ಉಗ್ರರರ ನಾಶಕ್ಕೆ ಆಪರೇಷನ ಸಿಂದೂರ ನಿಲ್ಲಿಸಬಾರದಿತ್ತು: ಸಿದ್ದರಾಮಯ್ಯ

| Published : May 17 2025, 01:43 AM IST

ಉಗ್ರರರ ನಾಶಕ್ಕೆ ಆಪರೇಷನ ಸಿಂದೂರ ನಿಲ್ಲಿಸಬಾರದಿತ್ತು: ಸಿದ್ದರಾಮಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಕಾಶ್ಮಿರದಲ್ಲಿ ಉಗ್ರಗಾಮಿಗಳಿಗೆ ಬೆಂಬಲ ನೀಡುತ್ತಿರುವವರು ಯಾರು. ಪೆಹಲ್ಗಾಮ್‌ನಲ್ಲಿ 26 ಜನರ ಅಮಾಯಕರನ್ನು ಭಯೋತ್ಪಾದಕರು ಕೊಂದು ಹಾಕಿದ್ದರು. ಇವರಿಗೆ ಸಹಾಯ ಮಾಡಿದ್ದು ಪಾಕಿಸ್ತಾನದವರು. ಹೀಗಾಗಿ, ಉಗ್ರರರನ್ನು ಸೆದೆ ಬಡಿಯಲು ಆಪರೇಷನ್‌ ಸಿಂದೂರ ಮೂಲಕ ಅವಕಾಶ ಸಿಕ್ಕಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಕೊಪ್ಪಳ:

ಪಹಲ್ಗಾಮನಲ್ಲಿ 26 ಜನ ಅಮಾಯಕರನ್ನು ಕೊಂದು ಹಾಕಿದ್ದ ಉಗ್ರರರನ್ನು ಸರ್ವನಾಶ ಮಾಡಲು ಆಪರೇಷನ್‌ ಸಿಂದೂರ ಮೂಲಕ ಅವಕಾಶ ಸಿಕ್ಕಿತ್ತು. ಹೀಗಾಗಿ ಈ ಆಪರೇಷನ್‌ ಸಿಂದೂರ ನಿಲ್ಲಿಸಬಾರದಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ತಾಲೂಕಿನ ಬಸಾಪುರ ಗ್ರಾಮದ ಬಳಿಯ ಏರೋಡ್ರೋಮ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಶ್ಮಿರದಲ್ಲಿ ಉಗ್ರಗಾಮಿಗಳಿಗೆ ಬೆಂಬಲ ನೀಡುತ್ತಿರುವವರು ಯಾರು. ಪೆಹಲ್ಗಾಮ್‌ನಲ್ಲಿ 26 ಜನರ ಅಮಾಯಕರನ್ನು ಭಯೋತ್ಪಾದಕರು ಕೊಂದು ಹಾಕಿದ್ದರು. ಇವರಿಗೆ ಸಹಾಯ ಮಾಡಿದ್ದು ಪಾಕಿಸ್ತಾನದವರು. ಹೀಗಾಗಿ, ಉಗ್ರರರನ್ನು ಸೆದೆ ಬಡಿಯಲು ಒಂದು ಅವಕಾಶ ಸಿಕ್ಕಿತ್ತು ಎಂದು ಹೇಳಿದರು.

ನಾನು ಈ ಹಿಂದೆಯೂ ಯುದ್ಧ ಬೇಡ ಎಂದು ಹೇಳಿರಲಿಲ್ಲ. ಅನಿವಾರ್ಯವಾದರೇ ಯುದ್ಧ ಮಾಡಬೇಕು ಎಂದಿದ್ದೆ. ನಮ್ಮ ಸಾರ್ವಭೌಮಕ್ಕೆ ಧಕ್ಕೆ ಬಂದರೆ ಸುಮ್ಮನೇ ಇರಲು ಆಗಲ್ಲ. ಆದರೆ, ಅದನ್ನೇ ನಾನು ಯುದ್ಧ ಬೇಡ ಎಂದಿದ್ದೇನೆ ಎಂದು ಅರ್ಥೈಸಲಾಯಿತು ಎಂದರು.

ಕದನ ವಿರಾಮ ನನ್ನಿಂದಲೇ ಆಯಿತು ಎಂದು ಅಮೆರಿಕ ಅಧ್ಯಕ್ಷ ಡೋನಾಲ್ಡ್‌ ಟ್ರಂಪ್‌ ಹೇಳಿದ್ದರು. ಇದೀಗ ಉಲ್ಟಾ ಹೊಡೆದಿದ್ದಾರೆ. ಹಾಗಾದರೆ ಅವರು ಮೊದಲು ಹೇಳಿದ್ದೇ ನಿಜ ಎನಿಸುತ್ತದೆ ಎಂದಿರುವ ಸಿದ್ದರಾಮಯ್ಯ, ನಾನು ಬಿಜೆಪಿ ಮತ್ತು ಆರ್‌ಎಸ್‌ಎಸ್ ಬೆಂಬಲಿಸಲ್ಲ. ನನ್ನ 50 ವರ್ಷಗಳ ರಾಜಕೀಯದುದ್ದಕ್ಕೂ ಅವರನ್ನು ವಿರೋಧಿಸುತ್ತಲೇ ಬಂದಿದ್ದೇನೆ. ಹೀಗಿರುವಾಗ ಗಂಗಾವತಿಯಲ್ಲಿ ಸ್ಪರ್ಧಿಸಿದ್ದ ಗಾಲಿ ಜನಾರ್ದನರೆಡ್ಡಿಯನ್ನು ಏಕೆ ಬೆಂಬಲಿಸುತ್ತೇನೆ ಎಂದು ಪ್ರಶ್ನಿಸಿದರು. ಗಂಗಾವತಿ ಚುನಾವಣೆಯಲ್ಲಿ ನಾನು ರೆಡ್ಡಿ ಬೆಂಬಲಿಸಿದ್ದೇನೆ ಎಂದು ಹೇಳಿದ್ದರೆ ಅದು ಶುದ್ಧ ಸುಳ್ಳು ಎಂದರು.ಗಣಿ ಅಕ್ರಮದ ವಿರುದ್ಧ ನಾನು ಪ್ರತಿಪಕ್ಷದ ಸ್ಥಾನದಲ್ಲಿದ್ದಾಗ ಸವಾಲು ಸ್ವೀಕರಿಸಿ ಬಳ್ಳಾರಿ ವರೆಗೂ ಪಾದಯಾತ್ರೆ ಮಾಡಿದ್ದೆ. ನನ್ನ ವಿರುದ್ಧ ಯಡಿಯೂರಪ್ಪ ಸೇರಿದಂತೆ ಅನೇಕರು ಮುಗಿಬಿದ್ದಿದ್ದರು. ಆಗ ನಾವು ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟ ಮಾಡಿದ್ದೇವು. ಈಗ ನ್ಯಾಯಾಲಯದ ಶಿಕ್ಷೆ ನೀಡಿದೆ ಎಂದು ಹೇಳಿದರು.ಗಂಗಾವತಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವೇ ಗೆಲ್ಲುತ್ತದೆ. ಅದರಲ್ಲಿ ಅನುಮಾನವೇ ಇಲ್ಲ. 2023ರಲ್ಲಿ ನಡೆದ ಚುನಾವಣೆಯಲ್ಲಿ ಪಕ್ಷದಿಂದ ಇಕ್ಬಾಲ್ ಅನ್ಸಾರಿ ಸ್ಪರ್ಧಿಸಿದ್ದರು. ಈಗ ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಯಾರಾಗಬೇಕು ಎಂದು ಪಕ್ಷ ತೀರ್ಮಾನಿಸುತ್ತದೆ ಎಂದರು. ಅನ್ಸಾರಿ ನಾನೇ ಅಭ್ಯರ್ಥಿ ಎಂದು ಹೇಳಿಕೊಳ್ಳುತ್ತಿದ್ದಾರೆ ಎನ್ನುವ ಪ್ರಶ್ನೆಗೆ, ಪಕ್ಷ ಈ ಕುರಿತು ತೀರ್ಮಾನಿಸುತ್ತದೆ ಎಂದರು.

ಬೆಂಗಳೂರನ್ನು ಆಡಳಿತದ ದೃಷ್ಟಿಯಿಂದ ವಿಭಜಿಸುವ ಯೋಜನೆ ಮಾಡಿದ್ದೇ ಬಿಜೆಪಿ. ಈಗ ವಿರೋಧ ಮಾಡುತ್ತಿದ್ದಾರೆ. ಗ್ರೇಟರ್ ಬೆಂಗಳೂರು ಹಾಗೆ ಇರುತ್ತದೆ. ಸುರೇಶಕುಮಾರ ಅವರು ಸಚಿವರಾಗಿದ್ದ ವೇಳೆಯಲ್ಲಿಯೇ ಇದನ್ನು ಯೋಚನೆ ಮಾಡಿದ್ದು ಎಂದರು.

ಆರ್. ಅಶೋಕ ಬೆಂಗಳೂರು ಕ್ವಾರ್ಟರ್ ಮಾಡಲಾಗುತ್ತಿದೆ ಎಂದಿದ್ದಾರೆ ಎನ್ನುವ ಪ್ರಶ್ನೆಗೆ, ಅವರಿಗೆ ಗ್ರೇಟರ್ ಬೆಂಗಳೂರು ನೆನಪಾಗುವುದೇ ಇಲ್ಲ, ಕ್ವಾರ್ಟರ್ ಮಾತ್ರ ನೆನಪಾಗುತ್ತದೆ ಎಂದು ತಿರುಗೇಟು ನೀಡಿದರು.

ಗೃಹಲಕ್ಷ್ಮೀ ಸೇರಿದಂತೆ ಯಾವುದೇ ಹಣ ಬಾಕಿ ಇದ್ದರೂ ಅದು ಬರುತ್ತದೆ. ನಾವು ಬಜೆಟ್‌ನಲ್ಲಿಯೇ ಹಣ ಕಾಯ್ದಿರಿಸಿದ್ದೇವೆ ಎಂದರು.