ನಾಲತವಾಡ: ಭಾರತರತ್ನ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತ್ಯುತ್ಸವ ನಿಮಿತ್ತ ಏ.30ರಂದು ಸಂಜೆ 4.30ಕ್ಕೆ ಪಟ್ಟಣದಲ್ಲಿ ಬಹಿರಂಗ ಸಭೆ ಹಾಗೂ ಅದ್ಧೂರಿ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಕುಂಟೋಜಿಯ ಚನ್ನವೀರದೇವರು ವಹಿಸಲಿದ್ದು, ಅಧ್ಯಕ್ಷತೆಯನ್ನು ಕೆ.ಎಸ್.ಡಿ.ಎಲ್ ನಿಗಮದ ಅಧ್ಯಕ್ಷರು ಹಾಗೂ ಶಾಸಕ ಸಿ.ಎಸ್. ನಾಡಗೌಡ ವಹಿಸಲಿದ್ದಾರೆ.ಉದ್ಘಾಟಕರಾಗಿ ಜಿಲ್ಲಾ ಡಿ.ಎಸ್.ಎಸ್ ಮುಖಂಡ ಅಭಿಷೇಕ ಚಕ್ರವರ್ತಿ ಭಾಗವಹಿಸಲಿದ್ದು, ಜ್ಯೋತಿ ಬೆಳಗಿಸುವ ಕಾರ್ಯಕ್ರಮವನ್ನು ಮಹಾರಾಷ್ಟ್ರದ ಯಾವತಮಲ್ಲ ಕ್ಷೇತ್ರದ ಮಾಜಿ ಶಾಸಕಿ ನಂದಿನಿ ದೇಶಮುಖ ನೆರವೇರಿಸಲಿದ್ದಾರೆ.ಧ್ವಜಾರೋಹಣವನ್ನು ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ನೆರವೇರಿಸಲಿದ್ದು, ವಿಶೇಷ ಉಪನ್ಯಾಸಕರಾಗಿ ಡಾ.ವಿಠ್ಠಲ ವಗ್ಗನ್ ಹಾಗೂ ಡಾ.ಅರುಣ ಜೋಳದಕೊಡ್ಲಿಗಿ ಭಾಗವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಶಂಕರರಾವ ದೇಶಮುಖ, ಪಪಂ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಪೃಥ್ವಿರಾಜ್ ನಾಡಗೌಡ, ಗುರುಪ್ರಸಾದ ದೇಶಮುಖ, ಎಂ.ಎಸ್.ಪಾಟೀಲ, ಕಸಾಪ ಜಿಲ್ಲಾಧ್ಯಕ್ಷ ಹಾಶಿಂಪೀರ ವಾಲಿಕಾರ, ಬಸವರಾಜ ತಿರಮುಖಿ, ಮಹಾಂತೇಶ ಗಂಗನಗೌಡರ (ಎಂ.ಎ.ಜಿ), ಸಿದ್ದಣ್ಣ ಆಲಕೊಪ್ಪರ, ಎಲ್.ಎಚ್.ಅವಟಿ, ವೈ.ಎಚ್. ವಿಜಯಕರ್ ಹಾಗೂ ನ್ಯಾಯವಾದಿ ಕೆ.ಬಿ. ದೊಡ್ಡಮನಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ, ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡ ಗಣ್ಯರಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಮಾಜದ ಜನರಿಗೆ ಸನ್ಮಾನ ಕಾರ್ಯಕ್ರಮ ಜರುಗಲಿದೆ.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಆಯೋಜಕರಾದ ಸಿದ್ದಣ್ಣ ಕಟ್ಟಿಮನಿ, ಹಣಮಂತ ಚಲವಾದಿ, ವೀರೇಶ ಚಲವಾದಿ, ಮಾರುತಿ ಸಿದ್ದಾಪೂರ ಹಾಗೂ ಹಣಮಂತ ಕೆಸಾಪೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.