ಗುತ್ತಿಗೆ ಆಧಾರದಲ್ಲಿ ಕಂದಾಯ ಭೂಮಿ ಮಂಜೂರಿಗೆ ವಿರೋಧ

| Published : Mar 12 2024, 02:03 AM IST

ಗುತ್ತಿಗೆ ಆಧಾರದಲ್ಲಿ ಕಂದಾಯ ಭೂಮಿ ಮಂಜೂರಿಗೆ ವಿರೋಧ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀಮಂತರಿಗೆ ಲೀಸ್‌ಗೆ ಭೂಮಿ, ಬಡ ರೈತರಿಗೆ ಮಂಕುಬೂದಿ ಎಂಬ ಘೋಷಣೆಯೊಂದಿಗೆ ಸರ್ಕಾರದ ಕ್ರಮ ಖಂಡಿಸಿ ಜಿಲ್ಲೆಯ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಜಾಥ, ಮೆರವಣಿಗೆ ನಡೆಸಲು ಭೂ ಹಕ್ಕು ಹೋರಾಟ ಸಮಿತಿ ನಿರ್ಧರಿಸಿದೆ.

ಈ ಪ್ರಸ್ತಾವನೆಯನ್ನು ಸರ್ಕಾರ ಕೂಡಲೇ ಹಿಂಪಡೆಯಲು ಆಗ್ರಹ । ಅಂಬೇಡ್ಕರ್ ವೈಚಾರಿಕ ವೇದಿಕೆ ಜಿಲ್ಲಾಧ್ಯಕ್ಷ ಮಂಜುನಾಥ್‌ ಕೂದುವಳ್ಳಿ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಶ್ರೀಮಂತರಿಗೆ ಲೀಸ್‌ಗೆ ಭೂಮಿ, ಬಡ ರೈತರಿಗೆ ಮಂಕುಬೂದಿ ಎಂಬ ಘೋಷಣೆಯೊಂದಿಗೆ ಸರ್ಕಾರದ ಕ್ರಮ ಖಂಡಿಸಿ ಜಿಲ್ಲೆಯ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಜಾಥ, ಮೆರವಣಿಗೆ ನಡೆಸಲು ಭೂ ಹಕ್ಕು ಹೋರಾಟ ಸಮಿತಿ ನಿರ್ಧರಿಸಿದೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅಂಬೇಡ್ಕರ್ ವೈಚಾರಿಕ ವೇದಿಕೆ ಜಿಲ್ಲಾಧ್ಯಕ್ಷ ಮಂಜುನಾಥ್‌ ಕೂದುವಳ್ಳಿ, ನಿವೇಶನ, ಮನೆ ಹಕ್ಕು ಪತ್ರ, ಭೂಮಿ ಒತ್ತುವರಿ, ಮಂಜೂರಾತಿಗೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದರು. ಜಿಲ್ಲೆ ಸೇರಿದಂತೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಭೂ ಮಾಲೀಕರಿಗೆ 10 ಎಕರೆವರೆಗೂ ಭೂಮಿಯನ್ನು ಲೀಸ್ (ಗುತ್ತಿಗೆ) ಕೊಡಲು ಹೊರಟಿರುವ ರಾಜ್ಯ ಸರ್ಕಾರದ ಶ್ರಮವನ್ನು ಸಮಿತಿ ಖಂಡಿಸುತ್ತದೆ. ಈ ಪ್ರಸ್ತಾವನೆಯನ್ನು ಸರ್ಕಾರ ಕೂಡಲೇ ಹಿಂತೆಗೆದು ಕೊಳ್ಳಬೇಕೆಂದು ಆಗ್ರಹಿಸಿದರು. ಮಲೆನಾಡಿನ ಜಿಲ್ಲೆಗಳಲ್ಲಿ ಭೂ ಒತ್ತುವರಿ ಸಮಸ್ಯೆ ಗಂಭೀರವಾಗಿದ್ದು ಬಡವರು, ಸಣ್ಣ, ಮಧ್ಯಮ ರೈತರು ತಮ್ಮ ಭೂ ಹಿಡುವಳಿಯ ಜತೆಗೆ ಇಲ್ಲದವರು ಅರ್ಧ, ಒಂದು, ಹೆಚ್ಚೆಂದರೆ 3-4 ಎಕರೆ ಒತ್ತುವರಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಆದರೆ 10-20 ಎಕರೆ ತೋಟವಿದ್ದ ಪ್ಲಾಂಟರುಗಳು ತಮ್ಮ ಜಮೀನಿನ ಸುತ್ತಾ ಅದಕ್ಕೆ ಹೊಂದಿಕೊಂಡಿರುವ 10, 50, 100 ಎಕರೆವರೆಗೆ ಗುಡ್ಡ ಗುಡ್ಡಗಳಿಗೆ ಬೇಲಿ ಹಾಕಿ ಕಾಫಿ ಪ್ಲಾಂಟೇಷನ್ ಮಾಡಿಕೊಂಡಿದ್ದಾರೆ ಎಂದು ದೂರಿದರು. ಇಂತಹ ಭೂಮಾಲೀಕರ ಅಕ್ರಮ ಸಾಗುವಳಿಗೆ 10 ಎಕರೆವರೆಗೂ ಲೀಸ್ ಕೊಡಲು ಸರ್ಕಾರ ಹೊರಟಿದೆ. ಅದೇ ವೇಳೆ ಯಲ್ಲಿದ್ದ ಬಡವರು, ಸಣ್ಣ, ಅತೀ ಸಣ್ಣ ರೈತರು ಸಾಗುವಳಿ ಮಾಡಿಕೊಂಡ ಜಮೀನು ಬಗ್ಗೆ ಸರ್ಕಾರ ಯಾವ ನಿರ್ಣಯವನ್ನು ತೆಗೆದುಕೊಂಡಿಲ್ಲ ಎಂದು ಆರೋಪಿಸಿದರು. ಈ ನಮ್ಮ ಬೇಡಿಕೆ ಈಡೇರಿಸುವ ತನಕ ಹೋರಾಟ ಮುಂದುವರೆಸುತ್ತೇವೆ ಆದ್ದರಿಂದ ಜಿಲ್ಲೆಯ ಪ್ರಗತಿಪರ ಸಂಘಟನೆ ಮುಖಂಡರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟ ಯಶಸ್ವಿಗೂಳಿಸಬೇಕೆಂದು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ವಿವಿಧ ದಲಿತ ಪ್ರಗತಿಪರ ಸಂಘಟನೆಗಳ ಮುಖಂಡರಾದ ಮರ್ಲೆ ಅಣ್ಣಯ್ಯ, ಶ್ರೀನಿವಾಸ್ ದಂಟರಮಕ್ಕಿ, ಕೃಷ್ಣಮೂರ್ತಿ, ಐ.ಎಂ. ಪೂರ್ಣೇಶ್, ಹರೀಶ್ ನಲಿಕೆ, ಸುರೇಶ್, ರಮೇಶ್, ಹೊನ್ನೇಶ್, ಉಮೇಶ್‌ಕುಮಾರ್ ಇದ್ದರು.ಪೋಟೋ ಫೈಲ್‌ ನೇಮ್‌ 11 ಕೆಸಿಕೆಎಂ 3