ಬ್ಯಾಂಕ್‌ ವಿರುದ್ಧ ರೈತ ಸಂಘ ಪ್ರತಿಭಟನೆ

| Published : Jan 17 2024, 01:48 AM IST

ಬ್ಯಾಂಕ್‌ ವಿರುದ್ಧ ರೈತ ಸಂಘ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ರೈತನ ಮನೆಯನ್ನು ಕಾನೂನು ಬಾಹಿರವಾಗಿ ಏಕವ್ಯಕ್ತಿಗೆ ಹರಾಜು ಹಾಕುವ ಮೂಲಕ ಇಡೀ ಕುಟುಂಬವನ್ನು ಬೀದಿಗೆ ತಳ್ಳಿದ್ದಾರೆ. ಬ್ಯಾಂಕಿನ ಈ ರೀತಿಯ ವಸೂಲಾತಿ ಕ್ರಮ ಖಂಡಿಸಿ, ರೈತನ ಆಸ್ತಿ ಹರಾಜು ಹಾಕಿರುವುದನ್ನು ರದ್ದುಪಡಿಸಿ ಸಾಲವನ್ನು ಮರುಪಾವತಿಸಲು ಅನುಕೂಲ ಮಾಡಿಕೊಡಬೇಕು ಎಂಬ ಆಗ್ರಹ

-ರಾಜ್ಯ ರೈತ ಸಂಘದ ಪದಾಧಿಕಾರಿಗಳಿಂದ ಕರ್ನಾಟಕ ಗ್ರಾಮೀಣ ಬ್ಯಾಂಕ್‌ ವಿರುದ್ಧ ಆಕ್ರೋಶ

ಕನ್ನಡಪ್ರಭ ವಾರ್ತೆ ಮೈಸೂರು

ಕರ್ನಾಟಕ ಗ್ರಾಮೀಣ ಬ್ಯಾಂಕ್ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಬ್ಯಾಂಕ್‌ ಪ್ರಧಾನ ಕಚೇರಿ ಎದುರು ಮಂಗಳವಾರ ಪ್ರತಿಭಟಿಸಿದರು.

ಕೆ.ಆರ್. ನಗರ ಕರ್ನಾಟಕ ಗ್ರಾಮೀಣ ಬ್ಯಾಂಕ್ ಶಾಖೆಯಲ್ಲಿ ಪಿಎಂಇಜಿಪಿ ಯೋಜನೆ ಮೂಲಕ 2013ರಲ್ಲಿ ದೊರೆಸ್ವಾಮಿ ಎಂಬವರು 15 ಲಕ್ಷ ಸಾಲ ಪಡೆದಿದ್ದು, ಅದಕ್ಕಾಗಿ ಕಳೆದ 2023ರ ಮಾ. 27 ರವರೆಗೆ 18.98 ಲಕ್ಷ ಪಾವತಿಸಿದ್ದರೂ ಬ್ಯಾಂಕಿನ ಆಡಳಿತ ಮಂಡಳಿಯಲ್ಲಿರುವ ಕೆಲವು ಅಧಿಕಾರಿಗಳು ರೈತನ ಆಸ್ತಿಯನ್ನು ಕಬಳಿಸುವ ಉದ್ದೇಶ ಹೊಂದಿದ್ದಾರೆ ಎಂದು ದೂರಿದರು.

ರೈತನ ಮನೆಯನ್ನು ಕಾನೂನು ಬಾಹಿರವಾಗಿ ಏಕವ್ಯಕ್ತಿಗೆ ಹರಾಜು ಹಾಕುವ ಮೂಲಕ ಇಡೀ ಕುಟುಂಬವನ್ನು ಬೀದಿಗೆ ತಳ್ಳಿದ್ದಾರೆ. ಬ್ಯಾಂಕಿನ ಈ ರೀತಿಯ ವಸೂಲಾತಿ ಕ್ರಮ ಖಂಡಿಸಿ, ರೈತನ ಆಸ್ತಿ ಹರಾಜು ಹಾಕಿರುವುದನ್ನು ರದ್ದುಪಡಿಸಿ ಸಾಲವನ್ನು ಮರುಪಾವತಿಸಲು ಅನುಕೂಲ ಮಾಡಿಕೊಡಬೇಕು ಎಂದು ಅವರು ಆಗ್ರಹಿಸಿದರು.

ಹುಣಸೂರು ತಾಲೂಕು ಹೆಜ್ಜೋಡ್ಲು ಗ್ರಾಮದ ಹೇಮಚಂದ್ರ, ಶರತ್ಚಂದ್ರ ಅವರು ಮನೆ ನಿರ್ಮಾಣಕ್ಕಾಗಿ ಬೆಂಗಳೂರಿನ ಚಿಕ್ಕಬಸ್ತಿ ಶಾಖೆಯಲ್ಲಿ ಪಡೆದ ಸಾಲದ ಮೇಲೆ ಅಧಿಕ ಬಡ್ಡಿ ಹಾಗೂ ಇತರೆ ವೆಚ್ಚ ಸೇರಿಸಿ ಹೆಚ್ಚು ವಸೂಲಿ ಮಾಡಿರುವುದನ್ನು ಕೈಬಿಡಬೇಕು ಎಂದು ಅವರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಸರ್ವೋದಯ ಕರ್ನಾಟಕ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಎನ್. ಗೌಡ, ನೇತ್ರಾವತಿ, ಪಿ. ಮರಂಕಯ್ಯ, ಕೆ. ಮಲ್ಲೇಶ್ ಮೊದಲಾದವರು ಇದ್ದರು.