ಸಾರಾಂಶ
ಗಜೇಂದ್ರಗಡ: ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆ ಟೀಕಿಸುವುದರ ಜತೆಗೆ ಕೋಮುವಾದವನ್ನು ಮುನ್ನೆಲೆಗೆ ತರಲೆತ್ನಿಸಿದ ವಿಪಕ್ಷಗಳಿಗೆ ಉಪ ಚುನಾವಣೆಯಲ್ಲಿ ಜನತೆ ತಕ್ಕಪಾಠ ಕಲಿಸಿದ್ದಾರೆ ಎಂದು ತಾಪಂ ಮಾಜಿ ಉಪಾಧ್ಯಕ್ಷ ಶಶಿಧರ ಹೂಗಾರ ಹೇಳಿದರು.
ರಾಜ್ಯದಲ್ಲಿ ನಡೆದ ಉಪ ಚುನಾವಣೆಯಲ್ಲಿ ೩ವಿಧಾನಸಭಾ ಸ್ಥಾನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ ಹಿನ್ನೆಲೆ ಶನಿವಾರ ಪಟ್ಟಣದ ಕಾಲಕಾಲೇಶ್ವರ ವೃತ್ತದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮಾಚರಣೆಯಲ್ಲಿ ಮಾತನಾಡಿದರು.ರಾಜ್ಯದಲ್ಲಿ ಮಹಿಳೆಯರು, ಯುವಜನತೆ ಸೇರಿ ಸರ್ವ ಸಮುದಾಯಗಳ ಬಡಜನರ ಆರ್ಥಿಕ ಸ್ಥಿತಿ ಸುಧಾರಣೆಗಾಗಿ ಸಿಎಂ ಸಿದ್ದರಾಮಯ್ಯ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಕಾಂಗ್ರೆಸ್ ಎಂದರೆ ಜನಪರ ಹಾಗೂ ಭ್ರಷ್ಟಾಚಾರದ ವಿರುದ್ಧ ಆಡಳಿತ ನಡೆಸುತ್ತದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಕಾಂಗ್ರೆಸ್ ಸರ್ಕಾರದ ಜನಪರ ಯೋಜನೆಗಳ ಟೀಕಿಸುವುದರ ಜತೆಗೆ ಕೋಮುವಾದ ಮುನ್ನೆಲೆಗೆ ತರಲೆತ್ನಿಸಿದ ವಿಪಕ್ಷಗಳಿಗೆ ಉಪ ಚುನಾವಣೆಯಲ್ಲಿ ಮತದಾರರು ತಕ್ಕಪಾಠ ಕಲಿಸಿದ್ದಾರೆ ಎಂದರು.
ಮುಖಂಡ ಎಚ್.ಎಸ್. ಸೋಂಪುರ ಮಾತನಾಡಿ, ರಾಜ್ಯ ಜನನಾಯಕ ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಮೇಲೆ ಸುಳ್ಳು ಆರೋಪಗಳ ಮೂಲಕ ಜನತೆಗೆ ದಿಕ್ಕು ತಪ್ಪಿಸುವ ಕಾರ್ಯ ಮಾಡಿದ ಬಿಜೆಪಿ ಹಾಗೂ ಜೆಡಿಎಸ್‌ಗೆ ಚುನಾವಣೆಯಲ್ಲಿ ಸೋಲಿಸಿ ಕಾಂಗ್ರೆಸ್ ಸರ್ಕಾರವನ್ನು ಮತದಾರರು ಬೆಂಬಲಿಸಿದ್ದಾರೆ ಎಂದರು.ಪುರಸಭೆ ಸದಸ್ಯ ಶಿವರಾಜ ಘೋರ್ಪಡೆ, ನಾಮ ನಿರ್ದೇಶಿತ ಸದಸ್ಯ ಉಮೇಶ ರಾಠೋಡ ಮಾತನಾಡಿ, ಉಪ ಚುನಾವಣೆಯಲ್ಲಿ ಸುಳ್ಳು ಆರೋಪ ಹಾಗೂ ಅಬ್ಬರದ ಪ್ರಚಾರದಿಂದ ಚುನಾವಣೆ ಗೆಲ್ಲುತ್ತೇವೆ ಎಂದುಕೊಂಡಿದ್ದ ವಿಪಕ್ಷಗಳ ಅಭ್ಯರ್ಥಿಗಳನ್ನು ಮತದರಾರರು ತೀರಸ್ಕರಿಸಿ ಸಿಎಂ ಸಿದ್ದರಾಮಯ್ಯ ಸರ್ಕಾರವನ್ನು ಒಪ್ಪಿಕೊಂಡಿದ್ದಾರೆ ಎಂದರು.
ಪುರಸಭೆ ಸದಸ್ಯ ರಾಜು ಸಾಂಗ್ಲೀಕಾರ, ರವಿ ಗಡೇದವರ ಮಾತನಾಡಿ, ಪ್ರಧಾನಿ ಮೋದಿ ರಾಜ್ಯದ ಇಬ್ಬರು ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಟಿಕೆಟ್ ನೀಡಿ ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ವಿರುದ್ಧ ಮುಗಿಬಿದಿದ್ದರು. ಆದರೆ ರಾಜ್ಯದ ಉಪ ಚುನಾವಣೆಯಲ್ಲಿ ಮಾಜಿ ಸಿಎಂಗಳ ಮಕ್ಕಳಿಗೆ ಸೋಲೋಣಿಸಿ ಕಾಂಗ್ರೆಸ್ ಜನಪರ ಆಡಳಿತ ನೀಡುವದನ್ನು ಮುಂದುವರೆಸಲಿ ಎಂದು ಆರ್ಶೀವದಿಸಿದ್ದಾರೆ ಎಂದರು.ಈ ವೇಳೆ ಪುರಸಭೆ ಅಧ್ಯಕ್ಷ ಸುಭಾಸ ಮ್ಯಾಗೇರಿ, ಸ್ಥಾಯಿ ಸಮಿತಿ ಚೇರಮನ್ ಮುದಿಯಪ್ಪ ಮುಧೋಳ, ಸದಸ್ಯರಾದ ವೆಂಕಟೇಶ ಮುದ್ಗಲ್, ರಫಿಕ್ ತೋರಗಲ್, ಮುತ್ತಣ್ಣ ಮ್ಯಾಗೇರಿ ಹಾಗೂ ಶರಣಪ್ಪ ಚಳಗೇರಿ, ಸುಭಾನಸಾಬ ಆರಗಿದ್ದಿ, ದುರಗಪ್ಪ ಮುಧೋಳ ಅಪ್ಪು ಮತ್ತಿಕಟ್ಟಿ, ನಾಸಿರಅಲಿ ಸುರಪುರ, ಶ್ರೀಧರ ಗಂಜಿಗೌಡರ, ಅರಿಹಂತ ಬಾಗಮಾರ, ಮಲ್ಲಿಕಾರ್ಜುನ ಗಾರಗಿ, ತುಳಸಿನಾಥ ಮಾಳೊತ್ತರ, ಸಿದ್ದು ಗೊಂಗಡಶೆಟ್ಟಿಮಠ ಸೇರಿದಂತೆ ಇತರರು ಇದ್ದರು.