ಜ. 22ರಂದು ರಾಮಮಂದಿರಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆ

| Published : Dec 29 2023, 01:32 AM IST

ಸಾರಾಂಶ

ರಾಮಮಂದಿರ ಉದ್ಘಾಟನೆಗೆ ಇಡೀ ದೇಶವೇ ಕಾಯುತ್ತಿದ್ದು ಅಂದು ಎಲ್ಲ ಸಮುದಾಯಗಳನ್ನು ಒಗ್ಗೂಡಿಸಿಕೊಂಡು ಸಂಭ್ರಮಾಚರಣೆ ಮಾಡಬೇಕು. ಇದೊಂದು ಅವಿಸ್ಮರಣೀಯ ದಿನವಾಗಿದೆ.

ಗೋಕರ್ಣ:

ಅಯೋಧ್ಯೆಯಲ್ಲಿ ಜ. 22ರಂದು ರಾಮಮಂದಿರ ಉದ್ಘಾಟನೆ ದಿನದಂದು ಆಯಾ ಊರಿನ ರಾಮಮಂದಿರಗಳಲ್ಲಿ ವಿಶೇಷ ಪೂಜೆ ಪ್ರಾರ್ಥನೆ, ವಿವಿಧ ಧಾರ್ಮಿಕ ಕಾರ್ಯಕ್ರಮ ನೆರವೇರಿಸುವ ಮೂಲಕ ಶ್ರೀರಾಮನಿಗೆ ನಮಿಸಿ ಸರ್ವರ ಒಳಿತಿಗೆ ಪ್ರಾರ್ಥಿಸೋಣ ಎಂದು ಗ್ರಾಮವಿಕಾಸ ಜಿಲ್ಲಾ ಜವಾಬ್ದಾರಿ ಗಣಪತಿ ಹೆಗ್ಗದ್ದೆ ಹೇಳಿದರು.

ಅವರು ಬುಧವಾರ ಮುಖ್ಯ ಕಡಲ ತೀರದ ಬಳಿ ಇರುವ ಶ್ರೀರಾಮ ಮಂದಿರದಲ್ಲಿ ಗೋಕರ್ಣ ತಾಲೂಕು ವ್ಯಾಪ್ತಿಯ ಎಲ್ಲ ಊರಿನ ಪ್ರಮುಖರಿಗೆ ಪ್ರತಿ ಮನೆಗೂ ನೀಡುವ ಆಮಂತ್ರಣ ಪತ್ರಿಕೆ ಮತ್ತು ಅಕ್ಷತೆ ನೀಡಿ ಬಳಿಕ ಮಾತನಾಡಿದರು. ಬಹುಕಾಲದ ಕನಸು ನನಸಾಗಿರುವುದನ್ನು ಸಂಭ್ರಮಿಸೋಣ. ಇವೆಲ್ಲವೂ ನಮ್ಮ ದೇವಾಲಯದ ಒಳಾಂಗಣದಲ್ಲಿ ಇರಲಿ. ಜತೆಯಲ್ಲಿ ಎಲ್ಲ ಸಮುದಾಯದವರನ್ನು ಆಹ್ವಾನಿಸೋಣ. ಇಡೀ ದೇಶವೇ ಕಾದು ಕುಳಿತಿರುವ ಅವಿಸ್ಮರಣೀಯ ಕ್ಷಣಕ್ಕೆ ನಾವೆಲ್ಲರೂ ಶಾಂತಿಯುತವಾಗಿ ದೇವರ ನಾಮಸ್ಮರಣೆಯೊಂದಿಗೆ ಅದ್ಧೂರಿಯಾಗಿ ಸ್ವಾಗತಿಸೋಣ ಎಂದರು. ಬಿಜೆಪಿ ಪ್ರಮುಖ ಕುಮಾರ ಮಾರ್ಕಾಂಡೆ, ಹರಿಹರೇಶ್ವರ ವೇದ ವಿದ್ಯಾಪೀಠದ ಪ್ರಾಚಾರ್ಯ ಉದಯ ಮಯ್ಯರ್, ವಿಭಾಗ ಸಹಕಾರ್ಯವಾಹಕ ನಾರಾಯಣ ಹೊಸ್ಮನೆ ಮತ್ತಿತರರು ಉಪಸ್ಥಿತರಿದ್ದರು. ತೊರ್ಕೆ ಭಾಗದಿಂದ ಗ್ರಾಪಂ ಅಧ್ಯಕ್ಷ ಆನಂದ ಕವರಿ, ಅನಿಲ್ ಕಾಮತ್, ಮಹೇಶ ನಾಯಕ, ಗೋಕರ್ಣದಿಂದ ಗ್ರಾಪಂ ಮಾಜಿ ಅಧ್ಯಕ್ಷ ಮಂಜುನಾಥ ಜನ್ನು, ಗ್ರಾಪಂ ಸದಸ್ಯೆ ಭಾರತಿ, ಗಣಪತಿ ಅಡಿ, ದೇವತೆ, ಶಂಕರ ಗೋಪಿ, ತಾಪಂ ಮಾಜಿ ಸದಸ್ಯ ಮಹೇಶ ಶೆಟ್ಟಿ, ಶ್ರೀಕಾಂತ ಶಾನಭಾಗ, ರಾಜೇಶ್ವರಿ ಮಯ್ಯರ್, ವೇ. ಸುಬ್ರಹ್ಮಣ್ಯ ಪಂಡಿತ್, ಬಂಕಿಕೊಡ್ಲ, ಗಂಗಾವಳಿ, ನಾಡುಮಾಸ್ಕೇರಿ ಭಾಗದಿಂದ ನವೀನ ನಾಡಕರ್ಣಿ, ರೋಹಿದಾಸ ಜನ್ನು, ಜಗದೀಶ ಅಂಬಿಗ, ಚಂದ್ರಶೇಖರ ನಾಯ್ಕ, ಚಂದ್ರಕಾಂತ ಶೆಟ್ಟಿ, ಮನೋಹರ ಹೆಗಡೆ, ನಾಗೇಶ ಗೌಡ, ತದಡಿಯ ಶೇಖರ ನಾಯ್ಕ, ಮೋಹನ ಮೂಡಂಗಿ, ಅರಣ ನಾಯ್ಕ, ಗಣೇಶ ಪಂಡಿತ್, ಈಶ್ವರ ಮೂಡಂಗಿ, ಅಗ್ರಗೋಣ, ಜುಗಾ, ಅಚವೆಯವರೆಗಿನ ಶ್ರೀರಾಮ ಭಕ್ತರು ಆಮಂತ್ರಣ ಪತ್ರಿಕೆ, ಅಕ್ಷತೆ ಸ್ವೀಕರಿಸಿದರು.