ಬೇರೆಯವರನ್ನು ಬಿಟ್ಟು ಸಿಎಂ ಮಾತ್ರವೇ ಟಾರ್ಗೆಟ್‌

| Published : Aug 20 2024, 12:47 AM IST

ಸಾರಾಂಶ

ಮಧುಗಿರಿಯಲ್ಲಿ ಕಾಂಗ್ರೆಸ್‌ ನಿಂದ ಪ್ರತಿಭಟನೆ

ಕನ್ನಡಪ್ರಭ ವಾರ್ತೆ ಮಧುಗಿರಿ

ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದನ್ನು ಹಿಂಪಡೆಯುವಂತೆ ಒತ್ತಾಯಿಸಿ ತಾಲೂಕು ಕಾಂಗ್ರೆಸ್‌ ಸಮಿತಿ ಪದಾಧಿಕಾರಿಗಳು ಪ್ರತಿಭಟಿಸಿ ಗ್ರೇಡ್‌ 2 ತಹಸೀಲ್ದಾರ್‌ ನಂದಿನಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.

ವಿಧಾನ ಪರಿಷತ್‌ ಸದಸ್ಯ ಆರ್‌.ರಾಜೇಂದ್ರ ಮಾತನಾಡಿ, ರಾಜ್ಯಪಾಲರು ಒಂದು ಪಕ್ಷದ ಏಜಂಟರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಎಚ್‌.ಡಿ.ಕೆ. ಮುರುಗೇಶ್‌ ನಿರಾಣಿ, ಶಶುಕಲಾ ಜೋಲ್ಲೆ ಇನ್ನು ಅನೇಕರ ವಿರುದ್ಧ ಸಾಕಷ್ಟು ಸಾಕ್ಷ್ಯದಾರಗಳು ಮತ್ತು ಪ್ರಾಸಿಕ್ಯೂಷನ್‌ಗೆ ಲೋಕಾಯುಕ್ತ ಶೀಫಾರಸುಗಳಿವೆ. ಇವರುಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಆದರೆ ಖಾಸಗಿ ವ್ಯಕ್ತಿಗಳು ನೀಡಿದ ದೂರುಗಳನ್ನು ಪಡೆದು ಕೇವಲ 24 ಗಂಟೆಯೊಳಗೆ ಸಿಎಂ ವಿರುದ್ಧ ಶೋಕಾಸ್‌ ನೋಟಿಸ್‌ ಜಾರಿಗೊಳಿಸಿರುವ ಕ್ರಮ ಸರಿಯಲ್ಲ. ಈ ಕೂಡಲೇ ಪ್ರಾಸಿಕ್ಯೂಷನ್ ವಾಪಸ್‌ ಪಡೆಯುವಂತೆ ಒತ್ತಾಯಿಸಿದರು.

ಶಾಂತಲ ರಾಜಣ್ಣ, ಮುಖಂಡರಾದ ಇಂದಿರಾ, ಸುವರ್ಣಮ್ಮ, ಚಂದ್ರಮ್ಮ, ಎಂ.ಎಸ್‌.ಮಲ್ಲಿಕಾರ್ಜುನಯ್ಯ, ಮಿಡಿಗೇಶಿ ರಾಜ್‌ಗೋಪಾಲ್‌, ಆಧಿನಾರಾಯಣರೆಡ್ಡಿ, ದೃವಕುಮಾರ್‌, ಬಿ.ನಾಗೇಶಬಾಬು, ವಕೀಲರ ಸಂಘದ ಅಧ್ಯಕ್ಷ ಪಿ.ಸಿ.ಕೃಷ್ಣಾರೆಡ್ಡಿ, ಎಂ.ಕೆ.ನಂಜುಂಡರಾಜು, ಮೈದನಹಳ್ಲಿ ಕಾಂತರಾಜು, ಸಿದ್ದಾಪುರ ರಂಗಶ್ಯಾಮಣ್ಣ ಭಾಗವಹಿಸಿದ್ದರು.