ಸಂಚಾರ ದಟ್ಟಣೆ ನಿವಾರಣೆಗೆ ಏಕಮುಖ ಸಂಚಾರ ಅಸ್ತ್ರ

| Published : Nov 13 2025, 12:45 AM IST

ಸಾರಾಂಶ

ಹೊಸಕೋಟೆ: ಬೆಂಗಳೂರು ನಗರಕ್ಕೆ ಹೆಬ್ಬಾಗಿಲಾಗಿರುವ ಹೊಸಕೋಟೆ ನಗರದಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿ ಡಿವೈಎಸ್ಪಿ ಮಲ್ಲೇಶ್ ನೇತೃತ್ವದಲ್ಲಿ ವಾಹನ ದಟ್ಟಣೆ ಇರುವ ಆಯ್ದ ಪ್ರಮುಖ ರಸ್ತೆಗಳಲ್ಲಿ ವಾಹನಗಳ ಏಕಮುಖ ಸಂಚಾರಕ್ಕೆ ಪ್ರಾಯೋಗಿಕವಾಗಿ ಪ್ರಾಯೋಗಿಕವಾಗಿ ಚಾಲನೆ ನೀಡಲಾಗಿದೆ.

ಹೊಸಕೋಟೆ: ಬೆಂಗಳೂರು ನಗರಕ್ಕೆ ಹೆಬ್ಬಾಗಿಲಾಗಿರುವ ಹೊಸಕೋಟೆ ನಗರದಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿ ಡಿವೈಎಸ್ಪಿ ಮಲ್ಲೇಶ್ ನೇತೃತ್ವದಲ್ಲಿ ವಾಹನ ದಟ್ಟಣೆ ಇರುವ ಆಯ್ದ ಪ್ರಮುಖ ರಸ್ತೆಗಳಲ್ಲಿ ವಾಹನಗಳ ಏಕಮುಖ ಸಂಚಾರಕ್ಕೆ ಪ್ರಾಯೋಗಿಕವಾಗಿ ಪ್ರಾಯೋಗಿಕವಾಗಿ ಚಾಲನೆ ನೀಡಲಾಗಿದೆ.

ಹೊಸಕೋಟೆ ರಾಜಧಾನಿ ಬೆಂಗಳೂರಿನ ವ್ಯಾಪ್ತಿಯ ಕೂಗಳತೆ ದೂರದಲ್ಲಿದ್ದು ಬಡಾವಣೆಗಳು ಅಪಾರ್ಟ್ಮೆಂಟ್‌ಗಳು ದಿನೆ ದಿನೇ ಹೆಚ್ಚುತಿದ್ದು, ಇದಕ್ಕನುಗುಣವಾಗಿ ಜನಸಂಖ್ಯೆ ಸರಿಸುಮಾರು ಒಂದು ಲಕ್ಷಕ್ಕೂ ಹೆಚ್ಚಿದ್ದು ಇದಕ್ಕನುಗುಣವಾಗಿ ವಾಹನಗಳ ಸಂಖ್ಯೆ ಕೂಡ ಗಣನೀಯವಾಗಿ ಏರುತಿದೆ. ಇದರ ನಿಯಂತ್ರಣಕ್ಕಾಗಿ ಪ್ರಾಯೋಗಿಕವಾಗಿ ಏಕಮುಖ ಸಂಚಾರಕ್ಕೆ ಚಾಲನೆ ನೀಡಲಾಗಿದೆ.

ಎಲ್ಲೆಲ್ಲಿ ಏಕಮುಖ ಸಂಚಾರ:

ನಗರದ ಕೆಇಬಿ ವೃತ್ತದ ಎರಡು ಬದಿಯ ಸರ್ವೀಸ್ ರಸ್ತೆ, ಟಿಜಿ ಬಡಾವಣೆಯ ಚಿಕ್ಕೇಗೌಡ ಕಲ್ಯಾಣ ಮಂಟಪದ ರಸ್ತೆ, ಗಂಗಮ್ಮ ಗುಡಿ ರಸ್ತೆ, ಚಿಂತಾಮಣಿ, ಮಾಲೂರು ರಸ್ತೆಯ ಸರ್ಕಾರಿ ಆಸ್ಪತ್ರೆ ಮತ್ತು ಸಾಧನ ಥಿಯೇಟರ್ ರಸ್ತೆಗಳಲ್ಲಿ ಏಕಮುಖ ಸಂಚಾರವಿದ್ದು ನಿಯಮ ಉಲ್ಲಂಘಿಸಿದರೆ ದಂಡ ತೆರಬೇಕಾಗುತ್ತದೆ.

ಅತಿಕ್ರಮ ಮಾಡಿದರೆ ಲೈಸನ್ಸ್ ರದ್ದು:

ನಗರದಲ್ಲಿ ಅಂಗಡಿ ಮುಗ್ಗಟ್ಟುಗಳ ಮಾಲೀಕರಿಗೆ ಖಡಕ್ ಎಚ್ಚರಿಕೆ ನೀಡಿದ್ದು, ಅಂಗಡಿ ಮಾಲೀಕರು ಪಾದಾಚಾರಿ ಮಾರ್ಗ ಅತಿಕ್ರಮಿಸಿರುವುದು ಕಂಡುಬಂದಿದ್ದು ಅಂಗಡಿಗಳಿಗೆ ಬರುವ ಗ್ರಾಹಕರು ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸುವುದರಿಂದಲೂ ಕೂಡ ಟ್ರಾಫಿಕ್ ಜಾಮ್ ಉಂಟಾಗುತಿದೆ. ಅಂತಹ ಅಂಗಡಿ ಮಾಲೀಕರ ವಿರುದ್ದ ಕಠಿಣ ಕ್ರಮ ಜರುಗಿಸಿ ಪರವಾನಗಿ ರದ್ದು ಮಾಡಲು ನಗರಸಭೆಗೆ ಸೂಚನೆ ನೀಡಲಾಗುತ್ತದೆ ಎಂದು ಡಿವೈಎಸ್ಪಿ ಮಲ್ಲೇಶ್ ಎಚ್ಚರಿಕೆ ನೀಡಿದ್ದಾರೆ.

ಬಾಕ್ಸ್ ..............

ವಾಹನ ಚಲಾವಣೆಯಲ್ಲಿ ಮೊಬೈಲ್ ಬಳಸಿದರೆ ದಂಡ

ನಗರದಲ್ಲಿ ಅಪ್ರಾಪ್ತರು ದ್ವಿಚಕ್ರ ವಾಹನ ಚಲಾಯಿಸುವುದು, ತ್ರಿಬಲ್ ರೈಡಿಂಗ್ ಮಾಡುವುದು, ಚಾಲನೆ ಮಾಡುವಾಗ ಮೊಬೈಲ್ ಬಳಸುತ್ತಿರುವುದು ಕಂಡುಬರುತ್ತಿದೆ. ಇದರಿಂದ ಅಪಘಾತಗಳು ಹೆಚ್ಚುತ್ತಿವೆ. ಇದು ಕಂಡು ಬಂದರೆ ಕಠಿಣಕ್ರಮ ಜರುಗಿಸಲಾಗುವುದು. ನಗರ ಸ್ವಚ್ಛವಾಗಿದ್ದು ಸುಂದರವಾಗಿಟ್ಟುಕೊಳ್ಳುವುದು ಕೂಡ ನಮ್ಮ ಜವಾಬ್ದಾರಿಯಾಗಿದೆ. ನಿಗದಿತ ಸ್ಥಳದಲ್ಲಿ ಕಸಹಸಕಬೇಕು ಮತ್ತು ಕಸದ ವಾಹನಗಳಿಗೆ ಹಸಿಕಸ ಒಣಕಸ ಪ್ರತ್ಯೇಕಿಸಿ ನೀಡಬೇಕೆಂದು ಡಿವೈಎಸ್ಪಿ ಮಲ್ಲೇಶ್ ಮನವಿ ಮಾಡಿದ್ದಾರೆ.

ಫೋಟೋ: 11 ಹೆಚ್‌ಎಸ್‌ಕೆ 1

ಹೊಸಕೋಟೆ ನಗರದಲ್ಲಿ ಏಕಮುಖ ಸಂಚಾರಕ್ಕೆ ಪ್ರಾಯೋಗಿಕ ಚಾಲನೆ ನೀಡಿದ್ದು ಡಿವೈಎಸ್ಪಿ ಮಲ್ಲೇಶ್, ಸಂಚಾರ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀಕಂಠಯ್ಯ ವಾಹನ ಸವಾರರಿಗೆ ಜಾಗೃತಿ ಮೂಡಿಸಿದರು.