ಸಾರಾಂಶ
ಕೋಟೆಗೆ ಆಪತ್ತು ಎದುರಾದಾಗ ಸಮಯಪ್ರಜ್ಞೆಯಿಂದ ವೈರಿಗಳ ರುಂಡ ಚಂಡಾಡಿದರು
ಕುಕನೂರು: ಒನಕೆ ಓಬವ್ವ ಶೌರ್ಯಕ್ಕೆ ಮಾದರಿಯಾಗಿದ್ದಾರೆ ಎಂದು ಮುಖಂಡ ನಾಗಪ್ಪ ಕಲ್ಮನಿ ಹೇಳಿದರು.
ಪಟ್ಟಣದ ವೀರ ವನಿತೆ ಒನಕೆ ಓಬವ್ವ ವೃತ್ತದಲ್ಲಿ ವನಿಕೆ ಓಬವ್ವ ಜಯಂತ್ಯುತ್ಸವ ನಿಮಿತ್ತ ವೃತ್ತಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಓಬವ್ವ ಕೋಟೆ ಕಾವಲುಗಾರನ ಹೆಂಡತಿಯಾಗಿ, ಕೋಟೆಗೆ ಆಪತ್ತು ಎದುರಾದಾಗ ಸಮಯಪ್ರಜ್ಞೆಯಿಂದ ವೈರಿಗಳ ರುಂಡ ಚಂಡಾಡಿದರು. ಧೈರ್ಯದಿಂದ ಒನಕೆ ಹಿಡಿದು ವೀರ ವನಿತೆಯಾದಳು. ಓಬವ್ವ ಶತ್ರುಗಳನ್ನು ಹಿಮ್ಮೆಟ್ಟಿಸಿ ಎಲ್ಲರಿಗೂ ಮಾದರಿಯಾಗಿದ್ದಾಳೆ. ಹೆಣ್ಣುಮಕ್ಕಳು ಶೈಕ್ಷಣಿಕವಾಗಿ ಉತ್ತಮ ಪ್ರಗತಿ ಕಾಣಬೇಕು. ನಮ್ಮ ಕ್ಷೇತ್ರದ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದರೆ ನಮ್ಮಊರಿನ ಕೀರ್ತಿ ಹೆಚ್ಚುತ್ತದೆ ಎಂದರು.ಪಪಂ ಉಪಾಧ್ಯಕ್ಷ ಪ್ರಶಾಂತ ಆರುಬೆರಳಿನ, ಪಪಂ ಸದಸ್ಯ ರಾಮಣ್ಣ ಬಂಕದಮನಿ, ಮುಖ್ಯಾಧಿಕಾರಿ ನಭಿಸಾಬ್ ಕಂದಗಲ್, ಗ್ರೇಡ್ 2 ತಹಸೀಲ್ದಾರ್ ಮುರುಳಿದರ್ ಕುಲಕರ್ಣಿ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ರಾಮಚಂದ್ರಪ್ಪ ಹಣಗಿ, ಯಲ್ಲಪ್ಪ ಕಲ್ಮನಿ, ಶರಣಪ್ಪ ಕಾಳಿ, ಸಣ್ಣ ಯಲ್ಲಪ್ಪ ಕಲ್ಮನಿ, ಲಕ್ಷ್ಮಣ ಮಂಡಲಗೇರಿ, ರಾಜೇಶ ಕಾತರಕಿ, ಗುದ್ನೇಶ ಚಲವಾದಿ, ಮುತ್ತು ವಾಲ್ಮೀಕಿ, ದುರ್ಗಪ್ಪ ಭಜಂತ್ರಿ, ಮಂಜುನಾಥ ಯಡಿಯಾಪುರ, ಹನುಮಪ್ಪ ಘಾಟಿ, ಉಮೇಶ ಚಲವಾದಿ, ರವಿ ಹಿರೇಮನಿ ಇತರರು ಇದ್ದರು.
;Resize=(128,128))
;Resize=(128,128))
;Resize=(128,128))