ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ನಗರರದ ಅಗ್ರಹಾರದಲ್ಲಿನ ಶೃಂಗೇರಿ ಶಂಕರಮಠದಲ್ಲಿ ಆಷಾಢಮಾಸದ ಪ್ರಯುಕ್ತ 150ಕ್ಕೂ ಹೆಚ್ಚು ಪೌರಕಾರ್ಮಿಕರಿಂದ ಲಲಿತ ಸಹಸ್ರನಾಮ ಪಾರಾಯಣ ನಡೆಯಿತು.ನಗರ ಪಾಲಿಕೆ ಮಾಜಿ ಸದಸ್ಯೆ ಸೌಭಾಗ್ಯಮೂರ್ತಿ ಮತ್ತು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾ ಪ್ರತಿನಿಧಿ ಡಾ. ಲಕ್ಷ್ಮಿದೇವಿ ನೇತೃತ್ವದಲ್ಲಿ ಆಯೋಜಿಸಿದ್ದ ಪೌರಕಾರ್ಮಿಕರಿಂದ ಲಲಿತ ಸಹಸ್ರನಾಮ ಪಾರಾಯಣದಲ್ಲಿ ಚಾಮುಂಡಿಪುರಂ ಬಡಾವಣೆ ಬನ್ನಾರಿಯಮ್ಮ ತಂಡ, ವಿಶ್ವೇಶ್ವರನಗರದ ದೇವಸೇನಾ ತಂಡ, ಸಿಲ್ಕ್ ಫ್ಯಾಕ್ಟರಿ ವೃತ್ತದ ದುರ್ಗಾದೇವಿ ತಂಡ, ಅಕ್ಕನಬಳಗದ ರೇಣುಕಾದೇವಿ ತಂಡ, ವಸ್ತುಪ್ರದರ್ಶನ ಆವರಣದ ಕಾಮಾಕ್ಷಿ ದೇವಿ ತಂಡ, ಶಂಕರಮಠದ ಶಾರದಾದೇವಿ ತಂಡ, ಕನಕಗಿರಿ ಕರುಮಾರಿಯಮ್ಮ ತಂಡ, ಗಾಡಿ ಚೌಕದ ಮೀನಾಕ್ಷಿದೇವಿ ತಂಡ ಸೇರಿದಂತೆ ವಿವಿಧ ತಂಡಗಳನ್ನ ರಚಿಸಿ ಕಳೆದ 20 ದಿನಗಳಿಂದ ಮೈಸೂರಿನ ವಿವಿಧ ಬಡಾವಣೆಗಳಲ್ಲಿ ಲಲಿತಸಹಸ್ರನಾಮ ಹೇಳಿಕೊಟ್ಟು ಅಭ್ಯಾಸ ಮಾಡಿಸಿ ಶಂಕರಮಠದಲ್ಲಿ ಸಾಮೂಹಿಕವಾಗಿ ಲಲತ ಸಹಸ್ರನಾಮ ಕುಂಕುಮಾರ್ಚನೆ ಮಾಡಿದರು. ಬಳಿಕ ಪೌರಕಾರ್ಮಿಕರಿಗೆ ಬಾಗಿನ ಅರ್ಪಿಸಿದರು.
ಶಾಸಕ ಟಿ.ಎಸ್. ಶ್ರೀವತ್ಸ, ಎಂಡಿಎ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಸಂಘಟನಾ ಕಾರ್ಯದರ್ಶಿ ಡಾ. ಲಕ್ಷ್ಮಿದೇವಿ, ನಗರ ಪಾಲಿಕೆ ಮಾಜಿ ಸದಸ್ಯೆ ಸೌಭಾಗ್ಯ ಮೂರ್ತಿ,ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ. ಪ್ರಕಾಶ್, ಕಲ್ಪನಾ ರಾಮಚಂದ್ರ, ಮಠದ ವ್ಯವಸ್ಥಾಪಕ ಶೇಷಾದ್ರಿ, ಹರೀಶ್, ಎಂ.ಆರ್. ಬಾಲಕೃಷ್ಣ, ಅಜಯ್ ಶಾಸ್ತ್ರಿ, ರಂಗನಾಥ್ ಮೊದಲಾದವರು ಇದ್ದರು.