ತುರುವೇಕೆರೆ ತಾಲೂಕಿನಲ್ಲಿ ಪ್ರತಿದಿನ ಒಂದು ಲಕ್ಷ ಲೀಟರ್ ಹಾಲು ಸಂಗ್ರಹ: ಸಿ.ವಿ.ಮಹಲಿಂಗಯ್ಯ

| Published : Nov 14 2025, 01:30 AM IST

ತುರುವೇಕೆರೆ ತಾಲೂಕಿನಲ್ಲಿ ಪ್ರತಿದಿನ ಒಂದು ಲಕ್ಷ ಲೀಟರ್ ಹಾಲು ಸಂಗ್ರಹ: ಸಿ.ವಿ.ಮಹಲಿಂಗಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರತಿ ಹಾಲು ಸಹಕಾರ ಸಂಘದಲ್ಲಿ ಹಾಲು ಶೇಖರಣೆ ಮಾಡುವ ಸಂಬಂಧ ಪಾರದರ್ಶಕತೆ ಇದೆ. ಗುಣಮಟ್ಟದ, ಹೆಚ್ಚು ಕೊಬ್ಬಿನಾಂಶವಿರುವ ಹಾಲಿಗೆ ತಕ್ಕಂತೆ ಹಣ ದೊರೆಯುತ್ತಿದೆ. ಜಿಲ್ಲೆಯಲ್ಲಿ ಸದ್ಯ 2 ಲಕ್ಷಕ್ಕೂ ಅಧಿಕ ರಾಸುಗಳಿಗೆ ವಿಮೆ ಮಾಡಿಸಲಾಗುತ್ತಿದೆ. ಇದಕ್ಕಾಗಿ ಒಕ್ಕೂಟದಿಂದ 30 ಕೋಟಿ ವಿನಿಯೋಗಿಸಲಾಗಿದೆ. ಸಹಕಾರ ಸಂಘದ ಕಟ್ಟಡಗಳ ನಿರ್ಮಾಣಕ್ಕೆಂದು ಈಗ ಸುಮಾರು 9.50 ಲಕ್ಷ ರು. ಗಳನ್ನು ನೀಡಲಾಗುತ್ತಿದೆ .

ಕನ್ನಡಪ್ರಭ ವಾರ್ತೆ ತುರುವೇಕೆರೆ

ತಾಲೂಕಿನಲ್ಲಿ ಪ್ರತಿ ದಿನ ಒಂದು ಲಕ್ಷಕ್ಕೂ ಅಧಿಕ ಲೀಟರ್ ಹಾಲು ಸಂಗ್ರಹವಾಗುತ್ತಿದೆ ಎಂದು ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಸಿ.ವಿ.ಮಹಲಿಂಗಯ್ಯ ಹೇಳಿದರು.

ತಾಲೂಕಿನ ಬೆಂಕಿಕೆರೆ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ತಾಲೂಕಿನಲ್ಲಿ ಸುಮಾರು 130ಕ್ಕೂ ಅಧಿಕ ಸಂಘಗಳಿವೆ. ಅವುಗಳ ಪೈಕಿ 90 ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಸ್ವಂತ ಕಟ್ಟಡ ಇವೆ. ಇದು ಜಿಲ್ಲೆಯಲ್ಲೇ ಅತ್ಯಧಿಕ ಸ್ವಂತ ಕಟ್ಟಡ ಹೊಂದಿದ ತಾಲೂಕಾಗಿದೆ. ತಾಲೂಕಿನ ರೈತಾಪಿಗಳಿಗೆ ಹೈನುಗಾರಿಕೆ ಜೀವನಾಡಿಯಾಗಿದೆ. ಜಿಲ್ಲಾ ಹಾಲು ಒಕ್ಕೂಟದಿಂದ ತಾಲೂಕಿನ ಹೈನುಗಾರರಿಗೆ ಪ್ರತಿ ತಿಂಗಳು ಹತ್ತೂವರೆ ಕೋಟಿಗೂ ಮಿಗಿಲಾಗಿ ಹಣ ಜಮೆ ಮಾಡಲಾಗುತ್ತಿದೆ. ಇದರಲ್ಲಿ ಸರ್ಕಾರದಿಂದ ಬರುವ ಪ್ರೋತ್ಸಾಹ ಧನ ಸೇರಿಲ್ಲ ಎಂದು ಸಿ.ವಿ.ಮಹಲಿಂಗಯ್ಯ ಹೇಳಿದರು.

ತಾಲೂಕಿನಲ್ಲಿ ಒಂದು ಲಕ್ಷಕ್ಕೂ ಅಧಿಕ ಲೀಟರ್ ಹಾಲು ಸಂಗ್ರಹ ಜೊತೆಗೆ ಉತ್ತಮ ಗುಣಮಟ್ಟದ ಹಾಲು ಸಂಗ್ರಹವಾಗುತ್ತಿರುವುದರಲ್ಲಿಯೂ ಜಿಲ್ಲೆಯಲ್ಲೇ ಪ್ರಥಮ ಸ್ಥಾನದಲ್ಲಿ ತುರುವೇಕೆರೆ ಇದೆ ಎಂದರು.

ಪ್ರತಿ ಹಾಲು ಸಹಕಾರ ಸಂಘದಲ್ಲಿ ಹಾಲು ಶೇಖರಣೆ ಮಾಡುವ ಸಂಬಂಧ ಪಾರದರ್ಶಕತೆ ಇದೆ. ಗುಣಮಟ್ಟದ, ಹೆಚ್ಚು ಕೊಬ್ಬಿನಾಂಶವಿರುವ ಹಾಲಿಗೆ ತಕ್ಕಂತೆ ಹಣ ದೊರೆಯುತ್ತಿದೆ. ಜಿಲ್ಲೆಯಲ್ಲಿ ಸದ್ಯ 2 ಲಕ್ಷಕ್ಕೂ ಅಧಿಕ ರಾಸುಗಳಿಗೆ ವಿಮೆ ಮಾಡಿಸಲಾಗುತ್ತಿದೆ. ಇದಕ್ಕಾಗಿ ಒಕ್ಕೂಟದಿಂದ 30 ಕೋಟಿ ವಿನಿಯೋಗಿಸಲಾಗಿದೆ. ಸಹಕಾರ ಸಂಘದ ಕಟ್ಟಡಗಳ ನಿರ್ಮಾಣಕ್ಕೆಂದು ಈಗ ಸುಮಾರು 9.50 ಲಕ್ಷ ರು. ಗಳನ್ನು ನೀಡಲಾಗುತ್ತಿದೆ ಎಂದರು.

ಜಿಲ್ಲಾ ಹಾಲು ಒಕ್ಕೂಟ ಆರ್ಥಿಕವಾಗಿ ಸದೃಢವಾಗಿದೆ. ಹೈನುಗಾರರ ಹೆಣ್ಣು ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕಾಗಿ ವಸತಿ ನಿಲಯವನ್ನೂ ಸಹ ನಿರ್ಮಿಸಲಾಗುತ್ತಿದೆ. ಇನ್ನು ಕೆಲವೇ ತಿಂಗಳಲ್ಲಿ ಮೇಘಾ ಡೈರಿ ಪ್ರಾರಂಭವಾಗಲಿದೆ ಎಂದೂ ಸಹ ಸಿ.ವಿ.ಮಹಲಿಂಗಯ್ಯ ಹೇಳಿದರು.

ಸಂಘದ ಅಧ್ಯಕ್ಷ ಬಿ.ಎನ್.ನಾಗರಾಜು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಹಾಲು ಒಕ್ಕೂಟದ ವ್ಯವಸ್ಥಾಪಕ ಚಂದ್ರಶೇಖರ್ ಕೇದನೂರಿ, ಮುಖಂಡರಾದ ಸೋಮಣ್ಣ, ಬಿ.ಎಂಎಸ್ ಉಮೇಶ್, ವೆಂಕಟೇಶ್, ಸಿದ್ದಲಿಂಗಪ್ಪ, ವಿಸ್ತರಣಾಧಿಕಾರಿಗಳಾದ ಕೆ.ಪಿ.ಮಂಜುನಾಥ್, ಎಸ್.ದಿವಾಕರ್, ಎನ್.ಕಿರಣ್ ಕುಮಾರ್, ಡಾ.ಲೋಹಿತ್, ಆರ್.ವೈ.ಸುನಿಲ್, ಸಂಘದ ಉಪಾಧ್ಯಕ್ಷ ಬಿ.ಕೆ.ನಾಗರಾಜು, ನಿರ್ದೇಶಕರಾದ ಗಂಗಾಧರಯ್ಯ, ಚೇತನ್, ಬಿ.ಗಂಗಾಧರಯ್ಯ, ಸೋಮಶೇಖರಯ್ಯ, ಗುರುಬಸವಯ್ಯ, ತಮ್ಮೇಗೌಡ, ಮಹದೇವಯ್ಯ, ಪುಷ್ಪಲತಾ, ಸರೋಜಮ್ಮ, ಕಾರ್ಯದರ್ಶಿ ಸದಾನಂದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.