ನರಸಿಂಹರಾಜಪುರಕೇಂದ್ರ ಸರ್ಕಾರ ಹೊರಡಿಸಿರುವ ಪರಿಸರ ಸೂಕ್ಷ್ಮ ಪ್ರದೇಶ ಕರುಡು ಅಧಿಸೂಚನೆಗೆ ವಿರೋಧಿಸಿ ನರಸಿಂಹರಾಜಪುರ ರೇಲ್ವೆ ಹೋರಾಟ ಸಮಿತಿಯವರು ಪಟ್ಟಣ ಪಂಚಾಯಿತಿಗೆ ಆಗಮಿಸಿದ್ದ ತರೀಕೆರೆ ಉಪ ವಿಭಾಗಾಧಿಕಾರಿ ನಟೇಶ್ ಗೆ ಬುಧವಾರ ಮನವಿ ಸಲ್ಲಿಸಿದರು.

ನರಸಿಂಹರಾಜಪುರ ರೇಲ್ವೆ ಹೋರಾಟ ಸಮಿತಿಯಿಂದ ತರೀಕರೆ ಉಪ ವಿಭಾಗಾಧಿಕಾರಿಗೆ ಮನವಿ

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ಕೇಂದ್ರ ಸರ್ಕಾರ ಹೊರಡಿಸಿರುವ ಪರಿಸರ ಸೂಕ್ಷ್ಮ ಪ್ರದೇಶ ಕರುಡು ಅಧಿಸೂಚನೆಗೆ ವಿರೋಧಿಸಿ ನರಸಿಂಹರಾಜಪುರ ರೇಲ್ವೆ ಹೋರಾಟ ಸಮಿತಿಯವರು ಪಟ್ಟಣ ಪಂಚಾಯಿತಿಗೆ ಆಗಮಿಸಿದ್ದ ತರೀಕೆರೆ ಉಪ ವಿಭಾಗಾಧಿಕಾರಿ ನಟೇಶ್ ಗೆ ಬುಧವಾರ ಮನವಿ ಸಲ್ಲಿಸಿದರು.

ಕೇಂದ್ರ ಸರ್ಕಾರ ಕಸ್ತೂರಿ ರಂಗನ್ ವರದಿ ಆಧಾರದ ಮೇಲೆ ಕರ್ನಾಟಕದ 20,668 ಚದರ ಕಿ.ಮೀ. ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಸೇರಿಸಿರುವ ಕರಡು ಅಧಿಸೂಚನೆ ಹೊರಡಿಸಿ ಉಳಿದ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ನಮ್ಮ ರಾಜ್ಯದ ಜಾಗ ತುಂಬಾ ಹೆಚ್ಚಾಗಿದೆ. ನರಸಿಂಹರಾಜಪುರ ತಾಲೂಕಿನ ಅರಳಿಕೊಪ್ಪ, ಬಾಳೆಹೊನ್ನೂರು, ಬೈರಾಪುರ, ದಂಡು ಬಿಟ್ಟಹಾರ, ದಾವಣ, ಗುಬ್ಬಿಗಾ ಸೇರಿದಂತೆ 30 ಹಳ್ಳಿಗಳು ಸೇರಿದೆ.ಈ ವರದಿಯೇ ಅವೈಜ್ಞಾನಿಕವಾಗಿದ್ದು ಭೌತಿಕ ಸಮೀಕ್ಷೆ ನಡೆಸದೆ, ಸ್ಥಳ ಪರಿಶೀಲನೆ ಮಾಡದೆ, ಸರ್ವೆ ನಂಬರ್ ಸಹ ಸೇರಿಸದೆ ಕೇವಲ ಉಪ ಗ್ರಹದ ಆಧಾರದ ಮೇಲೆ ರೈತರ ಕೃಷಿ ಭೂಮಿ, ಕಾಫಿ ತೋಟಗಳನ್ನೆಲ್ಲಾ ಪರಿಸರ ಸೂಕ್ಷ್ಮ ಪ್ರದೇಶ ಎಂದು ಸೇರಿಸಿದ್ದು ಮಲೆನಾಡಿನ ರೈತರ ಬದುಕು ಹಾಗೂ ದೈನಂದಿನ ಚಟುವಟಿಕೆಗಳಿಗೆ ತೊಂದರೆಯಾಗುತ್ತಿದೆ.ಅಲ್ಲದೆ ನರಸಿಂಹರಾಜಪುರದ ಹೊಸ ರೈಲು ಮಾರ್ಗದ ನಿರ್ಮಾಣಕ್ಕೂ ಈ ಪರಿಸರ ಸೂಕ್ಷ್ಮ ಪ್ರದೇಶದ ಕಟ್ಟುಪಾಡುಗಳು ತೊಡಕಾಗುವ ಸಾಧ್ಯತೆ ಹೆಚ್ಚಾಗಿರುವುದರಿಂದ ನರಸಿಂಹರಾಜಪುರ ರೇಲ್ವೆ ಹೋರಾಟ ಸಮಿತಿ ಸಹ ಆಕ್ಷೇಪಣೆ ಸಲ್ಲಿಸುತ್ತಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಮನವಿ ನೀಡುವ ಸಂದರ್ಭದಲ್ಲಿ ನರಸಿಂಹರಾಜಪುರ ರೇಲ್ವೆ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಮಂಜು. ಎನ್ ಗೌಡ, ಗೌರವ ಸಂಚಾಲಕ ಸತೀಶ ಆಚಾರ್, ಸಲಹಾ ಸಂಚಾಲಕ ಅಭಿನವ ಗಿರಿರಾಜ್, ಸಹ ಸಂಚಾಲಕ ಪಿ.ಜೆ. ವಿಜು, ಸಹಾಯಕ ಸಂಚಾಲಕ ಕಿರಣ ಆಚಾರ್ಯ, ಕಾರ್ಯ ಸಂಚಾಲಕ ಎಂ.ಎಸ್.ಅರ್ಜುನ್, ಆರ್ಥಿಕ ಸಂಚಾಲಕ ಸಾದತ್ ಸಮೀರ್, ಸಂಚಾಲಕರಾದ ದಿವಾಕರ್,ಯಲ್ಲಪ್ಪ ಇದ್ದರು.