ಚನ್ನಪಟ್ಟಣ: ತಾಲೂಕಿನ ಕೆಂಗಲ್ ಸಮೀಪದ ಪೌಳಿದೊಡ್ಡಿ ಗ್ರಾಮದ ಒರಾಕಲ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪ್ರಸಕ್ತ ಸಾಲಿನ ಸಿಇಟಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.

ಚನ್ನಪಟ್ಟಣ: ತಾಲೂಕಿನ ಕೆಂಗಲ್ ಸಮೀಪದ ಪೌಳಿದೊಡ್ಡಿ ಗ್ರಾಮದ ಒರಾಕಲ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪ್ರಸಕ್ತ ಸಾಲಿನ ಸಿಇಟಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಕೆ-ಸಿಇಟಿ ಫಲಿತಾಂಶದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಇಂಜಿನಿಯರಿಂಗ್, ಬಿಎಸ್ಸಿ ಕೃಷಿ, ಬಿವಿಎಸ್ ಮತ್ತು ಎಚ್‌ಎಚ್‌ಎಸ್(ಮೆಡಿಕಲ್ ಸೈನ್ಸ್) ವಿಭಾಗದಲ್ಲಿ ಉತ್ತಮ ರ್‍ಯಾಂಕಿಂಗ್ ಪಡೆದು ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ. ಇಂಜಿನಿಯರಿಂಗ್ ವಿಭಾಗದಲ್ಲಿ ಕಾಲೇಜಿನ ವಿದ್ಯಾರ್ಥಿ ಕಿಶೋರ್.ಬಿ ೧೪೨೬ನೇ ರ್‍ಯಾಂಕ್ ಗಳಿಸಿದ್ದಾನೆ. ದೀಪಕ್.ಸಿ ೩೩೨೨ನೇ ರ್‍ಯಾಂಕಿಂಗ್, ಭರತ್ ೩೩೫೨ನೇ ರ್‍ಯಾಂಕಿಂಗ್, ಪ್ರೇರಣಾ ೮೩೩೧ನೇ ರ್‍ಯಾಂಕಿಂಗ್ ಗಳಿಸುವ ಮೂಲಕ ಕಾಲೇಜಿನಲ್ಲೇ ಅತ್ಯುತ್ತಮ ರ್‍ಯಾಂಕಿಂಗ್ ಗಳಿಸಿದ್ದಾರೆ. ಪಶುವೈದ್ಯಕೀಯ (ಬಿವಿಎಸ್ಸಿ) ವಿಭಾಗದಲ್ಲಿ ಪ್ರೀತಮ್.ಎಂ ೧೦೬೪ನೇ ರ್‍ಯಾಂಕಿಂಗ್, ದೀಕ್ಷಾ.ಬಿ.ಎಂ ೧೧೬೮ನೇ ರ್‍ಯಾಂಕಿಂಗ್, ಕಿಶೋರ್ ಗೌಡ ಬಿ.ಎನ್.೨೩೮೪ನೇ ರ್‍ಯಾಂಕಿಂಗ್, ನಯನಾ ಸಿ.ಆರ್.೨೭೫೯ನೇ ರ್‍ಯಾಂಕಿಂಗ್, ಪ್ರೇರಣಾ ಜಿ.ಎನ್ ೩೮೯೨ ರ್‍ಯಾಂಕಿಂಗ್, ತ್ರಿಷಾ.ಎಂ.ಆರ್೬೮೮೭ನೇ ರ್‍ಯಾಂಕಿಂಗ್, ಪಡೆದಿದ್ದಾರೆ. ಬಿಎಸ್ಸಿ ಕೃಷಿ ವಿಭಾಗದಲ್ಲಿ ಸಹ ಕಾಲೇಜಿನ ವಿದ್ಯಾರ್ಥಿಗಳು ಸಾಧನೆ ಮಾಡಿದ್ದು, ಪ್ರೀತಮ್.ಎಂ ೧೧೯೫ನೇ ರ್‍ಯಾಂಕಿಂಗ್, ದೀಕ್ಷಾ.ಬಿ.ಎಂ ೧೬೩೯ನೇ ರ್‍ಯಾಂಕಿಂಗ್, ನಯನಾ ಸಿ.ಆರ್.೨೧೯೯ನೇ ರ್‍ಯಾಂಕಿಂಗ್, ಕಿಶೋರ್ ಗೌಡ.ಬಿ.ಎನ್. ೫೦೧೪ನೇ ರ್‍ಯಾಂಕಿಂಗ್,, ಕೃತಿಕಾ ವಿ.ಎನ್.೬೦೮೩ನೇ ರ್‍ಯಾಂಕಿಂಗ್, ಪಡೆದಿದ್ದಾರೆ. ಮೆಡಿಕಲ್ ಸೈನ್ಸ್ (ಎಎಚ್‌ಎಸ್)ವಿಭಾಗದಲ್ಲಿ ತ್ರಿಷಾ ಎಂ.ಆರ್.೩೬೫ನೇ ರ್‍ಯಾಂಕಿಂಗ್, ಪ್ರೇರಣಾ.ಜಿ.ಎಸ್. ೧೨೮೯ನೇ ರ್‍ಯಾಂಕಿಂಗ್,, ದೀಕ್ಷಾ.ಬಿ.ಎಂ. ೨೯೨೭ನೇ ರ್‍ಯಾಂಕಿಂಗ್, ಕಿಶೋರ್‌ಗೌಡ ಆರ್.ಎನ್೬೧೭೮ನೇ ರ್‍ಯಾಂಕಿಂಗ್ ಗಳಿಸಿದ್ದಾರೆ. ಉತ್ತಮ ರ್‍ಯಾಂಕಿಂಗ್ ಪಡೆಯುವ ಮೂಲಕ ಕಾಲೇಜಿನ ಕೀರ್ತಿಯನ್ನು ಹೆಚ್ಚಿರುವ ವಿದ್ಯಾರ್ಥಿಗಳನ್ನು ಒರಾಕಲ್ ಕಾಲೇಜಿನ ಅಧ್ಯಕ್ಷ ಕೆ.ಎಂ.ಶೇಖರ್, ಟ್ರಸ್ಟಿ ಶ್ವೇತಾ ಶೇಖರ್, ಪ್ರಾಂಶುಪಾಲ ಅಶೋಕ್. ಎಂ.ಎನ್ ಅಭಿನಂದಿಸಿದ್ದಾರೆ.ಪೊಟೋ೨:

ಪೊಟೋ೩:

ಪೊಟೋ೪:

ಪೊಟೋ೫:

ಪೊಟೋ೬:

ಪೊಟೋ೭:

ಪೊಟೋ೮:

ಪೊಟೋ೯:

ಪೊಟೋ೧೦: