.ಬಾಯಿ ತೆರೆದ ಮ್ಯಾನ್‌ಹೋಲ್‌: ರಸ್ತೆಗೆ ಬರಿದ ಕೊಚ್ಚೆ ನೀರು

| Published : May 31 2024, 02:16 AM IST

.ಬಾಯಿ ತೆರೆದ ಮ್ಯಾನ್‌ಹೋಲ್‌: ರಸ್ತೆಗೆ ಬರಿದ ಕೊಚ್ಚೆ ನೀರು
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರ ಸರ್ಕಾರದ ಪುರಸ್ಕತ ಯೋಜನೆಯಾಗಿರುವ ಅಮೃತ ಯೋಜನೆ-೧ರಲ್ಲಿ ಯುಜಿಡಿ ಕಾಮಗಾರಿ ನಡೆಸಿದ್ದು, ಮ್ಯಾನ್ ಹೋಲ್‌ಗಳ ನಿಮಾರ್ಣದ ತಿಂಗಳಲ್ಲೇ ಹಾನಿಯಾಗಿವೆ. ಕಾಮಗಾರಿಯನ್ನು ಅವೈಜ್ಞಾನಿಕವಾಗಿ ನಡೆಸಿರುವ ಆರೋಪ

ಕನ್ನಡಪ್ರಭ ವಾರ್ತೆ ಕೋಲಾರನಗರ ವ್ಯಾಪ್ತಿಯಲ್ಲಿ ಯುಜಿಡಿ ನಿರ್ವಹಣೆಯು ಅಸಮರ್ಪಕವಾಗಿದೆ. ಹಲವು ಕಡೆ ಮ್ಯಾನ್ ಹೋಲ್‌ಗಳು ತೆರೆದುಕೊಂಡು ಕೊಳಚೆ ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಇನ್ನು ಕೆಲ ಕಡೆ ಬಾಯಿ ತೆರೆದುಕೊಂಡಿರುವ ಮ್ಯಾನ್ ಹೋಲ್‌ಗಳು ಅಪಾಯಕ್ಕೆ ಆಹ್ವಾನ ನೀಡುತ್ತಿವೆ.ಕೇಂದ್ರ ಸರ್ಕಾರದ ಪುರಸ್ಕತ ಯೋಜನೆಯಾಗಿರುವ ಅಮೃತ ಯೋಜನೆ-೧ರಲ್ಲಿ ಯುಜಿಡಿ ಕಾಮಗಾರಿ ನಡೆಸಿದ್ದು, ಮ್ಯಾನ್ ಹೋಲ್‌ಗಳ ನಿಮಾರ್ಣದ ತಿಂಗಳಲ್ಲೇ ಹಾನಿಯಾಗಿವೆ. ಕಾಮಗಾರಿಯನ್ನು ಅವೈಜ್ಞಾನಿಕವಾಗಿ ನಡೆಸಿದ್ದು, ಜನತೆ ಹೈರಾಣರಾಗಿದ್ದಾರೆ.ನಿರ್ವಹಣೆ ಮಾಡದ ಗುತ್ತಿಗೆದಾರ

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಇಲಾಖೆಯಿಂದ ಕೋಲಾರ ನಗರಸಭೆ ವ್ಯಾಪ್ತಿಯಲ್ಲಿ ಹೊಸದಾಗಿ ಒಳ ಚರಂಡಿ ಕೊಳವೆ ಮಾರ್ಗವನ್ನು ಅಳವಡಿಸಲು ೭೨,೮೯,೨೫,೪೪೬ ರು.ಗಳಿಗೆ ಟೆಂಡರ್ ನೀಡಲಾಗಿತ್ತು. ಗುಜರಾತಿನ ಜಯಂತಿ ಸೂಪರ್ ಕನ್‌ಸ್ಟ್ರಷನ್ ಸಂಸ್ಥೆಯವರು ಟೆಂಡರ್‌ ಪಡೆದುಕೊಂಡು ಕಾಮಗಾರಿ ಮುಗಿಸಿದ್ದಾರೆ. ನಂತರ ಐದು ವರ್ಷಗಳ ಕಾಲ ಕೈಗೊಳ್ಳಬೇಕಿದ್ದ ನಿರ್ವಹಣೆ ನಿರ್ವಹಿಸದೆ ರ್ನಿಲಕ್ಷ ತೋರಿದ್ದಾರೆ. ಗುತ್ತಿಗೆ ಸಂಸ್ಥೆಯವರು ಕಾಮಗಾರಿಯನ್ನು ವೈಜ್ಞಾನಿಕವಾಗಿ ಮಾಡಿಲ್ಲ. ನಗರದ ಕೆಲ ವಾರ್ಡ್‌ಗಳಲ್ಲಿ ಮ್ಯಾನ್ ಹೋಲ್‌ಗಳ ನಿಮಾರ್ಣದ ಕೆಲವೇ ದಿನಗಳಲ್ಲಿ ಹಾನಿಯಾಗಿವೆ. ಒಳಚರಂಡಿ ಮಾರ್ಗದಲ್ಲಿ ನೀರು ಸರಾಗವಾಗಿ ಹರಿಯುತ್ತಿಲ್ಲ. ಕಾಮಗಾರಿಯನ್ನು ಕಳಪೆ ಮಾಡಿದ್ದಾರೆ ಎಂದು ನಗರಸಭೆಯ ಕೆಲ ಸದಸ್ಯರು ಆರೋಪಿಸಿ, ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ದೂರು ನೀಡಿದ್ದಾರೆ.ಸುಳ್ಳು ಬಿಲ್‌ ಸಲ್ಲಿಸಿ ಹಣ ಡ್ರಾ

ಅಮೃತ್-೧ ಯೋಜನೆಯ ಮಾರ್ಗ ಸೂಚಿಗಳ ಅನುಸಾರ ಗುತ್ತಿಗೆದಾರರು ನಿರ್ವಹಣಾ ಕಾಮಗಾರಿಯನ್ನು ೨೦೨೦ ಡಿಸೆಂಬರ್ ೩೧ರಿಂದ ೨೦೨೨ರ ಫೆಬ್ರವರಿ ೨ರ ರವರೆಗೆ ಕೈಗೊಂಡಿದ್ದರು. ಈ ಅವಧಿಯಲ್ಲಿ ನಗರಸಭೆಗೆ ಸುಳ್ಳು ಬಿಲ್‌ಗಳನ್ನು ಸಲ್ಲಿಸಿ ಬಿಲ್ ಡ್ರಾ ಮಾಡಿದ್ದಾರೆಯೇ ಹೊರತು ನಿರ್ವಹಣೆ ಮಾಡಿಲ್ಲ. ೨೦೨೨ರ ಫೆಬ್ರವರಿಯಲ್ಲಿ ನಡೆದ ಕೋಲಾರ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಒಳಚರಂಡಿ ಯೋಜನೆಯ ನಿರ್ವಹಣೆ ಕುರಿತು ಸದಸ್ಯರು ಚರ್ಚಿಸಿದಾಗ ನಗರಸಭೆ ವತಿಯಿಂದ ನಿರ್ವಹಣೆಯ ವೆಚ್ಚವನ್ನು ಭರಿಸಲು ಸಾಧ್ಯವಿಲ್ಲ ಎಂದು ರ್ನಿಣಯಕೈಗೊಂಡು, ಜೆಟ್ಟಿಂಗ್ ಹಾಗೂ ಸಕ್ಕಿಂಗ್ ಯಂತ್ರವನ್ನು ನಗರಸಭೆಗೆ ಹಸ್ತಾಂತರಿಸುವಂತೆ ಸೂಚಿಸಲಾಗಿತ್ತು.

ಗುತ್ತಿಗೆದಾರರು ೨೦೨೦ರಿಂದ ೨೦೨೨ವರೆಗೆ ಕೈಗೊಂಡಿರುವ ನಿರ್ವಹಣೆಯ ಮೊತ್ತ ೫೫.೭೫ ಲಕ್ಷ ರೂ. ಬಿಡುಗಡೆ ಮಾಡುವಂತೆ ನಗರಸಭೆಗೆ ಪತ್ರ ಬರೆದಿದ್ದರು. ಆದರೆ ನಗರಸಭೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ, ಗುತ್ತಿಗೆದಾರರು ಯಾವುದೇ ನಿರ್ವಹಣೆ ಮಾಡದೆ ಇರುವುದರಿಂದ ಹಣ ಬಿಡುಗಡೆ ಮಾಡದಂತೆ ಒತ್ತಾಯಿಸಿದ್ದರು.

ಒಳಚರಂಡಿ ಮಂಡಳಿ ಪತ್ರ

ಕೋಲಾರ ನಗರಸಭೆ ವ್ಯಾಪ್ತಿಯಲ್ಲಿ ಅಮೃತ್-೧೦ ಯೋಜನೆಯಡಿಯಲ್ಲಿ ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ೭೩ ಕೋಟಿ ರೂ. ಜಯಂತಿ ಸೂಪರ್ ಕಸ್ಟ್ರಕ್ಷನ್ ಗುತ್ತಿಗೆ ಸಂಸ್ಥೆ ಮೂಲಕ ಅಳವಡಿಸಲಾಗಿದೆ. ಆದರೆ ಗುತ್ತಿಗೆದಾರರು ಪರತ್ತುಗಳಂತೆ ನಿರ್ವಹಣೆ ಮಾಡದ ಕಾರಣ ಸಂಸ್ಥೆಯ ಭದ್ರತಾ ಠೇವಣಿ ಮುಟ್ಟುಗೋಲು ಹಾಕಿ ಅವರ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸಲು ಮಂಡಳಿಯ ಅಧಿಕಾರಿಗಳು ನಗರಸಭೆ ಪೌರಾಯುಕ್ತರಿಗೆ ಪತ್ರ ಬರೆದಿದ್ದಾರೆ. ನಗರಸಭೆಯ ವ್ಯಾಪ್ತಿಯಲ್ಲಿ ಅಮೃತ್ ಯೋಜನೆಯಲ್ಲಿ ಕೈಗೊಂಡಿರುವ ಒಳಚರಂಡಿ ಪೈಪ್‌ಲೈನ್‌ನ ನಿರ್ವಹಣೆಯನ್ನು ಗುತ್ತಿಗೆದಾರರು ನಿರ್ವಹಿಸ ಕಾರಣ ಪ್ರತಿ ದಿನ ಬರುವ ದೂರುಗಳನ್ನು ನಗರಸಭೆಯಿಂದ ಬಗೆಹರಿಸಲಾಗುತ್ತಿದೆ. ಆದ ಕಾರಣ ಸದರಿ ಗುತ್ತಿಗೆದಾರರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಿದ್ದಾರೆ. ಕೋಟ್ನಗರದಲ್ಲಿ ಯುಜಿಡಿ ಕಾಮಗಾರಿ ಮಾಡಿರುವ ಗುತ್ತಿಗೆದಾರರು ನಿರ್ವಹಣೆ ಮಾಡದೆ ನಗರಸಭೆಗೆ ನಷ್ಟವುಂಟು ಮಾಡಿದ್ದಾರೆ. ಕಾಮಗಾರಿಯು ಕಳಪೆಯಿಂದ ಕೂಡಿದ್ದು, ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು.- ಎಸ್.ಆರ್.ಮುರಳಿಗೌಡ, ನಗರಸಭೆ ಸದಸ್ಯ.