ಪಿಕೆಟಿಬಿ ಆವರಣದಲ್ಲಿ ನೆಪ್ರೋಯುರಾಲಜಿಯ ನೂತನ ಕಟ್ಟಡ ನಿರ್ಮಾಣಕ್ಕೆ ನಾಳೆ ಸಿಎಂ ಶಿಲಾನ್ಯಾಸ

| Published : Jul 18 2025, 12:47 AM IST

ಪಿಕೆಟಿಬಿ ಆವರಣದಲ್ಲಿ ನೆಪ್ರೋಯುರಾಲಜಿಯ ನೂತನ ಕಟ್ಟಡ ನಿರ್ಮಾಣಕ್ಕೆ ನಾಳೆ ಸಿಎಂ ಶಿಲಾನ್ಯಾಸ
Share this Article
  • FB
  • TW
  • Linkdin
  • Email

ಸಾರಾಂಶ

19ರಂದು ಪಿಕೆಟಿಬಿ ಆವರಣದಲ್ಲಿರುವ ಒಂದು ಎಕರೆ ಜಾಗದಲ್ಲಿ ನೆಫ್ರೊಯುರಾಲಜಿಯ ನೂತನ ಕಟ್ಟಡವನ್ನು ನಿರ್ಮಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ನೆರವೇರಿಸುವರು

ಕನ್ನಡಪ್ರಭ ವಾರ್ತೆ ಮೈಸೂರುರಾಜ್ಯ ಸರ್ಕಾರವು ಮೈಸೂರು ಹಾಗೂ ಸುತ್ತಮುತ್ತಲ ಜಿಲ್ಲೆಗಳಿಗೆ ಅನುಕೂಲವಾಗುವಂತೆ ಜು. 19ರಂದು ಪಿಕೆಟಿಬಿ ಆವರಣದಲ್ಲಿರುವ ಒಂದು ಎಕರೆ ಜಾಗದಲ್ಲಿ ನೆಫ್ರೊಯುರಾಲಜಿಯ ನೂತನ ಕಟ್ಟಡವನ್ನು ನಿರ್ಮಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ನೆರವೇರಿಸುವರು ಎಂದು ಮೈಸೂರಿನ ನೆಫ್ರೋ ಯುರಾಲಜಿ ಸಂಸ್ಥೆಯ ಮುಖ್ಯಸ್ಥ ಡಾ.ಜೆ.ಬಿ. ನರೇಂದ್ರ ಹೇಳಿದ್ದಾರೆ.ಸಂಸ್ಥೆಯ ಕಟ್ಟಡ ನಿರ್ಮಾಣ ಮಾಡಲು ಮುಖ್ಯಮಂತ್ರಿಗಳು ಹಾಗೂ ಶಾಸಕ ಕೆ. ಹರೀಶ್‌ ಗೌಡ, ವಿಧಾನ ಪರಿಷತ್‌ ಸದಸ್ಯರಾದ ಯತೀಂದ್ರ ಸಿದ್ದರಾಮಯ್ಯ ಮತ್ತು ಕೆ.ಆರ್‌. ನಗರ ಕ್ಷೇತ್ರದ ಶಾಸಕ ಡಿ. ರವಿಶಂಕರ್‌ ಅವರು ಮೈಸೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಾದ ಮಂಡ್ಯ, ಹಾಸನ, ಕೊಡಗು, ಚಾಮರಾಜನಗರದ ಬಡ ರೋಗಿಗಳಿಗೆ ಅನುಕೂಲವಾಗುವಂತೆ ಕೊಡುಗೆ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.ನೆಫ್ರೋಯುರಾಲಜಿ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕರು ಹಾಗೂ ಹಾಲಿ ಆಡಳಿತ ಮಂಡಳಿಯ ಸದಸ್ಯರಾದ ಡಾ.ಜಿ.ಕೆ. ವೆಂಕಟೇಶ್‌ ಮತ್ತು ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಮಾಜಿ ನಿರ್ದೇಶಕರಾದ ಡಾ. ಚಂದ್ರಶೇಖರ್‌ ರತ್ಕಲ್‌, ಡಾ. ಎನ್.ಎಚ್‌. ನಾಗರಾಜು ಹಾಗೂ ಡಾ.ಆರ್‌. ಕೇಶವಮೂರ್ತಿ ಮತ್ತು ಹಾಲಿ ನಿರ್ದೇಶಕರಾದ ಡಾ.ಎಂ. ಶಿವಲಿಂಗಯ್ಯ ಅವರು ಈ ಕಟ್ಟಡ ನಿರ್ಮಾಣ ಮಾಡಲು ಶ್ರಮ ವಹಿಸುವಲ್ಲಿ ಪ್ರಮುಖರಾಗಿದ್ದಾರೆ.2018ರಲ್ಲಿ ಮೈಸೂರು ಹಾಗೂ ಸುತ್ತಮುತ್ತ ಜಿಲ್ಲೆಗಳಿಗೆ ಅನುಕೂಲವಾಗುವಂತೆ ಕೆ.ಆರ್‌. ಆಸ್ಪತ್ರೆಯ ಆವರಣದಲ್ಲಿ ಐಪಿಡಿ, ಓಪಿಡಿ ಕಟ್ಟಡದ 4ನೇ ಮಹಡಿಯಲ್ಲಿ 60 ಹಾಸಿಗೆಯ ಸಾಮರ್ಥ್ಯವುಳ್ಳ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಒಳಗೊಂಡಂತೆ ಘಟಕವನ್ನು ರೋಗಿಗಳಿಗೆ ಸಮರ್ಪಣೆ ಮಾಡಲಾಗಿದೆ. ನೆಫ್ರೋ ಯುರಾಲಜಿ ಮಸಂಸ್ಥೆಯ ಘಟಕವು 2018ರಿಂದ ಪ್ರಾರಂಭವಾಗಿ ಇಲ್ಲಿಯವರೆಗೆ ಲಕ್ಷಾಂತರ ರೋಗಿಗಳಿಗೆ ಮೂತ್ರಪಿಂಡ ಹಾಗೂ ಮೂತ್ರಕೋಶ ಕಾಯಿಲೆಗೆ ಚಿಕಿತ್ಸೆ ಯನ್ನು ವರ್ಷವಿಡಿ ನಿರಂತರವಾಗಿ ನೀಡುತ್ತಿದೆ ಎಂದು ಅವರು ತಿಳಿಸಿದ್ದಾರೆ.ಸದರಿ ಆಸ್ಪತ್ರೆಯು ಪಿಕೆಟಿಬಿ ಆಸ್ಪತ್ರೆಯ ಆವರಣದಲ್ಲಿರುವ ಶ್ರೀ ಜಯದೇವ ಆಸ್ಪತ್ರೆ ಹಾಗೂ ಸಂಶೋಧನ ಸಂಸ್ಥೆಯ ಹಿಂಭಾಗದಲ್ಲಿರುವ ಕುಂಬಾರಕೊಪ್ಪಲು ರಸ್ತೆಗೆ ಹೊಂದಿಕೊಂಡಂತೆ ಇರುವ ಸ್ಥಳದಲ್ಲಿ ಸ್ವಂತ ಕಟ್ಟಡ ಹೊಂದುವ ಸಲುವಾಗಿ 2024-25ನೇ ಸಾಲಿನ ಆಯವ್ಯಯದಲ್ಲಿ ಸರ್ಕಾರದಿಂದ ಒಂದು ಎಕರೆ ಜಾಗವನ್ನು ಮಂಜೂರು ಮಾಡಿ 100 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯನ್ನು ಉನ್ನತೀಕರಿಸಲು ರು. 117.71 ಕೋಟಿಗಳ ನೂತನ ಕಟ್ಟಡವನ್ನು ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಯಿತು ಎಂದು ಅವರು ಮಾಹಿತಿ ನೀಡಿದ್ದಾರೆ.ಈ ಕಟ್ಟಡದಲ್ಲಿ ನೂತನ ವಿನ್ಯಾಸದೊಂದಿಗೆ ರೋಗಿಗಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಹೈಟೆಕ್‌ ಮಾದರಿಯ ಚಿಕಿತ್ಸಾ ಸೌಲಭ್ಯವನ್ನು ಒದಗಿಸುವುದು ಈ ಆಸ್ಪತ್ರೆಯ ಮೊದಲ ಗುರಿಯಾಗಿರುತ್ತದೆ. ಸದರಿ ಕಟ್ಟಡದಲ್ಲಿ ಅತ್ಯಾಧುನಿಕ ಸೇವೆಗಳನ್ನೊಳಗೊಂಡ 100 ಹಾಸಿಗೆ ಸಾಮಥ್ಯದ ಜಿ ಪ್ಲಸ್‌ 6 ಅಂತಸ್ತಿನ ಆಸ್ಪತ್ರೆಯು ನಿರ್ಮಾಣಗೊಳ್ಳುತ್ತಿದೆ. ಇದರಲ್ಲಿ ಕೆಲವು ವಿಶೇಷವಾಗಿ ಈ ಕೆಳಕಂಡ ಸೌಲಭ್ಯವನ್ನು ಒದಗಿಸಲಾಗುವುದು.50 ಹಾಸಿಗೆಯ ಸಾಮರ್ಥ್ಯದ ಡಯಾಲಿಸಿಸ್‌ ಘಟಕ, 20 ಹಾಸಿಗೆ ಸಾಮರ್ಥ್ಯದ ತೀವ್ರ ನಿಗಾ ಘಟ, 4 ಕೊಠಡಿಗಳ ಮಾಡ್ಯಲರ್‌ಶಸ್ತ್ರಚಿಕಿತ್ಸಾ ವಿಭಾಗ, ಏಕಕಾಲದಲ್ಲಿ 100 ಜನರು ಆಸೀನರಾಗುವಂತ ವಿಶೇಷ ಸೌಲಭ್ಯವುಳ್ಳ ಸಭಾಂಗಣ, ಡಿಜಿಟಲ್‌ ಲೈಬ್ರರಿ, ಕಟ್ಟಡದ ಹೊರಗಡೆ ವಿಶಾಲವಾದ ವಾಹನ ನಿಲ್ದಾಣ ಮತ್ತು ರೋಗಿಗಳ ವಿಶ್ರಾಂತಿಧಾಮ ವಿರುತ್ತದೆ ಎಂದು ಅವರು ತಿಳಿಸಿದ್ದಾರೆ.