ಸಾರಾಂಶ
ಶ್ರೀಕುಂಟ ಬೋರಪ್ಪ ಶ್ರೀಸಿದ್ದೇಶ್ವರ ಟ್ರಸ್ಟ್‌ನಿಂದ ಫೆ.18ರಂದು ಸಿದ್ದೇಶ್ವರ ಸ್ವಾಮಿಗೆ ರುದ್ರಾಭಿಷೇಕ ಮತ್ತು ಅನುಜ್ಞೆ, ತೀರ್ಥ ಸಂಗ್ರಹ ಸಮೇತ ಯಾಗಶಾಲ, ಪ್ರವೇಶ ಬಲಿ, ಗಣಪತಿ ಪೂಜಾ, ಶೈವ ಪುಣ್ಯಾಹ ವಾಚನ, ಪಂಚಗಮ್ಯ ಸಾಧನ, ರಕ್ಷಾ ಬಂಧನ, ದೇವನಾಂದಿ, ಋತ್ವಿಗ್ವರಣ, ದಿಕ್ವಾಲಕಾರಾಧನ, ರಾಕ್ಷೋಘ್ನ, ಅಸ್ತ್ರ ಪೂಜೆ, ವಾಸ್ತು ಪೂಜೆ, ಅಸ್ತ್ರ ಹೋಮ ಮತ್ತು ವಾಸ್ತು ಹೋಮ, ಬಲಿ ಪ್ರಧಾನ, ಪರ್ಯಗ್ನೀಕರಣ, ಜಲಾಧಿವಾಸ, ದಾನ್ಯಾಧಿವಾಸ, ಶಯ್ಯಾಧಿವಾಸ, ಅಧಿವಾಸ ಹೋಮ, ಬಿಂಬಶುದ್ಧಿ, ರತ್ನನ್ಯಾಸ, ಯಂತ್ರನ್ಯಾಸ, ಅಷ್ಟ ಬಂಧನ ಪೂಜಾ ಕಾರ್ಯಕ್ರಮಗಳು ನಡೆಯಲಿವೆ.
ಕನ್ನಡಪ್ರಭ ವಾರ್ತೆ ಹಲಗೂರು
ಸಮೀಪದ ಅಂತರವಳ್ಳಿ ಸಿದ್ದೇಶ್ವರ ಬೆಟ್ಟ ಶ್ರೀಕ್ಷೇತ್ರದಲ್ಲಿ ನೂತನವಾಗಿ ನಿರ್ಮಾಣ ಮಾಡಲಾಗಿರುವ ಶಂಭುಲಿಂಗೇಶ್ವರ ಮತ್ತು ಜೀರ್ಣೋದ್ಧಾರಗೊಂಡಿರುವ ಭೈರವೇಶ್ವರ ಸ್ವಾಮಿ, ಸಿದ್ದೇಶ್ವರ ಸ್ವಾಮಿ ದೇವಸ್ಥಾನಗಳ ಲೋಕಾರ್ಪಣೆ ಕಾರ್ಯಕ್ರಮ ಫೆ.18 ಮತ್ತು ಫೆ.19 ರಂದು ನಡೆಯಲಿದೆ.ಶ್ರೀಕುಂಟ ಬೋರಪ್ಪ ಶ್ರೀಸಿದ್ದೇಶ್ವರ ಟ್ರಸ್ಟ್‌ನಿಂದ ಫೆ.18ರಂದು ಸಿದ್ದೇಶ್ವರ ಸ್ವಾಮಿಗೆ ರುದ್ರಾಭಿಷೇಕ ಮತ್ತು ಅನುಜ್ಞೆ, ತೀರ್ಥ ಸಂಗ್ರಹ ಸಮೇತ ಯಾಗಶಾಲ, ಪ್ರವೇಶ ಬಲಿ, ಗಣಪತಿ ಪೂಜಾ, ಶೈವ ಪುಣ್ಯಾಹ ವಾಚನ, ಪಂಚಗಮ್ಯ ಸಾಧನ, ರಕ್ಷಾ ಬಂಧನ, ದೇವನಾಂದಿ, ಋತ್ವಿಗ್ವರಣ, ದಿಕ್ವಾಲಕಾರಾಧನ, ರಾಕ್ಷೋಘ್ನ, ಅಸ್ತ್ರ ಪೂಜೆ, ವಾಸ್ತು ಪೂಜೆ, ಅಸ್ತ್ರ ಹೋಮ ಮತ್ತು ವಾಸ್ತು ಹೋಮ, ಬಲಿ ಪ್ರಧಾನ, ಪರ್ಯಗ್ನೀಕರಣ, ಜಲಾಧಿವಾಸ, ದಾನ್ಯಾಧಿವಾಸ, ಶಯ್ಯಾಧಿವಾಸ, ಅಧಿವಾಸ ಹೋಮ, ಬಿಂಬಶುದ್ದಿ, ರತ್ನನ್ಯಾಸ, ಯಂತ್ರನ್ಯಾಸ, ಅಷ್ಟ ಬಂಧನ ಪೂಜಾ ಕಾರ್ಯಕ್ರಮಗಳು ನಡೆಯಲಿವೆ.
ಫೆ.19ರಂದು ಬೆಳಗ್ಗೆ ಪುಣ್ಯಾಹ ವಾಚನ, ಪ್ರಧಾನ ಕಳಸ ಸ್ಥಾಪನೆ, ಅಗ್ನಿ ಪ್ರತಿಷ್ಠಾಪನೆ, ವಿಮಾನ ಕಳಸಾರೋಹಣ, ಬಿಂಜೀ ಕಲಾತತ್ವನ್ಯಾಸ, ಮತ್ತು ಪ್ರಾಣ ಪ್ರತಿಷ್ಟಾಪನೆ, ಕಲಾ ಸಂಯೋಜನೆ, ಮೂಲಮಂತ್ರ ಹೋಮ ಮತ್ತು ಕಲಾತತ್ವ ಹೋಮ, ಶ್ರೀರುದ್ರ ಹೋಮ, ಪೂರ್ಣಾಹುತಿ, ಕುಂಭಾಬೀಷೇಕ, ನೇತ್ರೋಲ್ಮಿಲನ, ಕನ್ಯಾ ನೀರೀಕ್ಷಣ, ಮಹಾ ಮಂಗಳಾರತಿ, ರಾಜೋಪಚಾರ, ರಾಷ್ತ್ರ್ರಾಶೀರ್ವಾದ ತೀರ್ಥ ಪ್ರಸಾದ ವಿನಿಯೋಗ, ಮಧ್ಯಾಹ್ನ 12 ಗಂಟೆಗೆ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ನಡೆಯಲಿದೆ.ಮೈಸೂರಿನ ಸಂಸ್ಕೃತ ಮಹಾ ವಿದ್ಯಾಲಯದ ಉಪನ್ಯಾಸಕ ದಯಾನಂದ್ ಮತ್ತು ಶೈವಾಗಮ ಪ್ರವೀಣ, ವಿದ್ವಾನ್ ಕೀಲಾರ ಕುಮಾರಸ್ವಾಮಿ ನೇತೃತ್ವದಲ್ಲಿ ಹಾಗೂ ಅಂತರವಳ್ಳಿ ಶ್ರೀ ಸಿದ್ದೇಶ್ವರ ಸ್ವಾಮಿ ದೇವಾಲಯದ ಅರ್ಚಕ ಸಮುದಾಯದ ಸಹಯೋಗದಲ್ಲಿ ಎಲ್ಲಾ ಧಾರ್ಮಿಕ ಕಾರ್ಯಗಳು ನಡೆಯಲಿವೆ ಎಂದು ಟ್ರಸ್ಟ್ ಅಧ್ಯಕ್ಷ ರಾಜೇಗೌಡ ತಿಳಿಸಿದ್ದಾರೆ.