ಆ.2ಕ್ಕೆ ಎಚ್‌.ಎಸ್. ಪಾಟೀಲ್ ಪ್ರತಿಷ್ಠಾನದಿಂದ ಸನ್ಮಾನ

| Published : Jul 31 2025, 12:47 AM IST

ಸಾರಾಂಶ

ಡಾ. ಮಹಾಲಕ್ಷ್ಮಿ ಗುಗ್ಗರಿ, ಅನಿಲ್ ಅಂಗಡಿ, ಬಸವರಾಜ ಕಲ್ಲುಕುಟಗರ್, ಗುರುರಾಜ ಮಕರಬ್ಬಿ, ಪ್ರತಿಭಾವಂತ ವಿದ್ಯಾರ್ಥಿ ಕಾರ್ತಿಕ ಬಿಳಿಮಗ್ಗದ ಅವರಿಗೆ ಸನ್ಮಾನಿಸಲಾಗುತ್ತದೆ

ಮುಂಡರಗಿ: ಆ. 2 ರಂದು ಸಂಜೆ ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಪ್ರೌಢಶಾಲೆ ಮೈದಾನದಲ್ಲಿ ಗೆಳೆಯರ ಬಳಗ ಹಾಗೂ ಶರಣ ಲಿಂ. ಎಚ್.ಎಸ್.ಪಾಟೀಲ ಪ್ರತಿಷ್ಠಾನ ಮುಂಡರಗಿ ವತಿಯಿಂದ ಒಡನಾಡಿಗಳಿಗೆ, ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಮಹನೀಯರನ್ನು ಸನ್ಮಾನಿಸಲಾಗುತ್ತದೆ.

ಸುದ್ದಿಗೋಷ್ಠಿಯಲ್ಲಿ ವಿವರಣೆ ನಿಡಿದ ಗೆಳೆಯರ ಬಳಗದ ಮಹೇಶ ಅರಳಿ, ‌‌ನಾಡೋಜ ಡಾ. ಅನ್ನದಾನೀಶ್ವರ ಮಹಾಸ್ವಾಮೀಜಿ ಮತ್ತು ತೋಂಟದಾರ್ಯ ಮಠದ ಜ. ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಮಾತೋಶ್ರೀ ಕಮಲಮ್ಮ ಹನಮಂತಗೌಡ ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಸಚಿವ ಎಸ್.ಎಸ್. ಪಾಟೀಲ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ವಿಶ್ರಾಂತ ಶಿಕ್ಷಕ ಎಸ್.ಆರ್. ರಿತ್ತಿ ಉಪಸ್ಥಿತರಿರುವರು.

‌ಕಾರ್ಯಕ್ರಮದಲ್ಲಿ ಲಿಂ. ಎಚ್.ಎಸ್.ಪಾಟೀಲ ಪ್ರತಿಷ್ಠಾನದಿಂದ ಡಾ.ಸುನಿಲ್ ಅರಳಿ, ಆನಂದಗೌಡ ಪಾಟೀಲ, ವೀಣಾ ಹೇಮಂತಗೌಡ ಪಾಟೀಲ, ಡಾ. ಮಹಾಲಕ್ಷ್ಮಿ ಗುಗ್ಗರಿ, ಅನಿಲ್ ಅಂಗಡಿ, ಬಸವರಾಜ ಕಲ್ಲುಕುಟಗರ್, ಗುರುರಾಜ ಮಕರಬ್ಬಿ, ಪ್ರತಿಭಾವಂತ ವಿದ್ಯಾರ್ಥಿ ಕಾರ್ತಿಕ ಬಿಳಿಮಗ್ಗದ ಅವರಿಗೆ ಸನ್ಮಾನಿಸಲಾಗುತ್ತದೆ ಎಂದರು.

ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ್, ವೈ.ಎನ್. ಗೌಡರ್, ವಿಶ್ವನಾಥ ಕಪ್ಪತ್ತನವರ, ಕರಬಸಪ್ಪ ಹಂಚಿನಾಳ, ಶಿವಪ್ರಕಾಶ ಮಹಾಜನಶೆಟ್ಟರ್, ರಾಮಸ್ವಾಮಿ ಹೆಗಡಾಳ, ಕೊಟ್ರೇಶ ಅಂಗಡಿ, ಪಾರಸ್ ಮಲ್ ಮೆಹೆತಾ, ಅಂದಪ್ಪ ಕಡ್ಡಿ, ತಾಪಂ ಮಾಜಿ ಸದಸ್ಯ ತಿಪ್ಪಣ್ಣ ಕೊಂಚಿಗೇರಿ, ಡಾ. ವಿ.ಕೆ.ಸಂಕನಗೌಡರ, ಡಾ.ಅನ್ನದಾನಿ ಮೇಟಿ, ಪ್ರೊ. ಎ.ವಿ.ಹಳ್ಳಿಕೇರಿ, ಸಿ.ಎಸ್. ಅರಸನಾಳ, ಸಿ.ಕೆ. ಗಣಪನವರ, ಎಂ.ಡಿ. ಪಾಟೀಲ, ಕಲಾವಿದ ಬಿ.ಬಾಬು, ಸತೀಶ್ ಹುಯಿಲಗೋಳ, ದೇವಪ್ಪ ರಾಮೇನಹಳ್ಳಿ, ನಾಗಪ್ಪ ಶೇಡದ, ಪ್ರಭು ಅಬ್ಬೀಗೇರಿ, ನಿಂಗಪ್ಪ ಇಟಗಿ, ಶಾಂತಕುಮಾರ ಪೂಜಾರ ಅವರಿಗೂ ಸನ್ಮಾನ ಜರುಗಲಿದೆ ಎಂದು ಹೇಳಿದರು.

ಪ್ರಗತಿಪರ ರೈತರಾದ ಶಿವಾನಂದಪ್ಪ ಜಂತ್ಲಿ, ವೀರನಗೌಡ ಪಾಟೀಲ, ಗೋವಿಂದಪ್ಪ ದೊಡ್ಡಮನಿ, ಬಸಪ್ಪ ಕುಂಬಾರ, ಪ್ರಕಾಶ ಸಜ್ಜನರ, ಬಸವರಾಜ ಮಜ್ಜಿಗಿ, ಮಹೇಂದ್ರ ಹಂಚಿನಾಳ, ವೀರಣ್ಣ ಕವಲೂರ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಬಸವರಾಜ ಬಳ್ಳಾರಿ, ಮಂಜುನಾಥ ಕುಸುಗಲ್, ಜಾಫರ್ ಬಚೇರಿ, ಚೇತನ್ ಸೊಲಗಿ, ಬಸವರಾಜ ಬ್ಯಾಳಿ, ಮೌನೇಶ ಬಡಿಗೇರ ಸೇರಿದಂತೆ ಅನೇಕರಿಗೆ ಸನ್ಮಾನಿಸಿ ಗೌರವಿಸಲಾಗುವುದು ಎಂದು ತಿಳಿಸಿದರು.

ಪ್ರಕಾಶ ಜೈನ್, ನಯನಾ ಅಳವಂಡಿ ಹಾಗೂ ದ್ರಾಕ್ಷಾಯಿಣಿ ಹೊಂಬಾಳೆ ಅವರಿಂದ ರಸಮಂಜರಿ ಕಾರ್ಯಕ್ರಮ ಜರುಗಲಿದೆ.