ಫೆ.17ರಂದು ಸಂವಿಧಾನ ಜಾಗೃತ ಜಾಥಾ ಆರಂಭ

| Published : Feb 14 2024, 02:20 AM IST

ಸಾರಾಂಶ

ಕಕ್ಕೇರಾದಲ್ಲಿ ಸಂವಿಧಾನ ಜಾಗೃತ ಜಾಥಾದ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಸಂವಿಧಾನದ ಜಾಗೃತಿ ಜಾಥಾದ ಧ್ಯೇಯೋದ್ದೇಶಗಳನ್ನು ಪ್ರಸ್ತುತ ಪಡಿಸಲಾಗುವುದು.

ಕನ್ನಡಪ್ರಭ ವಾರ್ತೆ ಸುರಪುರ

ಸಂವಿಧಾನ ಜಾಗೃತಿ ಜಾಥಾವನ್ನು ಹುಣಸಗಿಯಿಂದ ಫೆ.16ರ ಬದಲಾಗಿ ಫೆ.17ರಂದು ಸಂಜೆ ಕಕ್ಕೇರಾಕ್ಕೆ ಬರುವುದನ್ನು ತಾಲೂಕು ಮಟ್ಟದ ಅಧಿಕಾರಿಗಳು ಬರಮಾಡಿಕೊಳ್ಳಲಿದ್ದಾರೆ. ಅಲ್ಲಿಂದ ತಾಲೂಕಿನಲ್ಲಿ ಸಂಚಾರ ನಡೆಸಲಿದೆ ಎಂದು ತಹಸೀಲ್ದಾರ್ ವಿಜಯಕುಮಾರ ಹೇಳಿದರು.

ನಗರದ ತಹಸೀಲ್ದಾರ್ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಅಧಿಕಾರಿಗಳ ಟಾಸ್ಕ್ ಪೋರ್ಸ್ ಸಭೆಯಲ್ಲಿ ಅವರು ಮಾತನಾಡಿದರು.

ಫೆ.17ರಂದು ಸಂಜೆ ಕಕ್ಕೇರಾದಲ್ಲಿ ಸಂವಿಧಾನ ಜಾಗೃತ ಜಾಥಾದ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಸಂವಿಧಾನದ ಜಾಗೃತಿ ಜಾಥಾದ ಧ್ಯೇಯೋದ್ದೇಶಗಳನ್ನು ಪ್ರಸ್ತುತ ಪಡಿಸಲಾಗುವುದು. ನಿತ್ಯ ನಾಲ್ಕೈದು ಗ್ರಾಮ ಪಂಚಾಯ್ತಿಗಳಲ್ಲಿ ಸಂಚಾರ ನಡೆಸಲಿದೆ. ಫೆ.20ರಂದು ಬೃಹತ್ ವೇದಿಕೆ ಕಾರ್ಯಕ್ರಮ ಕೆಂಭಾವಿ, 23ರಂದು ಅದ್ಧೂರಿ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಲಿದೆ ಎಂದರು.

ತಾಪಂ ಅಧಿಕಾರಿ ಬಸವರಾಜ ಸಜ್ಜನ್ ಮಾತನಾಡಿ, ಜಾಥಾವು ಬೆಳಗ್ಗೆ 9 ರಿಂದ ಆರಂಭವಾಗಿ ಸಂಜೆ 5 ಗಂಟೆಗೆ ಮುಕ್ತಾಯವಾಗಲಿದೆ. ಇದು ತಾಲೂಕಿನಲ್ಲಿ ಸಂಚಾರ ನಡೆಯುವವರೆಗೂ ಸಮಯ ಚಾಲ್ತಿಯಲ್ಲಿರುತ್ತದೆ. ಫೆ.18 ರಂದು ತಿಂಥಣಿ, ದೇವಾಪುರ, ದೇವತ್ಕಲ್, ಕಚಕನೂರು ಗ್ರಾಪಂ ವ್ಯಾಪ್ತಿಯಲ್ಲಿ ಸಂಚಾರ, ಫೆ.19ರಂದು ಆಲ್ದಾಳ, ವಾಗಣಗೇರಾ, ಪೇಠಾ ಅಮ್ಮಾಪುರ, ಹೆಗ್ಗಣದೊಡ್ಡಿ, ಫೆ.20ರಂದು ಮಾಲಗತ್ತಿ, ಕಿರದಳ್ಳಿ, ಕಚಕನೂರು, ಕರಡಕಲ್, ಕೆಂಭಾವಿ, ಫೆ.21ರಂದು ಯಕ್ತಾಪುರ, ಏವೂರು, ಯಾಳಗಿ, ಮಲ್ಲಾ ಬಿ, ಫೆ.22ರಂದು ನಗನೂರು, ದೇವರಗೋನಾಲ, ಬಾದ್ಯಾಪುರ, ದೇವಿಕೇರಾ, ಹೆಮನೂರು, ಫೆ.23ರಂದು ಸೂಗುರು, ಖಾನಾಪುರ ಎಸ್.ಹೆಚ್., ಅರೆಕೇರಾ ಮುಗಿದ ಬಳಿಕ ಸುರಪುರಕ್ಕೆ ಆಗಮಿಸಲಿದೆ ಎಂದು ತಿಳಿಸಿದರು.

ಸಮಾಜ ಕಲ್ಯಾಣಾಧಿಕಾರಿ ಎಂ.ಡಿ. ಸಲೀಮ್ ಮಾತನಾಡಿ, ಜಾಥಾ ನಿತ್ಯವು ಸಂಚರಿಸಲಿದ್ದು, ಒಂದೊಂದು ಇಲಾಖೆಯ ಅಧಿಕಾರಿಗಳು ನೋಡೆಲ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಾರೆ. ಅವರು ಎಲ್ಲ ಮೂಲ ಸೌಲಭ್ಯಗಳನ್ನು ಕಲ್ಪಿಸಿಕೊಡಲು ವ್ಯವಸ್ಥೆ ಮಾಡುತ್ತಾರೆ. ಫೆ.17ರಂದು ಕಕ್ಕೇರಾ ಪುರಸಭೆ ಮುಖ್ಯಾಧಿಕಾರಿ, ಸಹಾಯಕ ಪಶುಪಾಲನಾ ಇಲಾಖಾಧಿಕಾರಿ, 18ರಂದು ಶಿಶು ಅಭಿವೃದ್ಧಿ ಅಧಿಕಾರಿ, ಸಂಬಂಧಪಟ್ಟ ಪಿಡಿಒಗಳು, 19ರಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರು, ಸಂಬಂಧಪಟ್ಟ ಪಿಡಿಗಳು ಅದರ ಜವಾಬ್ದಾರಿ ನೋಡಿಕೊಳ್ಳಲಿದ್ದಾರೆ ಎಂದರು.

ಫೆ.20ರಂದು ಕೆಂಭಾವಿ ಪುರಸಭೆ ಮುಖ್ಯಾಧಿಕಾರಿ, ಬಿಸಿಎಂ ಇಲಾಖೆ, ಸಂಬಂಧ ಪಟ್ಟ ಪಿಡಿಒಗಳು, 21ರಂದು ಕೆಂಭಾವಿ ಪುರಸಭೆ ಮುಖ್ಯಾಧಿಕಾರಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕರು, 22ರಂದು ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕರು, ಸಂಬಂಧಪಟ್ಟ ಪಿಡಿಒಗಳು, 23ರಂದು ನಗರಸಭೆ, ಕಾರ್ಮಿಕ ಇಲಾಖೆ ಅಧಿಕಾರಿಗಳು, ಸಬಂಧಪಟ್ಟ ಪಿಡಿಒಗಳು ಬೀಳ್ಕೊಡುಗೆ ಸಮಾರಂಭದ ನೋಡಲ್ ಅಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ತಿಳಿಸಿದರು.

ಡಾ. ಶೃತಿ, ಡಾ. ಸುರೇಶ ಹಚ್ಚಡ, ಪರಮೇಶ್ವರ, ಡಾ. ಭೀಮರಾಯ ಹವಾಲ್ದಾರ, ಶಿವಪುತ್ರ, ಭಾಗ್ಯಶ್ರೀ, ಭೀಮಾಶಂಕರ ನಾಯಕ, ವಿಶ್ವನಾಥ್, ರಮೇಶ, ಜೇಲಸಿಂಗ್ ನಾಯಕ್, ರಾಜ ಪೋಲಂಪಲ್ಲಿ, ಜೆ.ಕೆ. ಪವಾರ, ಮಹ್ಮದ್ ಗಿಯಾಸ್, ಕವಿತಾ ಸೇರಿದಂತೆ ಇತರರಿದ್ದರು.