ಹಿಂದೂಗಳನ್ನು ವಿರೋಧಿಸುವುದು ಕಾಂಗ್ರೆಸ್ಸಿನ ಡಿಎನ್ಎದಲ್ಲೇ ಇದೆ: ಸಿಟಿ ರವಿ

| Published : Jan 06 2024, 02:00 AM IST / Updated: Jan 06 2024, 06:01 PM IST

ಹಿಂದೂಗಳನ್ನು ವಿರೋಧಿಸುವುದು ಕಾಂಗ್ರೆಸ್ಸಿನ ಡಿಎನ್ಎದಲ್ಲೇ ಇದೆ: ಸಿಟಿ ರವಿ
Share this Article
  • FB
  • TW
  • Linkdin
  • Email

ಸಾರಾಂಶ

ಹಿಂದೂಗಳನ್ನು ವಿರೋಧ ಮಾಡುವುದು ಕಾಂಗ್ರೆಸ್ ಪಕ್ಷದ ಡಿಎನ್‌ಎಯಲ್ಲಿಯೇ ಇದೆ. ಅವರು ಯಾವಾಗಲೂ ಹಿಂದೂಗಳ ಮೇಲೆ ಸೇಡು ತೀರಿಸಿಕೊಳ್ಳುವುದು, ಬೆದರಿಸುವುದನ್ನು ಮಾಡುತ್ತಾ ಬಂದಿದ್ದಾರೆ. ಇಂಥದ್ದಕ್ಕೆಲ್ಲ ನಾವು ಬೆದರಲ್ಲ ಮತ್ತು ಬಗ್ಗಲ್ಲ ಎಂದು ಬಿಜೆಪಿ ನಾಯಕ ಸಿ.ಟಿ. ರವಿ ಕಿಡಿಕಾರಿದರು.

ಕೊಪ್ಪಳ: ಹಿಂದೂಗಳನ್ನು ವಿರೋಧ ಮಾಡುವುದು ಕಾಂಗ್ರೆಸ್ ಪಕ್ಷದ ಡಿಎನ್‌ಎಯಲ್ಲಿಯೇ ಇದೆ. ಅವರು ಯಾವಾಗಲೂ ಹಿಂದೂಗಳ ಮೇಲೆ ಸೇಡು ತೀರಿಸಿಕೊಳ್ಳುವುದು, ಬೆದರಿಸುವುದನ್ನು ಮಾಡುತ್ತಾ ಬಂದಿದ್ದಾರೆ. ಇಂಥದ್ದಕ್ಕೆಲ್ಲ ನಾವು ಬೆದರಲ್ಲ ಮತ್ತು ಬಗ್ಗಲ್ಲ ಎಂದು ಬಿಜೆಪಿ ನಾಯಕ ಸಿ.ಟಿ. ರವಿ ಕಿಡಿಕಾರಿದರು.ಶುಕ್ರವಾರ ಇಲ್ಲಿನ ಗವಿಮಠಕ್ಕೆ ಭೇಟಿ ನೀಡಿ, ಶ್ರೀಗಳ ಆಶೀರ್ವಾದ ಪಡೆದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ರಾಮಮಂದಿರ ಉದ್ಘಾಟನೆ ವೇಳೆ ಕರಸೇವಕರನ್ನು ಬೆದರಿಸುವ ತಂತ್ರ ಮಾಡುತ್ತಿದ್ದಾರೆ. 32 ವರ್ಷಗಳ ಕಾಲ ಇವರು ಕಡ್ಲೆಪುರಿ ತಿನ್ನುತ್ತಿದ್ರಾ? ಇಷ್ಟು ವರ್ಷಗಳ ಕಾಲವೂ ಶ್ರೀಕಾಂತ ಪೂಜಾರಿ ಸೇರಿದಂತೆ ಕರಸೇವಕರು ಇಲ್ಲಿಯೇ ಇದ್ದಾರೆ. ಈಗ ಅವರನ್ನು ಬಂಧಿಸುವುದು ಎಂದರೆ ಏನರ್ಥ? ಅಷ್ಟಕ್ಕೂ ಈಗ ಬಂಧಿಸಿರುವುದು ಯಾವುದೇ ಬೇರೆ ಕೇಸ್‌ನಲ್ಲಿ ಅಲ್ಲ, ಅಯೋಧ್ಯೆಗಾಗಿ ಹೋರಾಟ ಮಾಡಿದ ಪ್ರಕರಣಕ್ಕಾಗಿಯೇ ಇವರನ್ನು ಬಂಧಿಸಿದ್ದಾರೆ ಎನ್ನುವುದು ಮುಖ್ಯಮಂತ್ರಿಗೆ ಗೊತ್ತಿರಲಿ ಎಂದು ಕಿಡಿಕಾರಿದರು.

ನಾನು ಪ್ರಯಾಣ ಮಾಡುತ್ತಿದ್ದ ಕಾರ್ ಅಪಘಾತವಾಗಿರುವುದು ನಿಜ. ಆದರೆ, ನಾನು ಚಾಲನೆ ಮಾಡುತ್ತಿರಲಿಲ್ಲ ಎನ್ನುವುದು ಈಗಾಗಲೇ ತನಿಖೆಯಲ್ಲಿ ಗೊತ್ತಾಗಿದೆ. ಸಿಸಿ ಕ್ಯಾಮೆರಾಗಳಲ್ಲಿಯೂ ಬಯಲಾಗಿದೆ. ಇಷ್ಟಾದರೂ ಪುನಃ ಆ ಕೇಸಿನ ಕುರಿತು ಕಾಂಗ್ರೆಸ್ ಪಕ್ಷ ಅಧಿಕೃತವಾಗಿ ಟ್ವೀಟ್ ಮಾಡಿದೆ. 

ಇದನ್ನು ನಾನು ಸುಮ್ಮನೆ ಬಿಡುವುದಿಲ್ಲ. ಇಂಥ ಸುಳ್ಳು ಹೇಳಿಕೆಯ ವಿರುದ್ಧ ಕೂಡಲೇ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಮಾನಹಾನಿ ಕೇಸ್ ಹಾಕಲಾಗುವುದು ಎಂದರು.ಸುಳ್ಳು ಪತ್ತೆಗಾಗಿ ವೆಬ್‌ಗೆ ಕೋಟ್ಯಂತರ ರುಪಾಯಿ ನೀಡುತ್ತಿದ್ದಾರೆ. 

ಇದು ಸಾರ್ವಜನಿಕರ ದುಡ್ಡು. ಅವರು ಈ ಸುಳ್ಳು ಪತ್ತೆ ಮಾಡಲಿ ಎಂದು ಸವಾಲು ಹಾಕಿದರು.ಜಗದೀಶ ಶೆಟ್ಟರ್ ಈ ಮೊದಲು ನಮ್ಮ ಜೊತೆಯಲ್ಲಿಯೇ ಇದ್ದವರು. ಈಗ ಅವರು ಬೇರೆ ಪಕ್ಷಕ್ಕೆ ಹೋಗಿರಬಹುದು. ಹಾಗೆಂದ ಮಾತ್ರಕ್ಕೆ ದೇಶದ ಕುರಿತು ಮತ್ತು ಶ್ರೀರಾಮನ ಕುರಿತು ಇದ್ದ ಅವರ ನಂಬಿಕೆ ಬದಲಾಗಬಾರದು ಎಂದರು.

ಗೃಹ ಸಚಿವ ಡಾ.ಜಿ.ಪರಮೇಶ್ವರಗೆ ಈಗ ಜ್ಞಾನೋದಯವಾದಂತೆ ಕಾಣುತ್ತದೆ. ಕಾನೂನು ಎಲ್ಲರಿಗೂ ಒಂದೇ ಎಂದು ಹೇಳುವ ಅವರು, ಈ ಹಿಂದೆ ಡಿ.ಕೆ. ಶಿವಕುಮಾರ ಅವರನ್ನು ಬಂಧಿಸಿದಾಗ ಕಾಂಗ್ರೆಸ್ಸಿಗರು ಏಕೆ ರಾಜ್ಯಾದ್ಯಂತ ಪ್ರತಿಭಟಿಸಿದರು ಎಂದು ಪ್ರಶ್ನಿಸಿದರು. ನಿಮ್ಮ ಮೇಲೆ ಗೌರವ ಇದೆ, ಅದನ್ನು ಉಳಿಸಿಕೊಳ್ಳಿ ಎಂದು ತಾಕೀತು ಮಾಡಿದರು.