ಸಾರಾಂಶ
- ಜನಪ್ರತಿನಿಧಿಗಳಿಗೆ ಅಭಿನಂದನೆ, ಪುರಸ್ಕಾರ, ವಧು-ವರರ ಸಮಾವೇಶ: ಎಸ್.ರವಿಕುಮಾರ ಮಾಹಿತಿ - - - ಕನ್ನಡಪ್ರಭ ವಾರ್ತೆ, ದಾವಣಗೆರೆ
ಚಿತ್ರದುರ್ಗದ ಭೋವಿ ಗುರುಪೀಠದಲ್ಲಿ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮಿಗಳ ದೀಕ್ಷಾ ರಜತ ಮಹೋತ್ಸವ ಸಮಾರಂಭವನ್ನು ಜು.20ರಂದು ಹಮ್ಮಿಕೊಳ್ಳಲಾಗಿದೆ ಎಂದು ಭೋವಿ ಅಭಿವೃದ್ಧಿ ನಿಗಮ ಅಧ್ಯಕ್ಷ ಎಸ್.ರವಿಕುಮಾರ ಹೇಳಿದರು.ನಗರದ ಅಪೂರ್ವ ಹೋಟೆಲ್ ಸಭಾಂಗಣದಲ್ಲಿ ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ದೀಕ್ಷಾ ರಜತ ಮಹೋತ್ಸವ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಜನ್ಮದಿನವನ್ನು ರಾಷ್ಟ್ರೀಯ ಭೋವಿ ಜನೋತ್ಸವವಾಗಿ ಆಚರಿಸುವ ಪ್ರತೀತಿ ದಶಕದಿಂದಲೂ ಇದೆ ಎಂದರು.
ಹತ್ತಾರು ಕಾರ್ಯಕ್ರಮ ಆಯೋಜನೆ:ಸಮಾಜ ಸೇವಾದೀಕ್ಷೆ ನೆನಪು, ಪಟ್ಟಾಭಿಷೇಕ ಸಂಭ್ರಮ ಅಂಗವಾಗಿ ಸಂಸದರು, ಶಾಸಕರು, ವಿವಿಧ ಹಂತದ ಜನಪ್ರತಿನಿಧಿಗಳಿಗೆ ಅಭಿನಂದನೆ, ಪ್ರತಿಭಾ ಪುರಸ್ಕಾರ, ವಧು-ವರರ ಸಮಾವೇಶ, ಸಮಾಜದ ಬೆಳವಣಿಗೆ ಬಗ್ಗೆ ಸಂವಾದ, ರಕ್ತದಾನ ಶಿಬಿರ, ಆರೋಗ್ಯ ಶಿಬಿರ, ಪಿಎಚ್.ಡಿ ಪದವೀಧರರು, ಐಎಎಸ್- ಕೆಎಎಸ್ ಸಾಧಕರಿಗೆ ಸನ್ಮಾನ, ವೈದ್ಯಕೀಯ ಪದವಿ ಪೂರೈಸಿದವರಿಗೆ ಅಭಿನಂದನೆ ಹೀಗೆ ಹತ್ತಾರು ಕಾರ್ಯಕ್ರಮಗಳ ಮೂಲಕ ರಾಷ್ಟ್ರೀಯ ಭೋವಿ ಜನೋತ್ಸವ ಆಚರಿಸಲಾಗುವುದು ಎಂದು ತಿಳಿಸಿದರು.
ಭೋವಿ ಸಮುದಾಯದಲ್ಲಿ ಇನ್ನಷ್ಟು ಪ್ರೇರಕಶಕ್ತಿಯಾಗಿ ಬೆಳವಣಿಗೆ ಹೊಂದಲು ಸಮಾವೇಶ ಸ್ಫೂರ್ತಿಯಾಗಲಿದೆ. ಚಿತ್ರದುರ್ಗದ ಶ್ರೀ ಪೀಠದಲ್ಲಿ ಜು.20ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸುವರು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಕೃತಿ ಬಿಡುಗಡೆ ಮಾಡುವರು. ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಿಗಿ ಅಧ್ಯಕ್ಷತೆ ವಹಿಸುವರು. ಮಾಜಿ ಸಚಿವ ಅರವಿಂದ ಲಿಂಬಾವಳಿ, ಸಮಾಜದ ಹಾಲಿ-ಮಾಜಿ ಜನಪ್ರತಿನಿಧಿಗಳು, ಸಂಸದರು ಭಾಗವಹಿಸುವರು ಎಂದರು.ಚಿತ್ರದುರ್ಗದ ಶ್ರೀ ಭೋವಿ ಗುರುಪೀಠದ ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿ, ಸಮಾಜದ ಮುಖಂಡರಾದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಬಸವರಾಜ, ಎಚ್.ಜಯಣ್ಣ, ಶ್ರೀನಿವಾಸ, ಮಂಜುನಾಥ, ಬಿ.ಟಿ.ಸಿದ್ದಪ್ಪ, ಜಿ.ಎಸ್. ಶ್ಯಾಮ ಮಾಯಕೊಂಡ ಇತರರು ಇದ್ದರು.
- - -ಬಾಕ್ಸ್ ಸಿದ್ದರಾಮೇಶ್ವರ ಶ್ರೀ ಅಪಾರ ಶ್ರಮಮಂತ್ರಾಲಯದ ಶ್ರೀ ಸುಭುದೇಂದ್ರ ತೀರ್ಥರು, ಕನಕ ಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ, ಹಿಂದುಳಿದ- ದಲಿತ ಮಠಾಧೀಶರು ಸೇರಿದಂತೆ ರಾಜ್ಯದ ವಿವಿಧ ಮಠಾಧೀಶರು ಸಾನಿಧ್ಯ ವಹಿಸುವರು. ಅದೇ ದಿನ ಬೆಳಗ್ಗೆ ಧರ್ಮ ಸಂಸತ್ ನಡೆಯಲಿದೆ. ಸಮಾಜ ಬಾಂಧವರು ಭಾಗವಹಿಸಬೇಕು. ಭೋವಿ ಪೀಠ ಶಾಶ್ವತವಾಗಿ ಜನಾಂಗದ ಉನ್ನತ ಹಾದಿಯಲ್ಲಿ ಬೆಳಕಾದ ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿ ಅಲೆಮಾರಿ ಹಾಗೂ ಅರೆ ಅಲೆಮಾರಿ ಲಕ್ಷಣ ಹೊಂದಿರುವ ಭೋವಿ ಸಮುದಾಯವನ್ನು ಕಟ್ಟುವಲ್ಲಿ ಶ್ರಮಿಸಿದ್ದಾರೆ ಎಂದು ವಿವರಿಸಿದರು. ಭೋವಿ ಕಾಲನಿ, ಹಟ್ಟಿಗಳನ್ನು ಸ್ವಾಮೀಜಿ ಸುತ್ತಾಡಿ, ಜಾಗೃತಿ ಮೂಡಿಸಿದ್ದ ಫಲವಾಗಿ ಹಲವಾರು ಗ್ರಾಮಗಳು ವ್ಯಸನಮುಕ್ತವಾಗಿವೆ. ಬದಲಾವಣೆ ಹೊಂದಬೇಕೆಂಬ ವಿಚಾರವನ್ನು ಮನವರಿಕೆ ಮಾಡಿಕೊಡುವಲ್ಲಿ ಶ್ರೀಗಳ ಪ್ರಯತ್ನ ಮಾದರಿಯಾಗಿದೆ. ಹತ್ತು ಹಲವು ಮಾರ್ಗದಲ್ಲಿ ಭೋವಿ, ಒಡ್ಡರ ಸಮುದಾಯವನ್ನು ಪ್ರಗತಿಯತ್ತ ಕೊಂಡೊಯ್ಯುವಲ್ಲಿ ಸ್ವಾಮೀಜಿ ನಿರಂತರ ಮುನ್ನಡೆಯುತ್ತಿದ್ದಾರೆ. ಭೋವಿ ಪೀಠವನ್ನು ಅಲಂಕರಿಸಿದ ಶ್ರೀಗಳ ದೀಕ್ಷಾ ರಜತ ಮಹೋತ್ಸವವನ್ನು ಇಡೀ ಸಮಾಜ ಒಂದಾಗಿ ಆಚರಿಸುತ್ತಿದೆ ಎಂದು ಎಸ್.ರವಿಕುಮಾರ ತಿಳಿಸಿದರು.
- - --7ಕೆಡಿವಿಜಿ1:
ದಾವಣಗೆರೆಯಲ್ಲಿ ಭೋವಿ ಗುರುಪೀಠದಿಂದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ದೀಕ್ಷಾರಜತ ಮಹೋತ್ಸವ ಪೂರ್ವಭಾವಿಯಾಗಿ ಭೋವಿ ಸಮಾಜದ ಮುಖಂಡರು, ಸಮಾಜ ಬಾಂಧವರ ಸಭೆ ನಡೆಯಿತು.