ಆಪರೇಷನ್ ಸಿಂಧೂರ ಮೂಲಕ ಸೈನ್ಯದ ಶಕ್ತಿ ವಿಶ್ವಕ್ಕೆ ಪರಿಚಯ

| Published : Jul 27 2025, 12:02 AM IST

ಆಪರೇಷನ್ ಸಿಂಧೂರ ಮೂಲಕ ಸೈನ್ಯದ ಶಕ್ತಿ ವಿಶ್ವಕ್ಕೆ ಪರಿಚಯ
Share this Article
  • FB
  • TW
  • Linkdin
  • Email

ಸಾರಾಂಶ

ಕಾರ್ಗಿಲ್ ಯುದ್ಧದ ವಿಜಯದಿಂದ ಸ್ವತಂತ್ರ ಭಾರತದಲ್ಲಿ ಈಡೀ ಜಗತ್ತಿಗೆ ಭಾರದ ಸೈನಿಕರ ಶಕ್ತಿ ಎನೆಂಬುದನು ತೋರಿಸಿಕೊಟ್ಟಿದೆ

ಬ್ಯಾಡಗಿ: ಆಪರೇಷನ್ ಸಿಂಧೂರ ಮೂಲಕ ಭಾರತೀಯ ಸೈನ್ಯದ ಶಕ್ತಿ ವಿಶ್ವಕ್ಕೆ ಪರಿಚಯಿಸಲಾಗಿದೆ, ಅದರಲ್ಲೂ ಆತ್ಮ ನಿರ್ಭರ ಯೋಜನೆಯಡಿ ನಿರ್ಮಿಸಿದ ಬ್ರಹ್ಮೋಸ್ ಕ್ಷಿಪಣಿ ಜಗತ್ತನ್ನೇ ಬೆರಗಾಗಿಸಿದ್ದು ಯುದ್ದದ ಸಂದರ್ಭ ಸ್ವಾವಲಂಬಿಯಾಗಿ ಎದುರಿಸುವ ಶಕ್ತಿ ನೀಡಿದೆ ಎಂದು ಬಿಜೆಪಿ ತಾಲೂಕಾಧ್ಯಕ್ಷ ಎನ್.ಎಸ್. ಬಟ್ಟಲಕಟ್ಟಿ ತಿಳಿಸಿದರು.

ಕಾರ್ಗಿಲ್ ವಿಜಯ ದಿವಸ ಅಂಗವಾಗಿ ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಶನಿವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾಜಿ ಸೈನಿಕರನ್ನು ಸನ್ಮಾನಿಸಿ ಮಾತನಾಡಿದರು.

ಕಾರ್ಗಿಲ್ ಯುದ್ಧದ ವಿಜಯದಿಂದ ಸ್ವತಂತ್ರ ಭಾರತದಲ್ಲಿ ಈಡೀ ಜಗತ್ತಿಗೆ ಭಾರದ ಸೈನಿಕರ ಶಕ್ತಿ ಎನೆಂಬುದನು ತೋರಿಸಿಕೊಟ್ಟಿದೆ, ನಮ್ಮ ಸೈನಿಕರ ತ್ಯಾಗ ಬಲಿದಾನಗಳಿಂದ ಅಂತಿಮವಾಗಿ ವಿರೋಧಿ ಪಾಕಿಸ್ತಾನವನ್ನು ಮಂಡಿಯೂರಿವಂತೆ ಮಾಡಿದೆ ಎಂದರು.

ಹುನ್ನಾರ:

ಪುರಸಭೆ ಉಪಾಧ್ಯಕ್ಷ ಸುಭಾಸ ಮಾಳಗಿ ಮಾತನಾಡಿ, ಪಾಕ್ ತನ್ನ ಕುತಂತ್ರಿ ಬುದ್ಧಿಯನ್ನು ಮತ್ತೊಮ್ಮೆ ತೋರಿಸಿ ಗುಳ್ಳೆನರಿಯಂತೆ ಭಾರತದ ಕಾರ್ಗಿಲ್ ವಶಪಡಿಕೊಂಡು ಭಾರತ ಮೇಲೆ ಪ್ರಭುತ್ವ ಸಾಧಿಸಲು ಮುಂದಾಗಿತ್ತು, ಇದನ್ನು ಅರಿತ ಭಾರತೀಯ ಸೈನಿಕರು ಅತ್ಯಂತ ಕಡಿಮೆ ಸಮಯದಲ್ಲಿ ಆಧುನಿಕ ಶಸ್ತ್ರಾಸ್ತ್ರಗಳಿಲ್ಲದೇ ಕ್ಲಿಷ್ಟ,ಸನ್ನಿವೇಶ ಹಾಗೂ ಪ್ರದೇಶದಲ್ಲಿ ವಿರಾವೇಷದಿಂದ ಹೋರಾಡಿ ಭಾರತದ ಸಾರ್ವಭೌಮ ಅಧಿಕಾರ ಕಸಿದುಕೊಳ್ಳುವ ಹುನ್ನಾರ ನಡೆಸಿದ್ದ ಪಾಕಿಸ್ತಾನವನ್ನು ಹಿಮ್ಮೆಟ್ಟಿಸಿದೆ ಎಂದರು.

ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರಣ್ಣ ಶೆಟ್ಟರ ಮಾತನಾಡಿ, ಭಾರತದ ಯುದ್ಧದ ಇತಿಹಾಸದಲ್ಲಿ ಕಾರ್ಗಿಲ್ ಯುದ್ಧವು ಅತ್ಯಂತ ಕ್ಲಿಷ್ಟಕರವಾಗಿತ್ತು, ನಮ್ಮ ಸೈನಿಕರು 0 ಸೆಂಟಿಗ್ರೇಡ ಉಷ್ಟಾಂಶ ಕೊರೆಯುವ ಛಳಿಯಲ್ಲಿ ಯುದ್ಧ ನಿಭಾಯಿಸಿದ್ದು ಅತ್ಯಂತ ಶ್ಲಾಘನೀಯವಾಗಿದ್ದು ಯುದ್ಧ ಸಮಯದಲ್ಲಿ ಮಡಿದ ಸೈನಿಕರ ಕುಟುಂಬಗಳಿಗೆ ಸಾಂತ್ವನ ತಿಳಿಸಿದರು.

ಇದೇ ಸಂದರ್ಭದಲ್ಲಿ ಮಾಜಿ ಸೈನಿಕರಾದ ಮಹದೇವಪ್ಪ ಬಣಕಾರ ಹಾಗೂ ರಾಜಶೇಖರ ಹೊಸಳ್ಳಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ವೇಳೆ ಪುರಸಭೆ ಸದಸ್ಯರಾದ ಕಲಾವತಿ ಬಡಿಗೇರ, ಗಾಯತ್ರಿ ರಾಯ್ಕರ, ಸರೋಜಾ ಉಳ್ಳಾಗಡ್ಡಿ, ಫಕ್ಕೀರಮ್ಮ ಛಲವಾದಿ, ವಿಜಯ ಭರತ ಬಳ್ಳಾರಿ, ಎಸ್.ಎನ್. ಯಮನಕ್ಕವರ, ಸುರೇಶ ಅಸಾದಿ, ಸುರೇಶ ಉದ್ಯೋಗಣ್ಣನವರ, ಜ್ಯೋತಿ ಕುದರಿಹಾಳ, ಗುತ್ತೆಮ್ಮ ಮಾಳಗಿ, ಪರಶುರಾಮ ಉಜನಿಕೊಪ್ಪ, ವಿರೇಶ ಅಂಗಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.