ವಿಪಕ್ಷ ಶಾಸಕರು ಸಿಎಂ ಕೇಳಿ ಅನುದಾನ ಪಡೆಯಲಿ

| Published : Jul 23 2025, 01:46 AM IST

ಸಾರಾಂಶ

ಅಭಿವೃದ್ದಿಗೋಸ್ಕರ ಸಿಎಂ ಹತ್ತಿರ ಹೋಗಿ, ಅವರು ತಂದೆ ಸಮಾನರು, ಅವರ ಕಾಲಿಗೆ ನಮಸ್ಕಾರ ಹಾಕಿ ಪ್ರೀತಿಯಿಂದ ಕೇಳಬೇಕು, ಆದರೆ ಕಾಲಿಗೆ ನಮಸ್ಕಾರ ಹಾಕಿ ದುಡ್ಡು ತಗೋ ಅಂತಾ ಹೇಳಿಲ್ಲ. ವಿಪಕ್ಷಗಳ ಶಾಸಕರು ಹೋಗಿ ಕೇಳಿ ತೆಗೆದುಕೊಳ್ಳಲಿ, ಯಾರು ಬೇಡ ಅಂದವರು ಎಂಬುದು ಶಾಸಕ ಕೊತ್ತೂರು ಸ್ಪಷ್ಟನೆ

ಕನ್ನಡಪ್ರಭ ವಾರ್ತೆ ಕೋಲಾರಆಂಧ್ರ ಪ್ರದೇಶದಲ್ಲಿ ಈ ಹಿಂದೆ ಚಂದ್ರಬಾಬು ನಾಯ್ಡು ಸಿಎಂ ಅಗಿದ್ದಾಗ ವಿರೋಧ ಪಕ್ಷದ ಎಂಎಲ್‌ಎಗಳಿಗೆ ಕೆಎಲ್‌ಡಿ ಫಂಡ್ ಸಹ ನೀಡಿರಲಿಲ್ಲ, ನಾವು ಆ ರೀತಿ ಮಾಡಿಲ್ಲ, ಅದಕ್ಕೆ ವಿಪಕ್ಷಗಳ ಶಾಸಕರು ಖುಷಿ ಪಡಬೇಕು ಎಂದು ಶಾಸಕ ಕೊತ್ತೂರು ಮಂಜುನಾಥ್ ಟಾಂಗ್ ನೀಡಿದರು.ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಪಕ್ಷದ ಶಾಸಕರಿಗೆ ೨೫ ಕೋಟಿ ಅನುದಾನ ಕೊಟ್ಟಿದ್ದಾರೆ, ಮುಂದೆ ಕೊಡುತ್ತಾರೆ, ನಾವು ಸಿಎಂ ಬಳಿ ಹೋಗಿ ಎಷ್ಟು ಬೇಕು ಎಂದು ಕೇಳಿ ತಂಗೋಡಿದ್ದೀವಿ, ವಿಪಕ್ಷಗಳ ಶಾಸಕರು ಹೋಗಿ ಕೇಳಿ ತೆಗೆದುಕೊಳ್ಳಲಿ, ಯಾರು ಬೇಡ ಅಂದವರು ಎಂದರು.

ಸಿಎಂ ತಂದೆ ಸಮಾನ

ಕಾಲು ಹಿಡಿದು ಅನುದಾನ ಪಡೆಯಬೇಕೆಂಬ ಮುಳಬಾಗಲು ಶಾಸಕ ಸಮೃದ್ಧಿ ಮಂಜುನಾಥ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಅಭಿವೃದ್ದಿಗೋಸ್ಕರ ಸಿಎಂ ಹತ್ತಿರ ಹೋಗಿ, ಅವರು ತಂದೆ ಸಮಾನರು, ಅವರ ಕಾಲಿಗೆ ನಮಸ್ಕಾರ ಹಾಕಿ ಪ್ರೀತಿಯಿಂದ ಕೇಳಿ ಎಂದೆ, ಆದರೆ ಕಾಲಿಗೆ ನಮಸ್ಕಾರ ಹಾಕಿ ದುಡ್ಡು ತಗೋ ಅಂತಾ ಹೇಳಿಲ್ಲ ಎಂದರು. ಧರ್ಮಸ್ಥಳ ವಿವಾದದ ಬಗ್ಗೆ ಎಸ್‌ಐಟಿ ತನಿಖೆ ಕುರಿತು ಪ್ರತಿಕ್ರಿಸಿದ ಅವರು, ಧರ್ಮಸ್ಥಳದ ಬಗ್ಗೆ ನಮಗೆ ಗೊತ್ತಿಲ್ಲ, ಎಲ್ಲವೂ ಮಂಜುನಾಥಸ್ವಾಮಿ ನೋಡಿಕೊಳ್ಳಲಿ ಎಂದರು.