, ತುರ್ತು ನಿರ್ವಹಣೆ ಕಾಮಗಾರಿ, ಎಚ್.ಟಿ/ಎಲ್.ಟಿ. ಮಾರ್ಗ ಸ್ಥಳಾಂತರ ಕಾಮಗಾರಿ ಹಿನ್ನೆಲೆ ಉಡುಪಿ ಜಿಲ್ಲೆಯ ವಿವಿಧೆಡೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ಉಡುಪಿ: ಹಿರಿಯಡ್ಕ-ಬಾರ್ಕೂರು-ಮಧುವನ ವಿದ್ಯುತ್ ಮಾರ್ಗದ ಇನ್ಸುಲೇಟರ್‌ಗಳ ಬದಲಾವಣೆ ಹಾಗೂ ಶಿಥಿಲಗೊಂಡ ಗ್ರೌಂಡ್ ವಯರ್ ಬದಲಾವಣೆ ಮಾಡುವ ಕಾಮಗಾರಿ ಜ.7ರಂದು ನಡೆಯಲಿದೆ. ಅಂದು ಮಧುವನ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಮಂದಾರ್ತಿ ಮತ್ತು ಬಾರ್ಕೂರು ಎಕ್ಸ್ ಪ್ರೆಸ್ ಫೀಡರ್‌ನಲ್ಲಿ ಹೊಸಾಳ, ಕಚ್ಚೂರು, ಹೇರಾಡಿ, ನಡೂರು, ಪಡುನೀಲಾವರ, ಬೆಣ್ಣೆಕುದ್ರು, ಶಿರೂರು, ನಂಚಾರು, ಹಿಲಿಯಾಣ, ಮಂದಾರ್ತಿ, ಹೆಬ್ಬಾಡಿ ಮತ್ತು ಸುತ್ತಮುತ್ತ ಬೆಳಗ್ಗೆ 9ರಿಂದ ಸಂಜೆ 5ರ ವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ಬ್ರಹ್ಮಾವರ: ಬ್ರಹ್ಮಾವರ ಉಪವಿದ್ಯುತ್ ಕೇಂದ್ರದಿಂದ ಹೊರಡುವ ಹೇರೂರು, ಉಪ್ಪೂರು ಫೀಡರ್ ಮಾರ್ಗದಲ್ಲಿ, ಹೆಗ್ಗುಂಜೆ ವಿದ್ಯುತ್ ಉಪಕೇಂದ್ರದಿಂದ ಹೊರಡುವ ನಂಚಾರು ಫೀಡರ್ ಮಾರ್ಗದಲ್ಲಿ, ಮಧುವನ ಉಪಕೇಂದ್ರದಿಂದ ಹೊರಡುವ ಬಾರ್ಕೂರು ಎಕ್ಸ್‌ಪ್ರೆಸ್ ಫೀಡರ್ ಮಾರ್ಗದಲ್ಲಿ, ಹೆಬ್ರಿ ಉಪವಿದ್ಯುತ್ ಕೇಂದ್ರದಿಂದ ಹೊರಡುವ ಕಳ್ತೂರು ಫೀಡರ್ ಮಾರ್ಗದಲ್ಲಿ ಜ.7ರಂದು ತುರ್ತು ನಿರ್ವಹಣೆ ಕಾಮಗಾರಿ, ಎಚ್.ಟಿ/ಎಲ್.ಟಿ. ಮಾರ್ಗ ಸ್ಥಳಾಂತರ ಕಾಮಗಾರಿ ನಡೆಯಲಿದೆ. ಆದ್ದರಿಂದ ಹೇರೂರು, ರುಡ್ ಸೆಟ್, ಬಿ.ಸಿ ರೋಡ್, ಬೈಕಾಡಿ, ಚಾಂತಾರು, ಶಿವಾಜಿನಗರ, ಭದ್ರಗಿರಿ, ಹೈರಾಬೆಟ್ಟು, ಕೆ.ಜಿ.ರೋಡ್, ಸಾಲ್ಮರ, ಮಾಯಾಡಿ, ಅಮ್ಮುಂಜೆ, ಕೋಟೆ ರೋಡ್, ನಿಡಂಬಳ್ಳಿ, ಕಲ್ಯಾಣಪುರ, ಶಿರೂರು, ಹಿಲಿಯಾಣ, ನಂಚಾರು, ಮುದ್ದೂರು, ಕಜ್ಕೆ , ಹೊಸಾಳ, ಕಚ್ಚೂರು, ರಂಗನಕೆರೆ, ಹೇರಾಡಿ, ಹನೆಹಳ್ಳಿ, ಕೂರಾಡಿ, ನಡೂರು, ಪಡುನೀಲಾವರ, ಬೆಣ್ನೆಕುದ್ರು ಕಳ್ತೂರು, ಸಂತೆಕಟ್ಟೆ. ಕರ್ಜೆ, ಹೊಸೂರು ಮತ್ತು ಸುತ್ತಮುತ್ತ ಬೆಳಗ್ಗೆ 9.30ರಿಂದ ಸಂಜೆ 5.30ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಶಿರ್ವ: ಶಿರ್ವ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಎಲ್ಲ ಫೀಡರ್ ಮಾರ್ಗದಲ್ಲಿ ಹಾಗೂ ಬೆಳಪು ವಿದ್ಯುತ್ ಉಪಕೇಂದ್ರದಿಂದ ಹೊರಡುವ ಕಾಪು ಸಿಟಿ ಫೀಡರ್ ಮಾರ್ಗದಲ್ಲಿ ಜ.7ರಂದು ಬೆಳಗ್ಗೆ 9ರಿಂದ ಸಂಜೆ 5.30ರ ವರೆಗೆ ಜಿಓಎಸ್ ಅಳವಡಿಸುವ, ಪರಿವರ್ತಕ ಅಳಡಿಸುವ ಮತ್ತು ಎಚ್.ಟಿ. ರೀಕಂಡಕ್ಟರಿಂಗ್ ಕಾಮಗಾರಿ ನಡೆಯಲಿದೆ.

ಆದ್ದರಿಂದ ಅಂದು ಉಳಿಯಾರಗೋಳಿ, ಪಾಂಗಳ, ಮೂಡಬೆಟ್ಟು, ಬಂಟಕಲ್ಲು, ಶಂಕರಪುರ, ಕುಂಜಾರುಗಿರಿ, ಸಾಲ್ಮರ, ಕುರ್ಕಾಲು, ಪಾಜೈ, ಇನ್ನಂಜೆ, ಪಡುಬೆಳ್ಳೆ, ಶಿರ್ವ, ಮಟ್ಟಾರು, ಪದವು, ಪಂಜಿಮಾರು, ಪಿಲಾರುಖಾನ, ಪೆರ್ನಾಲು, ಕುತ್ಯಾರು, (ಪುಂಚಲಕಾಡು), ಕಳತ್ತೂರು, ಚಂದ್ರನಗರ, ಕಾಪು, ಉಚ್ಚಿಲ, ಇನ್ನಂಜೆ, ಕಲ್ಯ, ಮೂಳೂರು, ಪೊಲಿಪು, ಕೊಪ್ಪಲಂಗಡಿ, ಅಬ್ಬೆಟ್ಟು, ಹೇರೂರು, ಮಜೂರು, ಮಲ್ಲಾರು, ಬೆಳಪು ಕುದ್ರೆಬೆಟ್ಟು, ಸುಭಾಷ್ ನಗರ, ಭಾರತ್ ನಗರ, ಕಾಪು ಪೇಟೆ, ಕೈಪುಂಜಾಲು, ಕೋತಲಕಟ್ಟೆ, ಕಾಪು ಪಡು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಕಾರ್ಕಳ: ಕೇಮಾರ್ ವಿದ್ಯುತ್ ಕೇಂದ್ರದಿಂದ ಹೊರಡುವ ಬಜಗೋಳಿ, ಹೊಸ್ಮಾರು, ಮಿಯ್ಯಾರು, ಸಾಣೂರು, ಇರ್ವತ್ತೂರು ಫೀಡರ್‌ಗಳಲ್ಲಿ, ಕಾರ್ಕಳ ಉಪಕೇಂದ್ರದಿಂದ ಹೊರಡುವ ಪದವು, ಬಂಡಿಮಠ, ದುರ್ಗಾ, ನೆಲ್ಲಿಕಟ್ಟೆ, ಜಾರ್ಕಳ, ಹಿರ್ಗಾನ ಫೀಡರ್‌ಗಳಲ್ಲಿ, ಬೆಳ್ಮಣ್ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಫೀಡರ್ ಗಳಾದ ಬೋಳ, ಬೆಳ್ಮಣ್, ನಂದಳಿಕೆ, ಮುಂಡ್ಕೂರು, ಸೂಡ ಫೀಡರ್‌ಗಳಲ್ಲಿ ಮತ್ತು ಬೆಳ್ಮಣ್ ಸ್ಟೇಷನ್‌ನಲ್ಲಿ ಹಾಗೂ ಅಜೆಕಾರು ಉಪವಿದ್ಯುತ್ ಸ್ಥಾವರದಿಂದ ಹೊರಡುವ ಅಜೆಕಾರು ಫೀಡರ್‌ಗಳಲ್ಲಿ ಜ.7ರಂದು ಬೆಳಗ್ಗೆ 9ರಿಂದ ಸಂಜೆ 5.30ರ ವರೆಗೆ ಮಾರ್ಗನಿರ್ವಹಣಾ / ತುರ್ತು ನಿರ್ವಹಣಾ ಕಾಮಗಾರಿ ನಡೆಯಲಿದೆ.

ಆದ್ದರಿಂದ ಕಾರ್ಕಳ ತಾಲೂಕಿನ ಬಜಗೋಳಿ, ಮುಡ್ರಾಲು, ಕಡಾರಿ, ಮುಳ್ಳೂರು, ಮಾಳ, ಗುರ್ಗಲ್ ಗುಡ್ಡೆ, ಚೌಕಿ, ಹುಕ್ರಟ್ಟೆ, ನೆಲ್ಲಿಕಾರು, ಹೊಸ್ಮಾರು, ಈದು, ನಲ್ಲೂರು, ಜೋಡುಕಟ್ಟೆ, ಕುಂಟಿಬೈಲು, ಮಿಯ್ಯಾರು, ರೆಂಜಾಳ, ಬೊರ್ಕಟ್ಟೆ, ರಾಮೇರಗುತ್ತು, ಕಾಜರಬೈಲು, ಅಡ್ಕರಪಲ್ಕೆ, ಕುರ್ಕಲ್ ಪಲ್ಕೆ, ಹಿನಾಪಾಡಿ, ನೆಲ್ಲಿಗುಡ್ಡೆ, ಕಳತ್ರಪಾದೆ, ಮಂಜಡ್ಕ, ಮಿಯ್ಯಾರ್ ಇಂಡಸ್ಟ್ರಿಯಲ್ ಏರಿಯಾ, ಜೋಡುರಸ್ತೆ, ಬಂಡಿಮಠ, ಪೆರ್ವಾಜೆ, ಪತ್ತೊಂಜಿಕಟ್ಟೆ, ಕಲ್ಲೊಟ್ಟೆ, ತೆಳ್ಳಾರು, ದುರ್ಗಾ, ಮಲೆಬೆಟ್ಟು, ಕಡಂಬಳ, ಕುಕ್ಕುಂದೂರು, ಅಯ್ಯಪ್ಪನಗರ, ಪಿಲಿಚಂಡಿಸ್ಥಾನ, ಗಣಿತನಗರ, ಜಾರ್ಕಳ, ಹಿರ್ಗಾನ, ಮುಜೂರು, ನೆಲ್ಲಿಕಟ್ಟೆ, ಎಣ್ಣೆಹೊಳೆ, ಚಿಕ್ಕಾಲ್ ಬೆಟ್ಟು, ಮಂಗಿಲಾರು, ಬೈಪಾಸ್, ಮುರತ್ತಂಗಡಿ, ಇರ್ವತ್ತೂರು, ಸಾಣೂರು, ಕುಂಟಲ್ಪಾಡಿ, ದೇಂದಬೆಟ್ಟು, ಪರ್ಪಲೆ, ಪಡ್ಡಾಯಿಗುಡ್ಡೆ, ಮುದ್ದಣ್ಣ ನಗರ, ಬಾ ವಗುತ್ತು, ಶುಂಠಿಗುಡ್ಡೆ, ಚಿಲಿಂಬಿ, ಕಲ್ಲಂಬಾಡಿ, ಗುಂಡ್ಯಡ್ಕ, ಪದವು, ಬೋಳ ಪಂಚಾಯತ್, ಪಿಲಿಯೂರು, ಕೆರೆಕೋಡಿ, ವಂಜಾರಕಟ್ಟೆ, ಬರೆಬೈಲು, ಕೆಂಪುಜೋರ, ಪುಕ್ಕಲ್ಲು, ಬೆಳ್ಮಣ್, ಗೋಳಿಕಟ್ಟೆ, ಜಂತ್ರ, ನೀಚಾಲು, ಬೆಳ್ಮಣ್ ದೇವಸ್ಥಾನ, ನಂದಳಿಕೆ, ಕೆದಿಂಜೆ, ಮಾವಿನಕಟ್ಟೆ, ದೇಂದೊಟ್ಟು ಪದವು, ಮುಂಡ್ಕೂರು, ಮುಲ್ಲಡ್ಕ, ಕೊಡಿಮಾರ್ , ನಾನಿಲ್ ತಾರ್, ಜಾರಿಗೆಕಟ್ಟೆ, ಸಂಕಲಕರಿಯ, ಸಚ್ಚರಿಪೇಟೆ, ಸೂಡ, ಸಕ್ಕೇರಿಬೈಲು, ಕೊರಜೆ, ಸೂಡ, ಗರಡಿ, ಪಡುಬೆಟ್ಟು, ಸೂಡ ದೇವಸ್ಥಾನ ಹೆಬ್ರಿ ತಾಲೂಕಿನ ಅಜೆಕಾರು ಪೇಟೆ, ಜ್ಯೋತಿ ಹೈಸ್ಕೂಲ್ ಹತ್ತಿರ ಮತ್ತು ಸುತ್ತಮುತ್ತ ವಿದ್ಯುತ್‌ ನಿಲುಗಡೆಯಾಗಲಿದೆ.