ಸಾರಾಂಶ
ಕರ್ನಾಟಕ ನಾಯರ್ ಸರ್ವಿಸ್ ಸೊಸೈಟಿ ಉಡುಪಿ ಘಟಕದ ಕಚೇರಿ ಉದ್ಘಾಟನೆ ಮತ್ತು ಓಣಂ ಸಂಭ್ರಮಾಚರಣೆ ಕುಂಜಿಬೆಟ್ಟು ಐ ವೈ ಸಿ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಎಂಐಟಿ ಪ್ರಾಧ್ಯಪಕರಾದ ಡಾ. ಅಮೃತ್ ರಾಜ್ ನೆರವೇರಿಸಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಕರ್ನಾಟಕ ನಾಯರ್ ಸರ್ವಿಸ್ ಸೊಸೈಟಿ ಉಡುಪಿ ಘಟಕದ ಕಚೇರಿ ಉದ್ಘಾಟನೆ ಮತ್ತು ಓಣಂ ಸಂಭ್ರಮಾಚರಣೆ ಕುಂಜಿಬೆಟ್ಟು ಐ ವೈ ಸಿ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಎಂಐಟಿ ಪ್ರಾಧ್ಯಪಕರಾದ ಡಾ. ಅಮೃತ್ ರಾಜ್ ನೆರವೇರಿಸಿದರು.ಬಳಿಕ ಮಾತನಾಡಿದ ಅವರು ಓಣಂ ಸಂಭ್ರಮ ನಡೆಸುತ್ತಿರುವ ಕೆ. ಎನ್. ಎಸ್. ಸಂಘಟನೆಯ ಕಾರ್ಯಕ್ರಮಗಳ ಬಗ್ಗೆ ಶ್ಲಾಘಿಸಿದರು. ಓಣಂ ಹಬ್ಬದ ಪ್ರಮುಖ್ಯತೆಗಳನ್ನು ನಮಗೆ ನಮ್ಮ ಹಿರಿಯರುಗಳು ಹೇಳಿಕೊಡುತ್ತಿದ್ದರು. ಇತ್ತೀಚೆಗೆ ಹಬ್ಬಗಳ ಆಚರಣೆಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಆದ್ದರಿಂದ ಹಬ್ಬಗಳ ಸಂತೋಷವನ್ನು ಉಳಿಸಲು ಈ ಹಿಂದೆ ಆಚರಿಸುತ್ತಿದ್ದ ಅಚಾರಗಳು ಅನುಷ್ಟಾನಗಳನ್ನು ಮುಂದಿನ ಪೀಳಿಗೆಯ ಮಕ್ಕಳಿಗೆ ತಿಳಿಸಬೇಕಾಗಿದೆ. ನಮ್ಮ ಸಂಪ್ರದಾಯಗಳು ಬಿಟ್ಟು ಹೋಗದಂತೆ ನೋಡಿಕೊಳ್ಳುವ ಜವಬ್ದಾರಿ ಕೆ. ಎನ್. ಎಸ್. ನಂತಹ ಸಂಸ್ಥೆಗಳಿಗಿದೆ ಎಂದರು.ಕಾರ್ಯಕ್ರಮದಲ್ಲಿ ಕೆ. ಎನ್. ಎಸ್. ರಾಜ್ಯಾಧ್ಯಕ್ಷ ಮನೋಹರ್ ಕುರುಪ್, ರಾಜ್ಯ ಕಾರ್ಯದರ್ಶಿ ಟಿ..ವಿ. ನಾರಾಯಣ, ಮಂಗಳೂರು ಕೆ. ಎನ್. ಎಸ್. ಅಧ್ಯಕ್ಷರಾದ ಶ್ರೀಮುರುಳಿ, ಎನ್. ಡಿ. ಸತೀಶ್, ರಾಮಚಂದ್ರ ಪಲೇರಿ, ಉಡುಪಿ ಅಧ್ಯಕ್ಷರಾದ ಪಿ. ಎ. ಮೋಹನ್ ದಾಸ್, ಕಾರ್ಯದರ್ಶಿ ಸುಲೊಚನಾ ಜಯರಾಜ್, ಖಜಾಂಜಿ ಸಂತೋಷ್ ಕುಮಾರ್ ಎಂ. ಉಪಸ್ಥಿತರಿದ್ದರು. ಪ್ರಮುಖರಾದ ಅಪರ್ಣ, ಶ್ರೀದೇವಿ ಕಾರ್ಯಕ್ರಮ ನಿರೂಪಿಸಿದರು.