ಕೊಪ್ಪಳ: ವಿದ್ಯುತ್ ಕ್ಷೇತ್ರದ ಖಾಸಗೀಕರಣ ವಿರೋಧಿಸಿ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ನಗರ ವಿಭಾಗದ ಅಧಿಕಾರಿ ಮತ್ತು ನೌಕರರು ಕವಿಪ್ರನಿ ನೌಕರ ಸಂಘ ಹಾಗೂ ನೌಕರರ ಅಧಿಕಾರಿಗಳು ಒಕ್ಕೂಟದಿಂದ ಆಕ್ಷೇಪಣೆ ಸಲ್ಲಿಸಿದರು.
ಸಂಘಟನಾ ಕಾರ್ಯದರ್ಶಿ ನಾಗರಾಜ ಗಾಯಕವಾಡ್, ಕೇಂದ್ರ ಸಮಿತಿಯ ಸದಸ್ಯ ಅನಾಳಪ್ಪ ಮಾತನಾಡಿ, ಟಾಟಾ ಕಂಪನಿಯ ಖಾಸಗೀಕರಣ ವಿರೋಧಿಸಿ ಮುಂದಿನ ಹೋರಾಟ ರೂಪರೇಷೆ ನಿಗದಿಪಡಿಸಲು ಸಭೆ ನಡೆಸುವ ಮೂಲಕ ಮುಂದಿನ ಉಗ್ರ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಕೇಂದ್ರ ಸಮಿತಿ ಆದೇಶದಂತೆ ಮುಂದಿನ ಹೋರಾಟಕ್ಕೆ ಸಜ್ಜಾಗುವಂತೆ ನಿರ್ಣಯ ಕೈಗೊಳ್ಳಲಾಯಿತು ಎಂದು ತಿಳಿಸಿದರು.ಕೊಪ್ಪಳ ವೃತ್ತದ ಅಧಿಕ್ಷಕ ಅಭಿಯಂತರರು, ಕಾರ್ಯನಿರ್ವಾಹಕ ಇಂಜನಿಯರ್‌ಗಳು, ಲೆಕ್ಕಾಧಿಕಾರಿಗಳು, ಅಭಿಯಂತರರು, ಲೆಕ್ಕಾಧಿಕಾರಿಗಳು, ಶಾಖಾಧಿಕಾರಿಗಳು, ಸಮಿತಿಯ ಪದಾಧಿಕಾರಿಗಳು, ಕಲ್ಯಾಣ ಸಂಸ್ಥೆಯ ವೃತ್ತದ ಸಂಘಟನಾ ಕಾರ್ಯದರ್ಶಿ, ಕೇಂದ್ರ ಕಾರ್ಯ ಸಮಿತಿ ಸದಸ್ಯರು, ಇಂಜಿನಿಯರ್ ಅಸೋಸಿಯೇಷನ್ ಕೇಂದ್ರ ಸಮಿತಿ ಸದಸ್ಯರು, ಅಧ್ಯಕ್ಷರು, ಕಾರ್ಯದರ್ಶಿಗಳು, ಲೆಕ್ಕಾಧಿಕಾರಿಗಳ ಸಂಘ ಕೇಂದ್ರ ಸಮಿತಿ ಸದಸ್ಯರು, ಅಧ್ಯಕ್ಷರು, ಕಾರ್ಯದರ್ಶಿಗಳು, ಡಿಪ್ಲೋಮಾ ಇಂಜಿನಿಯರ್ ಸಂಸ್ಥೆಯ ಕೇಂದ್ರ ಸಮಿತಿ ಸದಸ್ಯರು ಅಧ್ಯಕ್ಷರು ಕಾರ್ಯದರ್ಶಿಗಳು, ವೃತ್ತದ ಎಲ್ಲ ವೆಲ್ಫೇರ್ ಅಸೋಸಿಯೇಷನ ಅಧ್ಯಕ್ಷರು ಕಾರ್ಯದರ್ಶಿಗಳು, ಪಿಂಚಣಿದಾರರ ಸಂಘದ ಪದಾಧಿಕಾರಿಗಳು, ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರ ಸಂಘದ ಸದಸ್ಯರು, ರೈತ ಬಾಂಧವರು ಭಾಗವಹಿಸಿದ್ದರು.