ಜೈಲಿನಲ್ಲಿ ಬದಲಾವಣೆಗೆ ಅವಕಾಶ: ಎಸ್ಪಿ ನಿಂಬರಗಿ

| Published : Aug 30 2025, 01:02 AM IST

ಜೈಲಿನಲ್ಲಿ ಬದಲಾವಣೆಗೆ ಅವಕಾಶ: ಎಸ್ಪಿ ನಿಂಬರಗಿ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಜೈಲಿನಲ್ಲಿರುವುದು ಶಿಕ್ಷೆ ಎನ್ನುವುದಕ್ಕಿಂತ ಬದಲಾವಣೆಗೆ ಅವಕಾಶ ಎಂದುಕೊಳ್ಳಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಸಲಹೆ ನೀಡಿದರು

ಕನ್ನಡಪ್ರಭ ವಾರ್ತೆ ವಿಜಯಪುರ

ಜೈಲಿನಲ್ಲಿರುವುದು ಶಿಕ್ಷೆ ಎನ್ನುವುದಕ್ಕಿಂತ ಬದಲಾವಣೆಗೆ ಅವಕಾಶ ಎಂದುಕೊಳ್ಳಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಸಲಹೆ ನೀಡಿದರು.ನಗರದ ದರ್ಗಾ ರಸ್ತೆಯ ಜೈಲಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಕಾರಾಗೃಹ ಇಲಾಖೆ ಮತ್ತು ಕೇಂದ್ರ ಕಾರಾಗೃಹ ಸಹಯೋಗದೊಂದಿಗೆ ಏರ್ಪಡಿಸಿರುವ ಕಾರಾಗೃಹವಾಸಿಗಳಿಗೆ ಸಾಹಿತ್ಯ ಕಮ್ಮಟದ 2ನೇ ದಿನದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಡಿವೈಎಸ್ಪಿ ಬಸವರಾಜ ಯಲಿಗಾರ ಮಾತನಾಡಿ, ಬಸವಣ್ಣನವರ ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ ಎನ್ನುವ ವಚನದಲ್ಲಿ ಸಪ್ತಶೀಲ ತತ್ವಗಳಿವೆ. ಈ ತತ್ವಗಳನ್ನು ಅಳವಡಿಸಿಕೊಂಡರೆ ಅಂತರಂಗ, ಬಹಿರಂಗ ಶುದ್ಧಿಯಾಗುತ್ತದೆ. ಜೊತೆಗೆ ಸಂಸ್ಕಾರಕ್ಕೆ ಸಪ್ತಶೀಲ ಗುಣಗಳು ಅಗತ್ಯ ಎಂದರು.ಬನಹಟ್ಟಿ ಸರ್ಕಾರಿ ಪಿಯು ಕಾಲೇಜಿನ ಪ್ರಾಚಾರ್ಯೆ ಚಂದ್ರಪ್ರಭಾ ಬಾಗಲಕೋಟ ಮಾತನಾಡಿ, ತತ್ವಪದಗಳು ನಮ್ಮ ಬದುಕಿನ ಕನ್ನಡಿ ಇದ್ದ ಹಾಗೆ. ನಮ್ಮೊಳಗನ್ನು ನಮಗೆ ಪರಿಚಯಿಸುತ್ತವೆ ಎಂದರು.ಲೇಖಕ ಶಂಕರ ‌ಬೈಚಬಾಳ ಮಾತನಾಡಿ, ಅಂಗೈಯಗಲ ಕಣ, ಹೊರಚೆಲ್ಲಿದ ರಾಶಿ, 5 ಮಂದಿ ಮುರಿತಾರ, 32 ಮಂದಿ ತುಳಿತಾರ ಎನ್ನುವುದು ಹಂತಿಗೆ ಹೋಲಿಸಿ ಹೇಳುತ್ತಾರೆ. ಇದು ಉಣ್ಣುವ ಪ್ರಕ್ರಿಯೆಯೂ ಹೌದು ಎಂದರು.ಜೈಲಿನ ಅಧೀಕ್ಷಕರಾದ ಬಿ.ಎಂ.ಕೊಟ್ರೇಶ ಹಾಗೂ ಸಹಾಯಕ ಅಧೀಕ್ಷಕ ಅಭಿಜಿತ ವೇದಿಕೆ ಮೇಲಿದ್ದರು‌. ಕಮ್ಮಟದ ಸಂಚಾಲಕ ಗಣೇಶ ಅಮೀನಗಡ ಸ್ವಾಗತಿಸಿದರು. ಶಕೀಲಾ ನದಾಫ್ ಕಾರ್ಯಕ್ರಮ ನಿರೂಪಿಸಿದರು.