ಆಪರೇಷನ್‌ ಸಿಂದೂರನಿಂದ ವಿಶ್ವಕ್ಕೆ ಭಾರತದ ಶಕ್ತಿಯ ಪರಿಚಯವಾಗಿದೆ. ಅಮಾಯಕ ಹಿಂದು ಪ್ರವಾಸಿಗರನ್ನು ಹತ್ಯೆ ಮಾಡಿದ ಭಯೋತ್ಪಾದರಿಗೆ ತಕ್ಕಪಾಠ ಕಲಿಸುವಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಫಲವಾಗಿದೆ. ನಮ್ಮನ್ನು ಕೆಣಕಿದರೆ ಬಿಡುವುದಿಲ್ಲ. ನಿಮ್ಮ ಮನೆಗೆ ನುಗ್ಗಿ ಹೊಡೆಯುತ್ತೇವೆ ಎಂಬ ಸಂದೇಶ ವಿಶ್ವಕ್ಕೆ ನೀಡುವಲ್ಲಿ ಯಶಸ್ವಿಯಾಗಿದೆ ಎಂದು ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಹೇಳಿದರು.

ಕನ್ನಡಪ್ರಭ ವಾರ್ತೆ ಜಮಖಂಡಿ

ಆಪರೇಷನ್‌ ಸಿಂದೂರನಿಂದ ವಿಶ್ವಕ್ಕೆ ಭಾರತದ ಶಕ್ತಿಯ ಪರಿಚಯವಾಗಿದೆ. ಅಮಾಯಕ ಹಿಂದು ಪ್ರವಾಸಿಗರನ್ನು ಹತ್ಯೆ ಮಾಡಿದ ಭಯೋತ್ಪಾದರಿಗೆ ತಕ್ಕಪಾಠ ಕಲಿಸುವಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಫಲವಾಗಿದೆ. ನಮ್ಮನ್ನು ಕೆಣಕಿದರೆ ಬಿಡುವುದಿಲ್ಲ. ನಿಮ್ಮ ಮನೆಗೆ ನುಗ್ಗಿ ಹೊಡೆಯುತ್ತೇವೆ ಎಂಬ ಸಂದೇಶ ವಿಶ್ವಕ್ಕೆ ನೀಡುವಲ್ಲಿ ಯಶಸ್ವಿಯಾಗಿದೆ ಎಂದು ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಹೇಳಿದರು. ನಗರದಲ್ಲಿ ಸೋಮವಾರ ಬಿಜೆಪಿ, ನಿವೃತ್ತ ಸೈನಿಕರ ಸಂಘ, ವಿಎಚ್‌ಪಿ, ಸಂಘ ಪರಿವಾರ, ಐಎಂಎ, ವಕೀಲರ ಸಂಘ, ಅಖಿಲ ಭಾರತ ವಿದ್ಯಾರ್ಥಿ ಪರಷತ್‌ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ತಿರಂಗಾ ಯಾತ್ರೆ ಉದ್ದೇಶಿಸಿ ಮಾತನಾಡಿದರು.

ಕೇಂದ್ರ ಸರ್ಕಾರ ಸಿಂದೂರ ಅಳಸಿ ಹಾಕಿದ ಭಯೋತ್ಪಾದಕರನ್ನು ಆಪರೇಷನ್‌ ಸಿಂದೂರ ಹೆಸರಲ್ಲೇ ಪ್ರತಿದಾಳಿ ನಡೆಸಿ ಹುಡುಕಿ ಕೊಲ್ಲಲಾಗಿದೆ ಎಂದ ಅವರು, ಗೋವಾ ಮಾಜಿ ಮುಖ್ಯಮಂತ್ರಿ ಮನೋಹರ ಪರಿಕ್ಕರ್‌ ಅವರು ರಕ್ಷಣಾ ಸಚಿವರಾಗಿದ್ದಾಗ ಎಸ್‌-400 ಯುದ್ಧ ವಿಮಾನಗಳನ್ನು ಸೈನ್ಯಕ್ಕೆ ಸೇರಿಸಿದ್ದರು. ಭಾರತೀಯ ಸೇನೆ ಅತ್ಯಾಧುನಿಕ ರಕ್ಷಣಾ ಸಾಮಗ್ರಿ ಹೊಂದಿರುವ ವಿಶ್ವದ 2ನೇ ಅತಿದೊಡ್ಡ ಸೇನೆಯಾಗಿದೆ ಎಂದು ತಿಳಿಸಿದರು.

ಶಾಸಕ ಜಗದೀಶ ಗುಡಗುಂಟಿ ಮಾತನಾಡಿ, ಭಾರತ ವಿಶ್ವದಲ್ಲಿಯೇ ಆರ್ಥಿಕವಾಗಿ 3ನೇ ಸ್ಥಾನದಲ್ಲಿದೆ. ನಮ್ಮನ್ನು ಕೆಣಕಿದ ಪಾಕಿಸ್ತಾನಕ್ಕೆ ಕೇಂದ್ರ ಸರ್ಕಾರ ಎಂದೂ ಊಹಿಸದಂತ ತಕ್ಕ ಪಾಠ ಕಲಿಸಿದೆ. ನಮ್ಮಲ್ಲಿರುವ ಸಾಮರ್ಥ್ಯವನ್ನು ವಿಶ್ವಕ್ಕೆ ಗೊತ್ತಾಗುವಂತೆ ಮಾಡಲಾಗಿದೆ. ಭಯೋತ್ಪಾದಕರ ನೆಲೆಗಳನ್ನು ಗುರುತಿಸಿ ಹೊಡೆದಿದ್ದು, ನಮ್ಮಲ್ಲೇ ತಯಾರಿಸಿದ ಯುದ್ಧ ಸಾಮಗ್ರಿ ಬಳಸಿದ್ದು ದೇಶ ಹೆಮ್ಮೆ ಪಡುವಂಥ ವಿಷಯವಾಗಿದೆ ಎಂದ ಅವರು, ಭಾರತೀಯ ಸೇನೆಗೆ ದೇಶದ ಬೆಂಬಲವಿದೆ ಎಂದು ತೋರಿಸಲು ತಿರಂಗಾ ಯಾತ್ರೆಯನ್ನು ದೇಶದಾದ್ಯಂತ ನಡೆಸಲಾಗುತ್ತಿದೆ ಎಂದು ಹೇಳಿದರು.

ಹುಲ್ಯಾಳದ ಗುರುದೇವಾಶ್ರಮದ ಹರ್ಷಾನಂದ ಸ್ವಾಮೀಜಿ, ಮುತ್ತಿನಕಂತಿ ಹಿರೇಮಠದ ಶಿವಲಿಂಗ ಪಂಡಿತಾರಾಧ್ಯ ಸ್ವಾಮೀಜಿ, ಕುಂಚನೂರಿನ ಮಾದುಲಿಂಗ ಸ್ವಾಮೀಜಿ, ಓಲೆಮಠದ ಆನಂದ ದೇವರು, ಸೈನಿಕರಾದ ಕುರಣಿ ಮಾತನಾಡಿದರು.

ಆಲಗೂರು ಗ್ರಾಮದ ಲಕ್ಷ್ಣಣ ಮುತ್ಯಾ, ಕೃಷ್ಣಾವಧೂತರು, ಲಿಂಗನೂರಿನ ಶಿವಪುತ್ರಾವಧೂತರು, ವಿಧಾನ ಪರಿಷತ್‌ ಮಾಜಿ ಸದಸ್ಯ ಜಿ.ಎಸ್‌. ನ್ಯಾಮಗೌಡ, ಜಿಲ್ಲಾಧ್ಯಕ್ಷೆ ಡಾ.ವಿಜಯಲಕ್ಷ್ಮೀ ತುಂಗಳ, ಮುಖಂಡರಾದ ನಾಗಪ್ಪ ಸನದಿ, ಏಗಪ್ಪ ಸವದಿ, ಅಜಯ ಕಡಪಟ್ಟಿ ಮಹದೇವ ನ್ಯಾಮಗೌಡ, ಉಮೇಶ ಸಿದ್ಧರೆಡ್ಡಿ, ಸಾಗರ ಜಂಬಗಿ, ಶ್ರೀಧರ ಕಂಬಿ, ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ರಮೇಶ ಶಿರೋಳ, ವಕೀಲರ ಸಂಘದ ರಘು, ವಿನೋದ ಬಿರಾದಾರ, ರಾಜುಗೌಡ ಪಾಟೀಲ, ಸುರೇಶಗೌಡ ಪಾಟೀಲ, ಬಸವರಾಜ ಬಿರಾದಾರ, ಶಶಿಕಾಂತ ವಿಶ್ವಬ್ರಾಹ್ಮಣ, ಗಣೇಶ ಶಿರಗಣ್ಣವರ, ಧರೆಪ್ಪಗುಗ್ಗರಿ, ರಾಜಾಸಾಬ ಕಡಕೋಳ,ಪರಸು ದಿಟ್ಟಿ, ಸುಚಿತ್ರಾ ಬುತಡಾ, ರಾಜೇಶ್ವರಿ ಹಿರೇಮಠ, ಗೀತಾ ಸೂರ್ಯವಂಶಿ, ಹೀರಾ ಜಾಧವ, ಪ್ರಭು ಜನವಾಡ, ವಿನಾಯಕ ಪವಾರ, ಹೀರಾ ಜಾಧವ, ಶ್ರೀಶೈಲ ಗಡಾದ, ಸಂಜೋತಾ ಗೊರನಾಳ, ಸೇರಿದಂತೆ ಹಲವರು ಯಾತ್ರೆಯಲ್ಲಿ ಭಾಗವಹಿಸಿದ್ದರು.

ಸುರಿಯುವ ಮಳೆಯನ್ನು ಲೆಕ್ಕಿಸದೇ ವಿದ್ಯಾರ್ಥಿಗಳು, ಮುಖಂಡರು ನಗರದ ಪ್ರಮುಖ ಬೀದಿಗಳಲ್ಲಿ ಯಾತ್ರೆ ಕೈಗೊಂಡರು. ಭಾರತಮಾತೆಯ ಭಾವಚಿತ್ರ, ನೂರು ಮೀಟರ್‌ ಉದ್ದದ ತ್ರಿವರ್ಣ ಧ್ವಜ ಯಾತ್ರೆಯ ಆಕರ್ಷಣೆಯಾಗಿದ್ದವು. ಹಳೆಯ ತಹಸೀಲ್ದಾರ ಕಚೇರಿಯಿಂದ ಪ್ರಾರಂಭಗೊಂಡು ನಗರದ ಪ್ರಮುಖ ಬೀದಿಗಳ ಮೂಲಕ ದೇಸಾಯಿ ವೃತ್ತದವರೆಗೆ ಯಾತ್ರೆ ನಡೆಯಿತು. ಪ್ರದೀಪ ಮೆಟಗುಡ್ಡ ನಿರೂಪಿಸಿದರು, ಮಲ್ಲುದಾನಗೌಡ ವಂದಿಸಿದರು.