ಕನ್ನಡಪ್ರಭ ವಾರ್ತೆ ಚಿಕ್ಕೋಡಿ ಒಂದು ದೇಶ ಒಂದು ಕಾನೂನು ಬೇಕು, ಜನಸಂಖ್ಯೆ ನಿಯಂತ್ರಣ ಕಾಯ್ದೆ ಎಲ್ಲಾ ಧರ್ಮದವರಿಗೂ ಅನ್ವಯವಾಗಬೇಕು ಎಂದು ನಿವೃತ್ತ ವಾಯುಸೇನಾ ಕ್ಯಾಪ್ಟನ್ ವಿಲಾಸ ಜಂಗಲಿ ಹೇಳಿದರು.
ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ಒಂದು ದೇಶ ಒಂದು ಕಾನೂನು ಬೇಕು, ಜನಸಂಖ್ಯೆ ನಿಯಂತ್ರಣ ಕಾಯ್ದೆ ಎಲ್ಲಾ ಧರ್ಮದವರಿಗೂ ಅನ್ವಯವಾಗಬೇಕು ಎಂದು ನಿವೃತ್ತ ವಾಯುಸೇನಾ ಕ್ಯಾಪ್ಟನ್ ವಿಲಾಸ ಜಂಗಲಿ ಹೇಳಿದರು.ಪಟ್ಟಣದ ಕಿವಡ ಮೈದಾನದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಭಾನುವಾರ ಹಮ್ಮಿಕೊಂಡಿದ್ದ ತಾಲೂಕು ವಿರಾಟ್ ಸಮಾವೇಶದಲ್ಲಿ ಮಾತನಾಡಿದರು. ಹಿಂದೂ ರಾಷ್ಟ್ರನಿರ್ಮಾಣಕ್ಕಾಗಿ ನಾವೆಲ್ಲಾ ಒಂದಾಗಬೇಕಾಗಿದೆ. ಚಿಕ್ಕೋಡಿಗೆ ತನ್ನದೆಯಾದ ಐತಿಹಾಸಿಕ ಹಿನ್ನಲೆ ಇದೆ ಎಂದರು.ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖ ಮಂಗೇಶ ಭೇಂಡೆ ಮಾತನಾಡಿ, ಚಿಕ್ಕೋಡಿ ಆರ್‌ಎಸ್ಎಸ್ ಹೆಬ್ಬಾಗಿಲಾಗಿದೆ. ಸಂಘದ ಕುರಿತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ. ಇಸ್ರೇಲ್ ದೇಶದವರು ನಮ್ಮ ನಾಗಪುರ ಸಂಘದ ಕಚೇರಿಗೆ ಭೇಟಿ ನೀಡುತ್ತಿದ್ದು, ನಮ್ಮ ಸಂಘ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಂದು ಶಕ್ತಿಯಾಗಿ ಬೆಳೆದಿದೆ, ನಮ್ಮ ದೇಶದಲ್ಲಿ ಎರಡು ತರಹ ದೇಶಭಕ್ತರಿದ್ದಾರೆ. ತಾಯಿ ಹಾಲು ಕುಡಿದು ದೇಶ ಭಕ್ತಿ ಬೆಳೆಸಿಕೊಂಡಿದ್ದಾರೆ. ಈ ದೇಶದ ಮೂಲ ಪುರುಷರನ್ನು ಸಮಾಜ ಮರೆತು ಬಿಟ್ಟಿತ್ತು. ಡಾ.ಕೇಶವ ಹೆಗಡೇವಾರ ಅವರು ದೇಶದಲ್ಲಿ ಜನರಿಗೆ ತಿಳಿಸುವ ಕಾರ್ಯವನ್ನು ಅಂದು ಪ್ರಾರಂಭ ಮಾಡಿದರು. ಈ ದೇಶದ ಗುಲಾಮರಾಗಲು ನಮ್ಮ ಸಮಾಜದ ಕೆಲವು ಜನರೇ ಕಾರಣವಾಗಿದ್ದಾರೆ ಎಂದರು.ನಾಗರಿಕರು ದೇಶಕ್ಕಾಗಿ ಕರ್ತವ್ಯದಿಂದ ನಡೆದುಕೊಳ್ಳಬೇಕು. ಪಾಶ್ಚಿಮಾತ್ಯ ರಾಷ್ಟ್ರಗಳು ನಮ್ಮ ದೇಶದ ಸಂಸ್ಕೃತಿಯತ್ತ ಮುಖ ಮಾಡುತ್ತಿವೆ. ನಮ್ಮ ಮಕ್ಕಳಿಗೆ ದೇಶದ ಹಿಂದೂ ಸಂಸ್ಕೃತಿಯನ್ನು ತಿಳಿಸಿಕೊಡುವಂತೆ ಕರೆ ನೀಡಿದರು.ಕಾರ್ಯಕ್ರಮದಲ್ಲಿ ಬಿಡಿಸಿಸಿ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ, ರಾಯಬಾಗ ಶಾಸಕ ದುರ್ಯೋದನ ಐಹೊಳೆ, ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಭರತ ಬನವಣೆ, ಜಗದೀಶ ಕವಟಗಿಮಠ, ಸಂಜಯ ಅಡಕೆ, ಜಿಪಂ ಮಾಜಿ ಸದಸ್ಯ ಪ್ರಣಯ ಪಾಟೀಲ, ಪೃಥ್ವಿ ಕತ್ತಿ, ಚಿಕ್ಕೋಡಿ ಜಿಲ್ಲಾ ಸಂಘಚಾಲಕ ಬಾಹುಬಲಿ ನಸಲಾಪುರೆ, ಚಿಕ್ಕೋಡಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ ಅಪ್ಪಾಜಿಗೋಳ, ಮಹೇಶ ಭಾತೆ, ಬಿ.ಎ.ಪೂಜಾರಿ ಹಾಗೂ ಸಂಘದ ಪ್ರಮುಖರು ಭಾಗವಹಿಸಿದ್ದರು.ಮೊದಲು ರಾಷ್ಟ್ರೀಯ ಸ್ವಯಂ ಸೇವಕರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಥಸಂಚಲನ ನಡೆಸಿದರು. ಗಣವೇಷಧಾರಿಗಳಾಗಿ ಬಿಡಿಸಿಸಿ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ, ಶಾಸಕ ದುರ್ಯೋದನ ಐಹೊಳೆ, ಜಗದೀಶ ಕವಟಗಿಮಠ, ಚಿಕ್ಕೋಡಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ ಅಪ್ಪಾಜಿಗೋಳ ಮುಂತಾದವರು ಭಾಗವಹಿಸಿದ್ದರು.