ಸಾರಾಂಶ
ಕನ್ನಡಪ್ರಭ ವಾರ್ತೆ ಹಾವೇರಿಜಗತ್ತಿನಲ್ಲಿ ಯಾರೂ ನಮ್ಮ ಸಂಪತ್ತನ್ನು ಕಸಿದುಕೊಳ್ಳಬಾರದು. ಅಂತ ಸಂಪತ್ತು ಯಾವುದಾದರೂ ಇದ್ದರೆ ಅದು ಪುಣ್ಯದ ಸಂಪತ್ತು. ನಮ್ಮ ಜೀವನ ಇರೋತನಕ ಪ್ರತಿಯೊಬ್ಬರೂ ಪುಣ್ಯದ ಕೆಲಸ ಮಾಡಿ, ಜೀವನವನ್ನು ಸಾರ್ಥಕಗೊಳಿಸಿಕೊಳ್ಳಬೇಕು ಎಂದು ಕೊಪ್ಪಳದ ಗವಿದ್ದೇಶ್ವರಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು.ತಾಲೂಕಿನ ಬಸಾಪುರ ಗ್ರಾಮದಲ್ಲಿ ಇಪ್ಪಿಕೊಪ್ಪಆಲದಮ್ಮದೇವಿ ಹಾಗೂ ಬಸಾಪುರ ಆಲದಮ್ಮದೇವಿ ಜಾತ್ರಾ ಮಹೋತ್ಸವ ಪ್ರಯುಕ್ತ ಭಾನುವಾರ ಆಯೋಜಿಸಲಾದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ಮನುಷ್ಯ ಎಂದು ಹುಟ್ಟುತ್ತಾನೋ ಅಂದು ಸಾವು ಕೂಡ ಆರಂಭವಾಗುತ್ತೆ, ಸರ್ಟಿಫಿಕೆಟ್ ಒಳಗ ಡೆಟ್ ಆಫ್ ಬರ್ತ್ ನೋಡ್ತೀವಿ. ಅದರ ಮುಂಚೆಯೇ ಡೆಟ್ ಆಫ್ ರೈಟ್ ಇರುತ್ತೆ. ಸಾವು ಅಂದ್ರೆ ಮನುಷ್ಯನಿಗೆ ಭಯಯಾಕೆ ಆಗುತ್ತೆ. ಹುಟ್ಟು ಸಾವು ಬೇರ್ಪಡಿಸಲು ಸಾಧ್ಯವೇ ಇಲ್ಲ. ಭೂಮಿ ಮೇಲೆ ಕಟ್ಟಿದ ಮನೆ ಬೀಳಲೇ ಬೇಕು, ಹಚ್ಚಿದ ದೀಪ ಆರಲೇ ಬೇಕು, ಅರಳಿದ ಹೂವು ಬಾಡಲೇಬೇಕು. ಅದನ್ನುಯಾರಿಂದಲೂ ಬೇರ್ಪಡಿಸಲು ಸಾಧ್ಯವಿಲ್ಲ, ಇದು ನಿಸರ್ಗದ ನಿಯಮ ಮತ್ತು ಜಗದ ನಿಯಮ.ಮನುಷ್ಯ ಹುಟ್ಟುಆಚರಣೆ ಮಾಡುತ್ತಾನೆ, ಆದರೆ ಸಾವು ಯಾಕ ಆಚರಣೆ ಮಾಡಲ್ಲ. ಸಾವು ಮನುಷ್ಯನಿಗೆ ಭಯ ಹುಟ್ಟಿಸುತ್ತದೆ. ಮನುಷ್ಯನಿಗೆ ಸಾವು ಯಾಕ ದುಃಖಕೊಡುತ್ತೆ ಅಂದ್ರೆ, ನಂದು ಅಪ್ಪ, ನಂದು ಅವ್ವ ಎಂದುಕೊಳ್ಳುತ್ತಾರೆ. ನಂದು ಎನ್ನುವುದನ್ನು ಎಲ್ಲವು ಸಾವು ಕಸಿದುಕೊಳ್ಳತ್ತದೆ. ಹೊಲ, ಮನೆ, ಬಂಧು-ಬಳಗ ಎಲ್ಲರನ್ನೂ ಕಸಿದುಕೊಳ್ಳುತ್ತದೆ. ಮನುಷ್ಯ ಕಲಿಬೇಕಾದದ್ದು ಏನೆಂದರೆ, ಸಾವು ನನ್ನಿಂದ ಕಸಿದು ಹೋಗಲಾರದ ಸಂಪತ್ತು ಯಾವುದು? ಎಂಬುದನ್ನು ಅರಿತುಕೊಳ್ಳಬೇಕು.
ಮನುಷ್ಯ ಗಳಿಸಿದ ಸಂಪತ್ತು ಹೇಗಿರಬೇಕು ಅಂದ್ರೆ ಗಂಟು ಕಟ್ಟಿ ಬಯಲೊಳಗೆ ಇಟ್ಟರೂ ಯಾರು ಮುಟ್ಟಬಾರದು. ಅಂತ ಸಂಪತ್ತು ಗಳಿಸಬೇಕು. ಭೂಮಿಗೆ ಬರುವಾಗ ಬರೀ ಕೈಲಿ ಬಂದ್ವಿ, ಹೋಗುವಾಗ ಯಾವ ಸಂಪತ್ತು ಬರುವುದಿಲ್ಲ. ದುಡ್ಡು, ರುಪಾಯಿ, ಅಧಿಕಾರ, ಆಸ್ತಿ ಯಾವುದೂಇಲ್ಲ. ಅಣ್ಣತಮ್ಮರು ಪಾಲು ಕೇಳಬಾರದು, ಸರಕಾರ ಟ್ಯಾಕ್ಸ್ ಹಾಕಬಾರದು ಅಂತ ಸಂಪತ್ತು ಯಾವುದು?ಒಬ್ಬ ವ್ಯಕ್ತಿಕೋರ್ಟ್ ಕೇಸ್‌ಲ್ಲಿ ಸಾಕ್ಷಿ ಹೇಳಬೇಕಾದರೆ ಯಾವ ದೋಸ್ತರೂ ನಿನ್ನ ಹತ್ತಿರ ಬರಲ್ಲ. ಎಲ್ಲರೂ ಒಂದೊಂದ ಊದಾಹರಣೆ ಕೊಟ್ಟು ನುಣಚಿಕೊಳ್ಳುತಾರೆ. ಅಂತ ದೋಸ್ತರ್ ಯಾರ ಅಂದ್ರೆ, ಗಳಿಸಿದ ಹೊಲ ಮನೆ ಇದ್ದಲ್ಲಿ ಹೇಳುವ ದೋಸ್ತ ಆಗಿರ್ತದೆ. ಹೆಂಡತಿ ಅಥವಾ ಗಂಡ ಇವು ಎರಡನೇ ದೋಸ್ತ. ನಮ್ಮ ಸ್ನೇಹಿತರು, ಬಂಧು ಬಾಂಧವರು ಸ್ಮಶಾನತನಕ ಬಂದವರು ಮೂರನೇ ದೋಸ್ತರು. ನಾಲ್ಕನೇ ದೋಸ್ತ್ ಯಾರಂದ್ರ ನಿಮ್ಮ ಜೀವನದಲ್ಲಿ ಮಾಡಿದ ಪುಣ್ಯದ ಕೆಲಸ. ನೀವು ನಿನ್ ಜೀವನದ ಕೋರ್ಟ್‌ಗೆ ಬಂದು ಸಾಕ್ಷಿ ಹೇಳುತ್ತದೆ. ಯಾವಾಗಲೂ ಚಲಾವಣೆಯಲ್ಲಿ ಇರುವ ನಾಣ್ಯ ನಾವು ಮಾಡಿದ ಪುಣ್ಯ. ಹಾಗಾಗಿ ಕೆಟ್ಟದ್ದನ್ನು ಮಾಡದೆ ಒಳ್ಳೆಯ ಮಾತಾಡು, ಉತ್ತಮನಾಗು ಮತ್ತು ಉಪಕಾರಿ ಆಗಬೇಕು ಎಂದರು.ಯಾವುದೇ ಎಲೆಕ್ಟ್ರಾನಿಕ್ ವಸ್ತು ತಗೊಂಡರು ಅದನ್ನು ಹೇಗೆ ಉಪಯೋಗ ಮಾಡಬೇಕು ಎಂಬುದರ ಬಗ್ಗೆ ಮ್ಯಾನುವಲ್ ಬುಕ್ ಕೊಡ್ತಾರೆ. ನಮ್ಮ ದೇಹ 100 ವರ್ಷ ಬಾಳುತ್ತೆ. ಅದನ್ನು ಹೇಗೆ ಸದ್ಬಳಕೆ ಮಾಡಬೇಕು ಎಂಬುದು ಗೊತ್ತಿರಬೇಕು.. ಬಟ್ಟೆ ಆಭರಣಗಳಿಂದ ಮನುಷ್ಯನಿಗೆ ಗೌರವ ಸಿಗುವುದಿಲ್ಲ. ಮನುಷ್ಯನಿಗೆ ಕಿಮ್ಮತ್ತು ಇರಲ್ಲ. ಅವರಲ್ಲಿ ಇರುವ ಸದ್ಗುಣಗಳಿಂದ ಕಿಮ್ಮತ್ತು ಜಾಸ್ತಿ ಆಗುತ್ತದೆ. ಸದ್ಗುಣವಂತರಾಗಬೇಕು. ಕೈಕಾಲು ಒಳ್ಳೆಯ ಕೆಲಸಕ್ಕೆ ಬಳಸಿಕೊಳ್ಳಬೇಕು. ತಂದೆ-ತಾಯಿ ಮಕ್ಕಳು ಮನೆಗೆ ದುಡಿದು ಬರಬೇಕು ಕುಡಿದು ಬರಬಾರದು ಎಂದು ಆಪೇಕ್ಷೆ ಬೇಡುತ್ತಾರೆ. ದೇಹದೊಳಗೆ ಏನು ಹಾಕಬೇಕು ಅದನ್ ಹಾಕಬೇಕು. ಪುಕ್ಕಟೆ ನೀರು, ಗಾಳಿ, ಬೆಳಕು, ಅದ್ಭುತವಾದ ದೇಹವನ್ನು ದೇವರು ಕೊಟ್ಟಿದ್ದಾನೆ ಎಂದರು.