ನಿರಂತರ ಅಭ್ಯಾಸದಿಂದ ಮಾತ್ರ ಬದುಕಲ್ಲಿ ಮುಂದೆ ಬರಲು ಸಾಧ್ಯ: ಪರಮೇಶ್ವರ ಟಿ ನಾಯ್ಕ

| Published : Nov 10 2025, 01:30 AM IST

ನಿರಂತರ ಅಭ್ಯಾಸದಿಂದ ಮಾತ್ರ ಬದುಕಲ್ಲಿ ಮುಂದೆ ಬರಲು ಸಾಧ್ಯ: ಪರಮೇಶ್ವರ ಟಿ ನಾಯ್ಕ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಮತ್ತು ನಿರಂತರ ಅಭ್ಯಾಸದಿಂದ ಮಾತ್ರ ಜೀವನದಲ್ಲಿ ಮುಂದೆ ಬರಲು ಸಾಧ್ಯ ಎಂದು ಬೀದರ್‌ ವಿಶ್ವವಿದ್ಯಾಲಯ ಕುಲಸಚಿವ ಪರಮೇಶ್ವರ ಟಿ ನಾಯ್ಕ ಹೇಳಿದರು.

ಭಾಲ್ಕಿ: ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಮತ್ತು ನಿರಂತರ ಅಭ್ಯಾಸದಿಂದ ಮಾತ್ರ ಜೀವನದಲ್ಲಿ ಮುಂದೆ ಬರಲು ಸಾಧ್ಯ ಎಂದು ಬೀದರ್‌ ವಿಶ್ವವಿದ್ಯಾಲಯ ಕುಲಸಚಿವ ಪರಮೇಶ್ವರ ಟಿ ನಾಯ್ಕ ಹೇಳಿದರು.

ಪಟ್ಟಣದ ಶ್ರೀ ಗುರುಪ್ರಸನ್ನ ಜನ ಸೇವಾ ಮಹಿಳಾ ಸಂಸ್ಥೆಯ ಶ್ರೀಗುರುಪ್ರಸನ್ನ ಪದವಿ ಮಹಾವಿದ್ಯಾಲಯದಲ್ಲಿ ಶನಿವಾರ ಎಸ್‌ಜಿಪಿ ಉತ್ಸವ 2025 ನಿಮಿತ್ತ ಶಿಕ್ಷಣವೇ ಸಿಂಧೂರ ಧ್ಯೇಯವಾಕ್ಯದಲ್ಲಿ ಆಯೋಜಿಸಿದ್ದ ಸ್ನೇಹ ಸಮ್ಮೇಳನ ಮತ್ತು ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿ, ವಿಶ್ವವನ್ನೇ ಗೆಲ್ಲಲು ಶಿಕ್ಷಣವೇ ಮೂಲಾಧಾರವಾಗಿದೆ ಎಂದರು.

ವಿಶೇಷ ಉಪನ್ಯಾಸ ಮಂಡಿಸಿದ ಬಾಗಲಕೋಟೆಯ ಶಿಕ್ಷಣ ತಜ್ಞೆ ಡಾ. ಸಪ್ನಾ ಎಸ್ ಅನಿಗೋಳ, ಸಾತ್ವಿಕ ಆಹಾರದಿಂದ ಸುಂದರ ಜೀವನ ಕಂಡುಕೊಳ್ಳಬಹುದು. ಹೀಗಾಗಿ ಭಾರತೀಯರು ಹೆಚ್ಚು ಆರೋಗ್ಯ ಮತ್ತು ದಷ್ಟಪುಷ್ಟರಾಗಿರುತ್ತಾರೆ. ಯುವಕರಿಗೆ ಕಾಳು ಹಾಕಿ ಬಲೆ ಬೀಸುತ್ತಾರೆ. ಹೀಗಾಗಿ ನಮ್ಮ ಯುವಕರು ರಾಜಕೀಯ ನಾಯಕರು ಹಾಕುವ ಕಾಳಿನ ಬಲೆಗೆ ಬೀಳದೇ ಸುರಕ್ಷಿತವಾಗಿರುವುದನ್ನು ಕಲಿಯಬೇಕು ಎಂದರು.

ಸಂಸ್ಥೆಯ ಅಧ್ಯಕ್ಷೆ ಉಮಾ ಪ್ರಕಾಶ ಖಂಡ್ರೆ ಅಧ್ಯಕ್ಷತೆ ವಹಿಸಿ ಉತ್ತಮ ಪರಿಸರದಲ್ಲಿ ಸಂಸ್ಕಾರಯುತ ಶಿಕ್ಷಣ ನೀಡಲು ಶ್ರೀಗುರಪ್ರಸನ್ನ ಜನಸೇವಾ ಮಹಿಳಾ ಸಂಸ್ಥೆ ಸದಾ ಸಿದ್ದವಾಗಿದೆ ಎಂದರು.

ಬೀದರ್ ವಿವಿ ಸಿಂಡಿಕೇಟ್ ಸದಸ್ಯ ನಾಗಭೂಷಣ ಕಮಠಾಣೆ, ಕಾಲೇಜಿನ ಪ್ರಾಚಾರ್ಯ ವಿಷ್ಣುವರ್ಧನ ಸಿ ಕೋಟೆ ಮಾತನಾಡಿದರು.

ಪುರಸಭೆ ಸದಸ್ಯೆ ಸುಮನಬಾಯಿ ಜಲ್ದೆ, ಸಂಸ್ಥೆಯ ಕಾರ್ಯದರ್ಶಿ ಡಾ. ಪ್ರಿಯಾಂಕಾ ಎಸ್ ಅಕ್ಕಾ, ಸಂಸ್ಥೆಯ ಸದಸ್ಯರಾದ ಡಾ. ರಾಜೇಶ್ವರಿ ಪಿ ಖಂಡ್ರೆ, ಡಾ. ಸ್ವಾತಿ ಜಿ ಖಂಡ್ರೆ, ಎಬಿವಿಪಿ ಮುಖಂಡ ಈಶ್ವರ ರುಮ್ಮಾ, ಡಾ. ರಾಜು ಮೇತ್ರೆ, ಸತೀಷ ಬಿರಾದಾರ, ಜಸಿಕಾ ಜಾಯ್ ಉಪಸ್ಥಿತರಿದ್ದರು.