ಮಹಾಲಿಂಗೇಶ್ವರರ ಅದ್ಧೂರಿ ಜಾತ್ರೆಗೆ ತೆರೆ
KannadaprabhaNewsNetwork | Published : Oct 06 2023, 01:21 AM IST
ಮಹಾಲಿಂಗೇಶ್ವರರ ಅದ್ಧೂರಿ ಜಾತ್ರೆಗೆ ತೆರೆ
ಸಾರಾಂಶ
ಮಹಾಲಿಂಗಪುರ ಜಾತ್ರೆ ಮುಕ್ತಾಯ
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ ಕಳೆದ ಆರು ದಿನಗಳಿಂದ ನಡೆದ ಅದ್ಧೂರಿ ಜಾತ್ರೆ ಸೆ.28ರಂದು ಮಹಾಜಟೊತ್ಸದಿಂದ ಆರಂಭವಾಗಿ, 29ರಂದು ತುಂಬಿದ ತೇರು, 30ರಂದು ಮರುತೇರು ಜರುಗಿ, ಅ.3 ರಂದು ತೆರಿನ ಕಳಸ ಇಳಿಸುವುದರೊಂದಿಗೆ ಯಶಸ್ವಿಯಾಗಿ ಮುಕ್ತಾಯವಾಯಿತು. ಈ ಸಂದರ್ಭದಲ್ಲಿ ಈ ಜಾತ್ರೆ ಯಶಸ್ವಿಗೆ ದುಡಿದವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಸುವ್ಯವಸ್ಥಿತವಾಗಿ ಜಾತ್ರೆ ನಡೆಯಲು ರಕ್ಷಣೆ ಕೊಟ್ಟ ಪೊಲೀಸರು, ಮಂಗಳವಾದ್ಯ ನುಡಿಸಿದ ಕರಡಿ ಮೇಳದವರು, ನ್ಯಾಯಬೆಲೆ ಅಂಗಡಿ (ರೇಷನ್) ಮಾಲೀಕರನ್ನು, ಶಾಹನಾಯ ವಾದಕರನ್ನು, ಆರು ದಿನಗಳ ಪ್ರಸಾದ ಕೊಡಮಾಡಿದ ದಾನಿಗಳು, ಪ್ರಸಾದ ತಯಾರಿಸಿದ ಅಡುಗೆ ಭಟ್ಟರನ್ನು, ಮಾಧ್ಯಮದವರನ್ನು, ತೇರು ಅಲಂಕಾರ ಮಾಡಿದವರನ್ನು, ಹೆಸ್ಕಾಂ ಅಧಿಕಾರಿಗಳನ್ನು, ಶ್ರೀ ಮಠದ ಅರ್ಚಕರನ್ನು, ರಥೋತ್ಸವ ಸೇವಕರನ್ನು, ಮತ್ತು ಜಾತ್ರಾ ಕಮಿಟಿ ಹಿರಿಯರನ್ನು, ಸನ್ಮಾನಿಸಿ ಗೌರವಿಸಲಾಯಿತು. ಈ ಸನ್ಮಾನ ಸಮಾರಂಭ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಾತ್ರಾ ಕಮಿಟಿ ಅಧ್ಯಕ್ಷ ರವಿಗೌಡ ಪಾಟೀಲ ವಹಿಸಿದ್ದರು, ಲಕ್ಷ್ಮಣಗೌಡ ಪಾಟೀಲ, ಮಹಾಂತೇಶ ಹಿಟ್ಟಿನಮಠ, ಕೃಷ್ಣಗೌಡ ಪಾಟೀಲ, ಲಕ್ಕಪ್ಪ ಚೆಮಕೇರಿ, ಬಸವರಾಜ ಪಶ್ಚಾಪುರ, ಮಹಾಲಿಂಗಪ್ಪ ತಟ್ಟಿಮನಿ, ವಿಜೂಗೌಡ ಪಾಟೀಲ, ವಿಜಯ ಕುಳ್ಳೊಳ್ಳಿ, ಮಹಾಂತೇಶ ಘಟ್ನಟ್ಟಿ, ಅರುಣಗೌಡ ಪಾಟೀಲ, ಬಸವರಾಜ ಘಂಟಿ, ಕಲ್ಲಪ್ಪ ಚಿಂಚಲಿ, ಅರವಿಂದ ಮಾಲಬಸುರಿ ಸೇರಿ ಹಲವರು ವೇದಿಕೆ ಮೇಲೆ ಉಪಸ್ಥಿತರಿದ್ದರು. ಪತ್ರಕರ್ತ ಚಂದ್ರು ಮೊರೆ ನಿರೂಪಿಸಿ, ವಂದಿಸಿದರು.