ಆಪರೇಷನ್ ಸಿಂದೂರ ಯಶಸ್ವಿ; ಬೆಳ್ಳಿ ರಥೋತ್ಸವ

| Published : May 09 2025, 12:30 AM IST

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಅವರ ದಿಟ್ಟ ನಿಲುವಿನಿಂದ ಪಾಕಿಸ್ತಾನದ ಮೇಲೆ ಆಪರೇಷನ್ ಸಿಂದೂರ ಹೆಸರಿನಲ್ಲಿ ದಾಳಿ ನಡೆಸಿ ಯಶಸ್ವಿಯಾಗಿದೆ. ಈ ನಿಟ್ಟಿನಲ್ಲಿ ಪ್ರಧಾನಿ ಕೈ ಬಲಪಡಿಸಲು ವಿಜಯೋತ್ಸವ ಆಚರಿಸಲಾಗುತ್ತದೆ. ಈ ಮೂಲಕ ಭಾರತೀಯ ಸೈನಿಕರಿಗೆ ಧೈರ್ಯ ತುಂಬೋಣ.

ಗಂಗಾವತಿ:ಪಾಕಿಸ್ತಾನ ವಿರುದ್ಧ ನಡೆಸಿದ ಆಪರೇಷನ್ ಸಿಂದೂರ ಯಶಸ್ವಿಯಾದ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಶ್ರೀಚನ್ನಬಸವಸ್ವಾಮಿ ಮಠದಲ್ಲಿ ಚನ್ನಬಸವ ಸ್ವಾಮಿಯ ಬೆಳ್ಳಿ ರಥೋತ್ಸವ ಜರುಗಿತು. ಚನ್ನಬಸವಸ್ವಾಮಿ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ತೇರನ್ನು ಮಠದ ಸುತ್ತಲೂ ಕಾರ್ಯಕರ್ತರು ಎಳೆದು ಜಯ ಘೋಷ ಹಾಕಿದರು.

ಈ ವೇಳೆ ಮಾತನಾಡಿದ ಮಾಜಿ ಶಾಸಕ ಪರಣ್ಣ ಮುನವಳ್ಳಿ, ಪ್ರಧಾನಿ ನರೇಂದ್ರ ಮೋದಿ ಅವರ ದಿಟ್ಟ ನಿಲುವಿನಿಂದ ಪಾಕಿಸ್ತಾನದ ಮೇಲೆ ಆಪರೇಷನ್ ಸಿಂದೂರ ಹೆಸರಿನಲ್ಲಿ ದಾಳಿ ನಡೆಸಿ ಯಶಸ್ವಿಯಾಗಿದೆ. ಈ ನಿಟ್ಟಿನಲ್ಲಿ ಪ್ರಧಾನಿ ಕೈ ಬಲಪಡಿಸಲು ವಿಜಯೋತ್ಸವ ಆಚರಿಸಲಾಗುತ್ತದೆ. ಈ ಮೂಲಕ ಭಾರತೀಯ ಸೈನಿಕರಿಗೆ ಧೈರ್ಯ ತುಂಬೋಣ ಎಂದರು.ಈ ವೇಳೆ ಮಾಜಿ ಸಂಸದ ಶಿವರಾಮ ಗೌಡ, ವಿರೂಪಾಕ್ಷ ಸಿಂಗನಾಳ, ಎಚ್.ಎಂ. ಸಿದ್ದರಾಮಯ್ಯ ಸ್ವಾಮಿ, ನಗರಸಭೆ ಅಧ್ಯಕ್ಷೆ ಹೀರಾ ಬಾಯಿ, ವಾಸು ನವಲಿ. ಕಾಶಿನಾಥ್ ಚಿತ್ರ ಗಾರ ಸೇರಿದಂತೆ ಇತರರು ಭಾಗವಹಿಸಿದ್ದರು.