ಸಾರಾಂಶ
- ಆಗ್ನೇಯ ಪದವೀಧರರ ಕ್ಷೇತ್ರ ಜೆಡಿಯು ಅಭ್ಯರ್ಥಿ ಡಾ. ಕೆ.ನಾಗರಾಜ ಮನವಿ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ವಿಧಾನ ಪರಿಷತ್‌ನ ಆಗ್ನೇಯ ಪದವೀಧರರ ಕ್ಷೇತ್ರಕ್ಕೆ 2026ರಲ್ಲಿ ನಡೆಯುವ ಚುನಾವಣೆಯಲ್ಲಿ ಜೆಡಿಯು ಅಭ್ಯರ್ಥಿಯಾಗಿ ತಾವು ಸ್ಪರ್ಧಿಸಲಿದ್ದು, ಅತಿಥಿ ಬೋಧರ ಸೇವೆ ಕಾಯಂಗೊಳಿಸುವುದು, ಹಳೇ ಪಿಂಚಣಿ ಜಾರಿ, ಪದವೀಧರರ ಸಮಸ್ಯೆ ಪರಿಹರಿಸುವುದು ತಮ್ಮ ಆದ್ಯತೆ ಎಂದು ಕ್ಷೇತ್ರದ ಸಂಯುಕ್ತ ಜನತಾದಳದ ಅಭ್ಯರ್ಥಿ, ಪಕ್ಷದ ಯುವ ಘಟಕ ರಾಜ್ಯಾಧ್ಯಕ್ಷ ಡಾ. ಕೆ.ನಾಗರಾಜ ಹೇಳಿದರು.ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳ ಪದವೀಧರರು ಮತದಾನ ಮಾಡುವ ಅರ್ಹತೆ ಹೊಂದಿದ್ದಾರೆ. ದಾವಣಗೆರೆ ಜಿಲ್ಲೆಯ ದಾವಣಗೆರೆ, ಹರಿಹರ, ಜಗಳೂರು ತಾಲೂಕಿನ ಮತದಾರರು ಕ್ಷೇತ್ರಕ್ಕೆ ಒಳಪಡಲಿದ್ದಾರೆ ಎಂದರು.
ಜೆಡಿಯು ನಡೆ ಉತ್ತಮ ಶಿಕ್ಷಣ, ಆರೋಗ್ಯ, ಆಡಳಿತ, ಕೃಷಿ, ಪರಿಸರ ಕಡೆಗೆ ಎನ್ನುವ ಕಾರ್ಯ ಕೈಗೊಳ್ಳಲಿದೆ. ಮುಂದಿನ ದಿನಗಳಲ್ಲಿ ಪಕ್ಷವು ಪ್ರಜಾಸತಾತ್ಮಕ ಆಡಳಿತ ನೀಡಲು ನಿಶ್ಚಿಯಿಸಿದೆ. ಅದರ ಭಾಗವಾಗಿ ಮೊದಲ ಹಂತದಲ್ಲಿ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ದಾವಣಗೆರೆ ಜಿಲ್ಲೆ ಆಯ್ಕೆ ಮಾಡಿಕೊಂಡಿದೆ. ಪ್ರತಿ ತಾಲೂಕು, ಹೋಬಳಿಮಟ್ಟದಲ್ಲಿ ಜನಸಂಪರ್ಕ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಉತ್ತಮ ರಾಜ್ಯ ನಿರ್ಮಾಣಕ್ಕೆ ಮತದಾರರು ಸಹಕರಿಸಬೇಕು ಎಂದು ಮನವಿ ಮಾಡಿದರು.ರಾಜ್ಯದಲ್ಲಿ ಸುಮಾರು 2.80 ಲಕ್ಷ ಸರ್ಕಾರಿ ಹುದ್ದೆಗಳು ವಿವಿಧ ಇಲಾಖೆಗಳಲ್ಲಿ ಖಾಲಿ ಇದ್ದು, ಅವುಗಳ ಭರ್ತಿಗೆ ಒತ್ತಾಯಿಸಲಾಗುವುದು. ಹೊಸ ಪಿಂಚಣಿ ವ್ಯವಸ್ಥೆ ಕೈಬಿಟ್ಟು, ಹಳೇ ಪಿಂಚಣಿ ವ್ಯವಸ್ಥೆ ಮರುಜಾರಿಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲಾಗುವುದು. ಸರ್ಕಾರಿ ನೌಕರರಿಗೆ ನಿಶ್ಚಿತ ಪಿಂಚಣಿ ಪದ್ಧತಿ ಮರುಜಾರಿಗೆ ನನ್ನು ಗುರಿಯಾಗಿದೆ. ಅತಿಥಿ ಉಪನ್ಯಾಸಕರಿಗೆ ಮತ್ತು ಶಿಕ್ಷಕರಿಗೆ ಸೇವಾ ಭದ್ರತೆ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ. ಎಲ್ಲರಿಗೂ ಜ್ಯೋತಿ ಸಂಜೀವಿನಿ ಯೋಜನೆ ಜಾರಿಗೊಳಿಸಲು ಪ್ರಯತ್ನಿಸುವೆ ಎಂದು ತಿಳಿಸಿದರು.
ಪ್ರತಿ ಜಿಲ್ಲಾ ಕೇಂದ್ರದಲ್ಲಿ ಉಚಿತ ಐಎಎಸ್, ಕೆಎಎಸ್ ತರಬೇತಿ ಕೇಂದ್ರ ಸ್ಥಾಪಿಸುವ ಉದ್ದೇಶವಿದೆ. ಗ್ರಾಮೀಣ ಪದವೀಧರರಿಗೆ ಸ್ವಉದ್ಯೋಗಕ್ಕೆ ಆದ್ಯತೆ, ಪ್ರೋತ್ಸಾಹ ಸೇರಿದಂತೆ ಹಲವಾರು ಉತ್ತಮ ಯೋಜನೆಗಳು ನಮ್ಮ ಮುಂದಿನ ಗುರಿಯಾಗಿದೆ. ಜೆಡಿಯುನಿಂದ ಆಗ್ನೇಯ ಪದವೀಧರರ ಕ್ಷೇತ್ರದ ಅಭ್ಯರ್ಥಿಯಾಗಿದೆ. ಕರ್ನಾಟಕ ಆಗ್ನೇಯ ಕ್ಷೇತ್ರದ ಪದವೀಧರರು ನನಗೆ ಬೆಂಬಲ ನೀಡಿ, ಪದವೀಧರರ ಕ್ಷೇತ್ರದಲ್ಲಿ ಉತ್ತಮ ಸೇವೆ ಮತ್ತು ಸರ್ವೋದಯ ಮಾಡಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದರು.ಎನ್‌ಡಿಎ ಮೈತ್ರಿ ಮುಂದುವರಿಕೆ:
ಜೆಡಿಯು ಎನ್‌ಡಿಎ ಭಾಗವಾಗಿದ್ದು, ಬಿಹಾರ ಚುನಾವಣೆಯಲ್ಲೂ ಎನ್‌ಡಿಎ ಮೈತ್ರಿಕೂಟ ಅಭೂತಪೂರ್ವ ಗೆಲುವು ಸಾಧಿಸಲಿದೆ. ಅದೇರೀತಿ ಕರ್ನಾಟಕದಲ್ಲೂ ಎನ್‌ಡಿಎ ಮೈತ್ರಿ ಮುಂದುವರಿಯಲಿದೆ. ಅದರ ಭಾಗವಾಗಿ ಆಗ್ನೇಯ ಪದವೀಧರ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲಿದ್ದೇನೆ. ಈಗಾಗಲೇ ನಮ್ಮ ಪಕ್ಷದ ರಾಜ್ಯಾಧ್ಯಕ್ಷ ಮಹಿಮಾ ಜೆ. ಪಟೇಲ್ ಸೇರಿದಂತೆ ನಮ್ಮೆಲ್ಲಾ ನಾಯಕರ ಜೊತೆಗೆ ರಾಜ್ಯಾದ್ಯಂತ ಪಕ್ಷ ಸಂಘಟನೆಯಲ್ಲೂ ಸಕ್ರಿಯರಾಗಿದ್ದೇವೆ ಎಂದು ಡಾ. ಕೆ.ನಾಗರಾಜ ಮಾಹಿತಿ ನೀಡಿದರು.ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಗಂಗೂರು ಮಾತನಾಡಿದರು, ಜಿಲ್ಲಾ ಮುಖಂಡರಾದ ಜಯಣ್ಣ, ಪ್ರಭು, ನೀಲಗಿರಿಯಪ್ಪ, ಶಿವಯೋಗಿ, ಶ್ರೀನಿವಾಸ, ಸಿದ್ದೇಶ, ಕುಮಾರ ಸ್ವಾಮಿ, ತಿಪ್ಪೇಸ್ವಾಮಿ, ಪ್ರದೀಪ ಇತರರು ಇದ್ದರು.
- - --28ಕೆಡಿವಿಜಿ4.ಜೆಪಿಜಿ:
ದಾವಣಗೆರೆಯಲ್ಲಿ ಮಂಗಳವಾರ ಜೆಡಿಯು ರಾಜ್ಯ ಯುವ ಘಟಕ ಅಧ್ಯಕ್ಷ, ಆಗ್ನೇಯ ಪದವೀಧರರ ಕ್ಷೇತ್ರದ ಅಭ್ಯರ್ಥಿ ಡಾ. ಕೆ.ನಾಗರಾಜ ಸುದ್ದಿಗೋಷ್ಠಿಯಲ್ಲಿ ಪಕ್ಷದ ಕುರಿತು ಮಾತನಾಡಿದರು.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))